Advertisement

ಸರಕಾರದ ಹೊಸ ಮರಳು ನೀತಿಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಿ: ಗುತ್ತಿಗೆದಾರರ ಮನವಿ

04:47 PM Jun 24, 2020 | sudhir |

ಪುತ್ತೂರು ; ಸರಕಾರ ಜಾರಿಗೆ ತಂದಿರುವ ಹೊಸ ಮರಳು ನೀತಿಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕೆಂದು ಮರಳು ಗುತ್ತಿಗೆದಾರರು ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

Advertisement

ರಾಜ್ಯ ಸರಕಾರ ಜಾರಿಗೆ ತಂದಿರುವ ಹೊಸ ಮರಳು ನೀತಿಯಿಂದ ಕರಾವಳಿ ಭಾಗದ ಮರಳು ಗುತ್ತಿಗೆದಾರರಿಗೆ ಅ‌ನ್ಯಾಯವಾಗಲಿದ್ದು ಈ ಬಗ್ಗೆ ಮುಂದಿನ ಹೋರಾಟ ಕೈಗೊಳ್ಳುವ ಕುರಿತಂತೆ ದ.ಕ.ಮತ್ತು ಉಡುಪಿ ಜಿಲ್ಲೆಯ ಮರಳು ಗುತ್ತಿಗೆದಾರರ ಸಭೆಯು ಜೂ.24 ರಂದು ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.

ಸರಕಾರ ಈ ಹಿಂದೆ 15 ಮಂದಿಗೆ ಮರಳು ಗುತ್ತಿಗೆಯನ್ನು 5 ವರ್ಷದ ಕಾಲಕ್ಕೆ ನೀಡಿದ್ದು ಆ ನಂತರದಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಕೆಲಸ ಕಾರ್ಯಗಳು ನಿಂತಿದ್ದು ಈಗ ಸರಕಾರ ಮತ್ತೊಂದು ನೀತಿಯನ್ನು ತಂದಿದ್ದು ಅದರಲ್ಲಿ ಸ್ಥಳೀಯರನ್ನು ಹೊರತುಪಡಿಸಿ ಉಳಿದವರಿಗೂ ಗುತ್ತಿಗೆ ಪಡೆಯುವ ಅವಕಾಶ ನೀಡಿದ್ದು ಇದರಿಂದ ಹಲವಾರು ವರ್ಷಗಳಿಂದ ಮರಳು ಗುತ್ತಿಗೆ ಪಡೆಯುತ್ತಿದ್ದ ಗುತ್ತಿಗೆದಾರರಿಗೆ ತೊಂದರೆ ಆಗುತ್ತದೆ ಹಾಗಾಗಿ ಸರಕಾರ ಮೊದಲು ಸ್ಥಳೀಯರಿಗೆ ಆದ್ಯತೆ ನೀಡಿ ಮತ್ತೆ ಉಳಿದವರಿಗೆ ನೀಡಲಿ ಎಂದು ಮರಳು ಗುತ್ತಿಗೆದಾರರು ಸಭೆಯನ್ನು ನಡೆಸಿ ಸರಕಾರಕ್ಕೆ ಮನವಿಯನ್ನು ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಕರಾವಳಿ ಭಾಗದ ಜನಪ್ರತಿನಿಧಿಗಳಿಗೆ ಮನವಿ‌ ನೀಡಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಕರೆಯಲು ಆಗ್ರಹಿಸುವುದು ಎಂದು ತಿಳಿಸಿದರು  ಒಂದು ವೇಳೆ ಸರಕಾರ ಇದಕ್ಕೆ ಒಪ್ಪದಿದ್ದಲ್ಲಿ ಹೊಸ ನೀತಿ ಪುನರ್ ಪರಿಶೀಲನೆಗೆ ಕಾನೂನು ಹೋರಾಟ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next