ಬೆಂಗಳೂರು : ಹೊಂಬಾಳೆ ಫಿಲ್ಮ್ಸ್ ನ ಸೂಪರ್ ಹಿಟ್ ಸಿನಿಮಾ ʼಕಾಂತಾರʼ ಮುಂದುವರೆದ ಭಾಗದ ಕುರಿತು ಮೊದಲಿನಿಂದಲೇ ಹೈಪ್ ಹೆಚ್ಚಿದೆ. ಯುಗಾದಿ ಹಬ್ಬದ ಪ್ರಯುಕ್ತ ಚಿತ್ರ ತಂಡ ಬಿಗ್ ಅಪ್ಡೇಟ್ ವೊಂದನ್ನು ನೀಡಿ ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ʼಕಾಂತಾರʼ ಸಿನಿಮಾದ ಎರಡನೇ ಭಾಗದ ಚಿತ್ರೀಕರಣವನ್ನು ರಿಷಬ್ ಅವರು ಜೂನ್ ನಲ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಮಳೆಯ ದೃಶ್ಯಗಳು ಸಿನಿಮಾದಲ್ಲಿ ಬೇಕಾಗಿರುವುದರಿಂದ ಜೂನ್ ನಲ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಪ್ಯಾನ್ ಇಂಡಿಯಾದಲ್ಲಿ ಸಿನಿಮಾವನ್ನು 2024 ರ ಏಪ್ರಿಲ್ ಅಥವಾ ಮೇ ವೇಳೆಗೆ ರಿಲೀಸ್ ಮಾಡುವ ಯೋಜನೆ ನಮ್ಮದು ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನವೊಂದಲ್ಲಿ ಹೇಳಿದ್ದರು.
ಇದನ್ನೂ ಓದಿ: ಸೋನು ನಿಗಮ್ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR
ಇದಲ್ಲದೇ ಇತ್ತೀಚೆಗೆ ಸಿನಿಮಾದ 100 ವರ್ಷದ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ʼನೀವು ಈಗಾಗಲೇ ನೋಡಿರುವುದೇ ʼಕಾಂತಾರ -2ʼ ಮುಂದೆ ಬರುವುದು ʼಕಾಂತಾರʼ ಎಂದು ಹೇಳಿ ಬಿಗ್ ಅಪ್ಡೇಟ್ ವೊಂದನ್ನು ಕೊಟ್ಟಿದ್ದರು.
Related Articles
ಇದೀಗ ಯುಗಾದಿ ಹಬ್ಬದ ದಿನ ( ಮಾ. 22 ರಂದು) ʼಬರವಣಿಗೆಯ ಆದಿʼ ಎಂದು ಪೋಸ್ಟರ್ ಹಂಚಿಕೊಂಡು ಹಬ್ಬದ ಶುಭಾಶಯವನ್ನು ತಿಳಿಸಿದೆ. ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಅಮೋಘ ಕತೆಯನ್ನು ನಿಮ್ಮ ಮುಂದೆ ತರಲು ನಾವು ಕೌತುಕದಿಂದ ಕಾಯುತ್ತಿದ್ದೇವೆ ಎಂದು ಹೊಂಬಾಳೆ ಬರೆದುಕೊಂಡಿದೆ.
ʼಕಾಂತಾರ-2ʼ ವಿನ ಬರವಣಿಗೆ ಆರಂಭವಾದ ಬಗ್ಗೆ ಸಿನಿಮಾದ ಅಭಿಮಾನಿಗಳು ಖುಷ್ ಆಗಿದ್ದಾರೆ.