Advertisement

ತೆರೆಗೆ ಆರು, ಅದರಲ್ಲಿ ಗೆಲ್ಲೋರು ಯಾರು?

09:56 AM Dec 06, 2019 | Nagendra Trasi |

ಹೊಸ ವರ್ಷ ಶುರುವಾಗಲು ಇನ್ನೇನು ಮೂರು ವಾರಗಳು ಬಾಕಿ ಉಳಿದಿವೆ. ಹೀಗಾಗಿ, ಈ ವರ್ಷವೇ ತಮ್ಮ ಚಿತ್ರಗಳನ್ನು ಬಿಡಗುಡೆ ಮಾಡಬೇಕು ಎಂಬ ಕಾರಣಕ್ಕೆ ಈಗಾಗಲೇ ಹಲವು ಕನ್ನಡ ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿವೆ. ಕಳೆದ ವಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬರೋಬ್ಬರಿ
ಹತ್ತು ಚಿತ್ರಗಳು ಬಿಡುಗಡೆಯಾಗಿದ್ದವು. ಈ ವಾರವೂ ಸಹ ಆರು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ.

Advertisement

ಹೌದು, ಹಾಗೆ ನೋಡಿದರೆ, ಈ ವಾರ ಬಿಡುಗಡೆಯಾಗುತ್ತಿರುವ ಆರು ಚಿತ್ರಗಳ ಪೈಕಿ “ಕಥಾ
ಸಂಗಮ’ ಚಿತ್ರವನ್ನು ಹೊರತುಪಡಿಸಿದರೆ, ಬಹುತೇಕ ಹೊಸಬರ ಚಿತ್ರಗಳೇ ಪ್ರೇಕ್ಷಕರ ಮುಂದೆ ಬರುತ್ತಿವೆ.

ರಿಷಭ್‌ಶೆಟ್ಟಿ ಅವರ ಬ್ಯಾನರ್‌ನಲ್ಲಿ ತಯಾರಾಗಿರುವ “ಕಥಾ ಸಂಗಮ’ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ, ಏಳು ಕಥೆಗಳನ್ನು ಹೊಂದಿರುವ ಚಿತ್ರ. ಅಷ್ಟೇ ಅಲ್ಲ, ಏಳು ಜನ ನಿರ್ದೇಶಕರು, ಏಳು ಜನ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ಒಂದೊಂದು ಕಥೆ ಕೂಡ ಹೊಸದೊಂದು ವಿಷಯ ಹೇಳುವ ಮೂಲಕ ನೋಡುಗರನ್ನು ಗೆಲ್ಲುತ್ತವೆ ಎಂಬ ನಂಬಿಕೆ ಚಿತ್ರತಂಡದ್ದು. ಹೊಸ ಪ್ರಯೋಗದ ಈ ಪ್ರಯತ್ನದಲ್ಲಿ ಪ್ರಕಾಶ್‌ ಬೆಳವಾಡಿ, ಹರಿಪ್ರಿಯಾ, ರಾಜ್‌ ಬಿ ಶೆಟ್ಟಿ, ಸೇರಿದಂತೆ ಅನೇಕ ನಟರು ಅಭಿನಯಿಸಿದ್ದಾರೆ.

ಇನ್ನು, ‘ಅಳಿದು ಉಳಿದವರು’ ಚಿತ್ರದಲ್ಲಿ ಆಶು ಬೇದ್ರ ಮತ್ತು ಸಂಗೀತಾ ಭಟ್‌ ನಟಿಸಿದ್ದಾರೆ. ಅರವಿಂದ್‌ ಶಾಸ್ತ್ರಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೊಂದು ಸಸ್ಪೆನ್ಸ್‌ -ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ “ಲೂಸಿಯಾ’ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ಕೂಡ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಉಳಿದಂತೆ ಹಾಸ್ಯ ಕಲಾವಿದ ಧರ್ಮಣ್ಣ ಹಾಗು ಇತರರು ನಟಿಸಿದ್ದಾರೆ. ಬಹುತೇಕ ಹೊಸಬರೇ ಸೇರಿ ಮಾಡಿರುವ “ಐ1′ ಚಿತ್ರ ಕೂಡ ತೆರೆಗೆ ಬರುತ್ತಿದ್ದು, ಇದು ಸಹ ಸಸ್ಪೆನ್ಸ್‌ -ಥ್ರಿಲ್ಲರ್‌ ಕಥಾಹಂದರ ಹೊಂದಿದೆ.

