Advertisement
ಮಂಗಳವಾರ “ಉದಯವಾಣಿ’ಯೊಂದಿಗೆ ಮಾತನಾಡಿದ ಶಾಸಕ ರಘುಪತಿ ಭಟ್, ಸೋಮವಾರ ಜಿಲ್ಲಾಧಿಕಾರಿಗಳು 7 ಮಂದಿ ಸದಸ್ಯರ ಸಮಿತಿಯನ್ನು ಪುನಾರಚನೆ ಮಾಡಿದ್ದು, ಸಿಆರ್‌ಝಡ್ ವ್ಯಾಪ್ತಿಯಲ್ಲಿ 2011ರಲ್ಲಿ ಪರವಾನಿಗೆ ಪಡೆದವರಿಗೆ ಮಾತ್ರ ಮರಳು ತೆಗೆಯಲು ಅನುಮತಿ ನೀಡಲಾಗುತ್ತದೆ ಎಂದಿದ್ದಾರೆ. 2011ರಲ್ಲಿ ಪರವಾನಿಗೆ ಇದ್ದ ಸಾಕಷ್ಟು ಮಂದಿ ತಮ್ಮ ಪರವಾನಿಗೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದು ಹಸಿರು ಪೀಠದಲ್ಲಿ ಮತ್ತೆ ಕಾನೂನಾತ್ಮಕ ಸಮಸ್ಯೆಗೆ ಕಾರಣವಾಗಲಿದೆ. ಏಕೆಂದರೆ ಪರವಾನಿಗೆ ನೀಡಲು 2016ರಲ್ಲಿ ಎನ್‌ಜಿಟಿಗೆ ಸಲ್ಲಿಸಿದ ವರದಿಯಲ್ಲಿ ಬಹಳಷ್ಟು ಗುತ್ತಿಗೆದಾರರ ಹೆಸರು ಇಲ್ಲ. ಇದು ಮುಂದೆ ಕಾನೂನಾತ್ಮಕವಾಗಿ ತೊಂದರೆಯಾಗುತ್ತದೆ.
Related Articles
Advertisement
ಸಿಎಂ ಭರವಸೆಮಂಗಳವಾರ ತ್ರಾಸಿಯಲ್ಲಿ ಮುಖ್ಯಮಂತ್ರಿ ಯವರಿಗೆ ಮರಳು ಹೋರಾಟ ಸಮಿತಿಯ ಉಪಾಧ್ಯಕ್ಷ ಸತ್ಯಜಿತ್ ಬಿರ್ತಿ ಮನವಿ ಸಲ್ಲಿಸಿದರು. ನ. 6ರೊಳಗೆ ಸಮಸ್ಯೆಯನ್ನು ಸರಕಾರ ಬಗೆಹರಿಸಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು ಎಂದು ಬಿರ್ತಿ ತಿಳಿಸಿದ್ದಾರೆ. ಗಣಿ ಅಧಿಕಾರಿ ವರ್ಗ
ಏತನ್ಮಧ್ಯೆ ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆಯ ಹಿರಿಯ ಭೂವಿಜ್ಞಾನಿ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿದ್ದ ಎ.ಎಂ. ನಿರಂಜನ ಅವರನ್ನು ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆಯ ಸ್ಕ್ವಾಡ್‌ಗೆ ಬಿಟ್ಟುಕೊಡಲಾಗಿದೆ. ಈ ಸ್ಥಾನಕ್ಕೆ ಹಾಸನದಿಂದ ಪದ್ಮಜಾ ಅವರನ್ನು ವರ್ಗಾಯಿಸಲಾಗಿದೆ. ಇದು ಆಡಳಿತಾತ್ಮಕ ನಿರ್ಧಾರ. ಜಿಲ್ಲೆಗೆ ಪೂರ್ಣಕಾಲಿಕ ಹಿರಿಯ ಭೂವಿಜ್ಞಾನಿ ಅಗತ್ಯವಿದೆ ಎಂಬ ಕಾರಣಕ್ಕೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಾನ್ ಸಿಆರ್‌ಝಡ್ ವ್ಯಾಪ್ತಿಯ 13 ಮರಳು ದಿಬ್ಬಗಳನ್ನು ತೆರವುಗೊಳಿಸಲು 7 ಮಂದಿಯ ಮರಳು ಸಮಿತಿ ಮಂಜೂರಾತಿ ನೀಡಿದೆ. ಇನ್ನು ಮರಳು ದಿಬ್ಬಗಳನ್ನು ಹರಾಜು ಹಾಕುವ ಪ್ರಕ್ರಿಯೆ ನಡೆಯಬೇಕಾಗಿದೆ. ಸಿಆರ್‌ಝಡ್ ಪ್ರದೇಶದಲ್ಲಿ ಗುರುತಿಸಲಾದ 5 ಮರಳಿನ ದಿಬ್ಬಗಳಲ್ಲಿ ಮರಳನ್ನು ತೆಗೆಯುವುದಕ್ಕೆ ಗುತ್ತಿಗೆದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಕಳೆದ ವರ್ಷ ಅರ್ಜಿ ಸಲ್ಲಿಸಿದ ಎಲ್ಲ 170 ಗುತ್ತಿಗೆದಾರರಿಗೆ ಪರವಾನಿಗೆ ನೀಡುವಷ್ಟು ದಿಬ್ಬಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಅವರ ಸೂಚನೆಯಂತೆ 2011ಕ್ಕೆ ಮೊದಲು ಮರಳು ತೆಗೆಯುತ್ತಿದ್ದ ಗುತ್ತಿಗೆದಾರರಿಗೆ ಪರವಾನಿಗೆ ನೀಡುವುದಾಗಿ ಜಿÇÉಾಧಿಕಾರಿ ಘೋಷಿಸಿ¨ªಾರೆ. ಈಗ 2011ಕ್ಕೆ ಪೂರ್ವದಲ್ಲಿ ಮರಳು ತೆಗೆಯುತ್ತಿದ್ದ 69 ಮಂದಿ ಗುತ್ತಿಗೆದಾರರ ಪಟ್ಟಿ ಜಿÇÉಾಧಿಕಾರಿ ಅವರ ಬಳಿ ಸಿದ್ಧವಿದ್ದು, ಈ ಪಟ್ಟಿ ಹೊರತು ಪಡಿಸಿ 2011ಕ್ಕೆ ಮೊದಲು ಮರಳು ತೆಗೆಯುತ್ತಿದ್ದ ಗುತ್ತಿಗೆದಾರರಿಂದ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಂದು (ಬುಧವಾರ) ಕೊನೆಯ ದಿನವಾಗಿದೆ.