Advertisement

ಗೋವಾ ಬೀಚ್‌ ನಲ್ಲಿ ಪಲ್ಟಿ ಹೊಡೆಯುವಾಗ ನಟ ದಿಗಂತ್‌ ಕತ್ತಿಗೆ ಬಲವಾದ ಪೆಟ್ಟು

04:06 PM Jun 21, 2022 | Team Udayavani |

ಬೆಂಗಳೂರು:  ಸ್ಯಾಂಡಲ್‌ ವುಡ್‌ ನಟ ದಿಗಂತ್‌ ಗೋವಾದ ಬೀಚ್‌ ನಲ್ಲಿ ಪಲ್ಟಿ ( ಸಮ್ಮರ್‌ ಶಾಟ್ಸ್) ಹೊಡೆಯುವ ವೇಳೆ ಕುತ್ತಿಗೆ‌, ಬೆನ್ನಿಗೆ ಬಲವಾದ ಪೆಟ್ಟ ಬಿದ್ದಿದೆ ಎಂದು ವರದಿಯಾಗಿದೆ.

Advertisement

ನಟ ದಿಗಂತ್‌, ಪತ್ನಿ ಐಂದ್ರಿರೇ ಸೇರಿದಂತೆ ಕುಟುಂಬ ಸಮೇತ ಕೆಲ ದಿನಗಳ ಹಿಂದೆ ಗೋವಾಕ್ಕೆ ಟ್ರಿಪ್‌ ಹೋಗಿದ್ದರು. ದಿಗಂತ್‌ ಬೀಚ್‌ ನಲ್ಲಿ ಮೋಜು – ಮಸ್ತಿ ಮಾಡುವ ವೇಳೆಯಲ್ಲಿ ಬ್ಯಾಕ್‌ ಫ್ಲಿಪ್‌ ಮಾಡಿದ್ದಾರೆ. ಈ ವೇಳೆ ಅವರ ಕುತ್ತಿಗೆ ಹಾಗೂ ಬೆನ್ನು ಮೂಳೆಗೆ ಬಲವಾದ ಏಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next