Advertisement

ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ಸಾವಿತ್ರಿ

03:18 PM Jan 10, 2021 | Team Udayavani |

ನಟಿ ತಾರಾ ಅನುರಾಧಾ, ವಿಜಯ ರಾಘವೇಂದ್ರ, ಊರ್ವಶಿ ರೈ, ಪ್ರಕಾಶ್‌ ಬೆಳವಾಡಿ, ಸಂಜು ಬಸಯ್ಯ (ಕಾಮಿಡಿ ಕಿಲಾಡಿಗಳು), ಬೇಬಿ ನೈಲಾ ಪ್ರಮೋದ್‌, ಸ್ವಾತಿ, ಮಾ. ಪುನೀತ್‌, ಮಾ. ಮಾನ್ವಿಕ್‌, ಮಾ. ಚಿನ್ಮಯ…, ಬೇಬಿ ಸಂಜನಾ ಮೊದಲಾದವರು
ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಸಾವಿತ್ರಿ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿತು.

Advertisement

ಸುಮಾರು 45ಕ್ಕೂ ಹೆಚ್ಚು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ “ಸಾವಿತ್ರಿ’ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ
ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಚಾಲನೆ ನೀಡಿದೆ.

“ಪಿಎನ್‌ಪಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸಾಫ್ಟ್ವೇರ್‌ ಉದ್ಯೋಗಿ ಪ್ರಶಾಂತ್‌ ಕುಮಾರ್‌ ಹೀಲಲಿಗೆ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಸ್‌. ದಿನೇಶ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಚಿತ್ರ ಸಾಹಿತಿ ಹೃದಯ ಶಿವ ಸಾಹಿತ್ಯ, ಸಂಭಾಷಣೆ ಬರೆದು ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ನಾಗಾರ್ಜುನ ಡಿ. ಛಾಯಾಗ್ರಹಣ, ಮನು ಸಂಕಲನವಿದೆ. ಕೌಟುಂಬಿಕ ಕಥಾಹಂದರದ ಜೊತೆಗೆ ಹಾರರ್‌ ಅಂಶಗಳನ್ನು ಹೊಂದಿರುವ “ಸಾವಿತ್ರಿ’ ಚಿತ್ರ ಇದೇ ವರ್ಷದ ಮಧ್ಯ ಭಾಗಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ:‘ದಾರಿ ತಪ್ಪಿದ್ದ’: ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟ ಸೈನಿಕನ ಬಿಡುಗಡೆಗೆ ಚೀನಾ ಮನವಿ

Advertisement

Udayavani is now on Telegram. Click here to join our channel and stay updated with the latest news.

Next