Advertisement
ರಾಜ್ಯ ಸರಕಾರ ಸಿಆರ್‌ಝಡ್ ಮರಳು ದಿಬ್ಬ ತೆರವುಗೊಳಿಸುವ ಬಗ್ಗೆ ಕೇಂದ್ರ ಸರಕಾರದಿಂದ ಸ್ಪಷ್ಟೀಕರಣ ಕೇಳಿತ್ತು. ಈಗ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸ್ಪಷ್ಟವಾದ ಸ್ಪಷ್ಟೀಕರಣವನ್ನು ರಾಜ್ಯ ಸರಕಾರಕ್ಕೆ ನೀಡಿದೆ.
“2011ರ ಮೊದಲಿನ ಪರವಾನಿಗೆದಾರರಿಗೆ ಮಾತ್ರ ಮರಳುಗಾರಿಕೆಗೆ ಅವಕಾಶ ನೀಡುತ್ತೇವೆ’ ಎಂದು ರಾಜ್ಯ ಸರಕಾರ ಹೇಳಿತ್ತು. ಆದರೆ ಈಗ ಕೇಂದ್ರ ಸರಕಾರವು 2011ರ ಅನಂತರದ ಪರವಾನಿಗೆದಾರರಿಗೂ ಅವಾಶ ನೀಡುವಂತೆ ಸೂಚಿಸಿದೆ. ಈ ಮೂಲಕ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ನೇತೃತ್ವದಲ್ಲಿ ಕೇಂದ್ರ ಅರಣ್ಯ ಸಚಿವ ಹರ್ಷವರ್ಧನ್ ಜತೆಗೆ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಈಗಾಗಲೇ ಎನ್‌ಜಿಟಿ ಕೋರ್ಟಿನಲ್ಲಿ ಅಫಿದವಿತ್ ನೀಡಿದಂತೆ 170 ಜನರಿಗೂ ತತ್‌ಕ್ಷಣ ಮರಳು ದಿಬ್ಬ ತೆರವುಗೊಳಿಸಲು ಲೀಸ್ ನೀಡಿ ಮರಳುಗಾರಿಕೆಗೆ ರಾಜ್ಯ ಸರಕಾರ ಮತ್ತು ಜಿÇÉಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.