Advertisement

ನೀರಿನ ಕೊರತೆಯಾಗದಂತೆ ತುಂಗಭದ್ರಾ ನದಿಗೆ ಮರಳಿನ ಚೀಲದ ರಿಂಗ್ ಬಾಂಡ್

05:07 PM May 08, 2020 | keerthan |

ಗಂಗಾವತಿ: ಕೋವಿಡ್-19 ಒತ್ತಡದ ಮಧ್ಯದಲ್ಲೂ ಬೇಸಿಗೆ ಸಂದರ್ಭದಲ್ಲಿ ಗಂಗಾವತಿ ನಗರಸಭೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ದೇವಘಾಟ ಹತ್ತಿರ ತುಂಗಭದ್ರಾ ನದಿಗೆ ಮರಳಿನ ಚೀಲಗಳ ರಿಂಗ್‌ ಬಾಂಡ್ ಹಾಕಲಾಗಿದೆ.

Advertisement

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಜಾಕವೆಲ್ ಹತ್ತಿರ ನೀರು ಪಂಪ್ ಮಾಡಲು ಆಗದಂತಾಗಿತ್ತು. ಕೂಡಲೇ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಪರವಾನಿಗೆ ಮೇರೆಗೆ ದೇವಘಾಟ ಹತ್ತಿರ ಇರುವ ಜಾಕವೆಲ್ ಪಂಪ್ ಗೆ ನೀರು ತಲುಪಿಸುವ ಉದ್ದೇಶದಿಂದ ತುಂಗಭದ್ರಾ ನದಿಗೆ ಅರ್ಧ ಕಿಲೋಮೀಟರ್ ಉದ್ದ ಸುಮಾರು 160 ಅಡಿ ಉದ್ದದ ಮರಳಿನ ಚೀಲಗಳಿಂದ ರಿಂಗ್ ಬಾಂಡ್ (ಬದುವು) ಹಾಕಲಾಗಿದೆ. ಇದರಿಂದ ಪಂಪ್ ನೀರು ಹರಿಯುವ ಮೂಲಕ ಮೋಟಾರ್ ನಿರಂತರವಾಗಿ ನಡೆಯಲು ಅನುಕೂಲವಾಗುತ್ತದೆ.

ಸದ್ಯ ನಗರದಲ್ಲಿ ಸುಮಾರು 2ಲಕ್ಷ ಜನಸಂಖ್ಯೆ ಇದ್ದು ಇವರಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next