Advertisement

ಟೀನೇಜ್ ಫೋಟೋ ಹಂಚಿಕೊಂಡ ಮೋಹಕ ತಾರೆ…ಸಾಮಾಜಿಕ ಜಾಲತಾಣದಲ್ಲಿ ವೈರಲ್‌

11:50 AM Aug 03, 2022 | Team Udayavani |

ಬೆಂಗಳೂರು:ನಟಿ ರಮ್ಯಾ ಬಣ್ಣದ ಲೋಕದಿಂದ ದೂರ ಉಳಿದು ಕೆಲ ವರ್ಷಗಳೇ ಉರುಳಿವೆ. ಅವರು ಕಮ್‌ ಬ್ಯಾಕ್‌ ಮಾಡುತ್ತಾರೆ ಎನ್ನುವ ಸುದ್ದಿ ಆಗಾಗ ಅಲಲ್ಲಿ ಕೇಳಿ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೋಹಕ ತಾರೆ ರಮ್ಯಾ ಚಿತ್ರರಂಗದ ಜೊತೆಗಿನ ನಂಟನ್ನು ಮತ್ತೆ ಬೆಳೆಸಿಕೊಂಡಿದ್ದಾರೆ. ಹೊಸ ಚಿತ್ರದ ಟ್ರೇಲರ್‌,ಟೀಸರ್‌, ಪೋಸ್ಟರ್‌ ಗಳನ್ನು ಹಂಚಿಕೊಂಡು ಆ ತಂಡಕ್ಕೆ ಶುಭಾಶಯವನ್ನು ಕೋರುತ್ತಾರೆ.

Advertisement

ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಸದಾ ಸಕ್ರಿಯ. ಅವರು ಏನು ಪೋಸ್ಟ್‌ ಮಾಡಿದರೂ ಅದು ಅಭಿಮಾನಿಗಳಿಗೆ ಸಂತಸ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಯಾಂಡಲ್‌ ವುಡ್‌ ಕ್ವೀನ್‌ ತನ್ನ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಆಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ ಹುಡುಗಿ ರಮ್ಯಾ ತನ್ನ 18ನೇ ವಯಸ್ಸಿನ  ಹಳೆಯ ಐಡಿ ಕಾರ್ಡ್ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ತೋರಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೋಹಕ ತಾರೆ ತನ್ನ 23ನೇ ವಯಸ್ಸಿನಲ್ಲಿ ಅಪ್ಪು ಜೊತೆ ʼಅಭಿʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾದರು. ಆ ಬಳಿಕ ಅವರು ತನ್ನ ನಟನೆಯ ಮೂಲಕ ಬೇಡಿಕೆಯ ನಟಿಯಾಗಿ ಬೆಳೆದರು. ಸಾಲು ಸಾಲು ಚಿತ್ರಗಳು ಅವರನ್ನು ಇತರ ಚಿತ್ರರಂಗದಲ್ಲಿ ನಟಿಸುವಂತಹ ಅವಕಾಶ ಕೊಟ್ಟಿತು.

ರಮ್ಯಾ ಚಿತ್ರ ರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ. ಇತ್ತೀಚಿಗೆ ಅವರು ಡಾಲಿ ಧನಂಜಯ ಅವರ ʼಹೊಯ್ಸಳʼ ಚಿತ್ರದ ಸೆಟ್‌ ಗೆ ಭೇಟಿ ನೀಡಿದ್ದರು. ರಕ್ಷಿತ್‌ ಶೆಟ್ಟಿ ಅವರ ʼ777 ಚಾರ್ಲಿʼ ನೋಡಿ ಭಾವುಕರಾಗಿದ್ದರು.ಅವರು ಮತ್ತೆ ಬಣ್ಣದ ಲೋಕಕ್ಕೆ ಬರಲಿ ಎನ್ನುವುದು ಅಪಾರ ಅಭಿಮಾನಿಗಳ ಆಸೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next