Advertisement

ಸ್ಯಾಂಡಲ್ ವುಡ್ ನಟ ಸೂರ್ಯೋದಯ ಪುತ್ರ ರಸ್ತೆ ಅಪಘಾತದಲ್ಲಿ ಸಾವು

01:48 PM Jul 03, 2021 | Team Udayavani |

ಬೆಂಗಳೂರು :  ಸ್ಯಾಂಡಲ್ ವುಡ್ ನಟ, ನಿರ್ದೇಶಕ ಸೂರ್ಯೋದಯ ಅವರ ಪುತ್ರ ಬೈಕ್​ನಲ್ಲಿ ತೆರಳುತ್ತಿದ್ದಾಗ ಟ್ಯಾಂಕರ್​ ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಬ್ಯಾಡರಹಳ್ಳಿ ನ್ಯೂ ಲಿಂಕ್ ರಸ್ತೆ ಬಳಿ ನಡೆದಿದೆ.

Advertisement

ನಟ ಸೂರ್ಯೋದಯ ಪುತ್ರ ಮಯೂರ್ (20) ಸಾವನ್ನಪ್ಪಿರುವ ಯುವಕ. ಸದ್ಯ ತಮ್ಮ ಮಗನನ್ನು ಕಳೆದುಕೊಂಡ  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ‌‌. ಅಪಘಾತ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಯಾಂಡಲ್ ವುಡ್ ನಟ ಸೂರ್ಯೋದಯ ಕೆಲವು ಚಿತ್ರಗಳಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದರು.  ಕನ್ನಡದ  ‘ಸ್ಟಾಲ್’ ಹಾಗೂ ‘ದೇಯಿ ಬೈದತಿ’ ಎಂಬ ತುಳು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next