Advertisement

ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಕಿಶೋರ್‌, ಧೀರಜ್‌ ಪ್ರಸಾದ್‌, ರಂಜನ್‌ ಅಭಿನಯಿಸಿದ್ದಾರೆ. ಚಿತ್ರಕ್ಕೆ ಎಸ್‌.ರಾಜಕುಮಾರ್‌ ನಿರ್ದೇಶಕರು. ಶೈಲಜಾ ಪ್ರಕಾಶ್‌ ನಿರ್ಮಾಣವಿದೆ. ಇದರೊಂದಿಗೆ ಹಿರಿಯ ನಿರ್ದೇಶಕ ದಿನೇಶ್‌ ಬಾಬು ಅವರ ನಿರ್ದೇಶನದ “ಹಗಲು ಕನಸು’ ಚಿತ್ರ ಕೂಡ
ಬರುತ್ತಿದೆ. ಆನಂದ್‌ ನಾಯಕರಾದರೆ, ಸನಿಹಾ ಯಾದವ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಸುಮನ್‌ ನಗರ್‌ಕರ್‌ ನಿರ್ಮಾಣ ಮತ್ತು ನಟನೆಯ “ಬಬ್ರೂ’ ಚಿತ್ರ ಕೂಡ ಈ ವಾರ ತೆರೆಗೆ ಬರುತ್ತಿದ್ದು, ಈ ಚಿತ್ರ ಬಹುತೇಕ ಯುಎಸ್‌ಎನಲ್ಲೇ ಚಿತ್ರೀಕರಣಗೊಂಡಿದೆ. ಸುಜಯ್‌ ರಾಮಯ್ಯ ನಿರ್ದೇಶನದ ಈ ಚಿತ್ರ ಒಂದು ಜರ್ನಿ ಸುತ್ತ ಸಾಗಲಿದೆ. ಚಿತ್ರದಲ್ಲಿ “ಬಬ್ರೂ’ ಎಂಬ ಕಾರು ಕೂಡ
ಪ್ರಮುಖ ಪಾತ್ರ ವಹಿಸಿದೆ. ಚಿತ್ರದಲ್ಲಿ ಮಾಹಿ ಹಿರೇಮಠ, ಸನ್ನಿ, ಗಾನಭಟ್‌ ಸೇರಿದಂತೆ ಹಲವರು ನಟಿಸಿದ್ದಾರೆ. “19 ಏಜ್‌ ನಾನ್ಸೆನ್ಸ್‌’ ಎಂಬ ಇನ್ನೊಂದು ಚಿತ್ರದಲ್ಲೂ ಹೊಸಬರೇ ತುಂಬಿದ್ದಾರೆ.

ಗಿಣಿ ನಿರ್ದೇಶನದ ಈ ಚಿತ್ರದಲ್ಲಿ ಮನುಶ್‌ ಹೀರೋ. ಮಧುಮಿತ ನಾಯಕಿಯಾಗಿದ್ದಾರೆ. ಲೋಕೇಶ್‌ ಚಿತ್ರದ ನಿರ್ಮಾಪಕರು. ಇದೊಂದು ಟೀನೇಜ್‌ ಸ್ಟೋರಿಯಾಗಿದ್ದು, ಎಲ್ಲಾ ಅಂಶಗಳನ್ನೂ ಒಳಗೊಂಡಿದೆ ಎಂಬುದು ಚಿತ್ರತಂಡದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next