Advertisement

ಮರಳು: ಜ. 28ರಿಂದ ಮತ್ತೆ ಅನಿರ್ದಿಷ್ಟಾವಧಿ ಧರಣಿ

12:30 AM Jan 26, 2019 | |

ಉಡುಪಿ: ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳ ತೆರವಿಗೆ (ಮರಳುಗಾರಿಕೆಗೆ) ಎಲ್ಲ ಸಾಂಪ್ರದಾಯಿಕ ಪರವಾನಿಗೆದಾರರಿಗೂ ಅವಕಾಶ ನೀಡಬೇಕು. ಮರಳು ಸಮಸ್ಯೆ ಪರಿಹರಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿ ಜ. 28ರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮತ್ತೆ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ.

Advertisement

ಶುಕ್ರವಾರ ಬನ್ನಂಜೆ ಶ್ರೀ ನಾರಾಯಣಗುರು ಸಭಾಭವನದಲ್ಲಿ “ಸರ್ವಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿ’ ನೇತೃತ್ವದಲ್ಲಿ ಜರಗಿದ ಪೂರ್ವಭಾವಿ ಸಭೆಯಲಿ ಈ ನಿರ್ಣಯಕ್ಕೆ ಬರಲಾಯಿತು.

ಧರಣಿಗೆ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳನ್ನು ಆಹ್ವಾನಿಸಲಾಗುವುದು. ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸಲಾಗುವುದು. ಯಾವ ಪಕ್ಷದವರು ಮುಂದಾಳತ್ವ ವಹಿಸಿದರೂ ಅವರೊಂದಿಗೆ ಸೇರಿಕೊಳ್ಳುತ್ತೇವೆ. ಎಲ್ಲ ಪಕ್ಷದವರ ಸಹಕಾರವೂ ಬೇಕು ಎಂದು ಸಭೆಯ ಅನಂತರ ಸಮಿತಿಯ ಪದಾಧಿಕಾರಿಗಳು “ಉದಯವಾಣಿ’ಗೆ ತಿಳಿಸಿದರು.

ಜಿಲ್ಲಾಡಳಿತವೇ ಹೊಣೆ
ಶಾಸಕ ಕೆ. ರಘುಪತಿ ಭಟ್‌, “ಈ ಹಿಂದೆ ಧರಣಿ ನಡೆಸಿದಾಗ ಜಿಲ್ಲಾಧಿಕಾರಿ ಕೇಂದ್ರ, ರಾಜ್ಯ ಸರಕಾರಗಳತ್ತ ಕೈ ತೋರಿಸಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ಅಡೆತಡೆಗಳನ್ನು ನಿವಾರಿಸಿವೆ. ಕೇಂದ್ರ ಸರಕಾರದ ಉಲ್ಲೇಖದೊಂದಿಗೆ ರಾಜ್ಯ ಸರಕಾರ ಜ. 4ರಂದೇ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ. ಆದರೆ ಇದುವರೆಗೂ ಜಿಲ್ಲಾಧಿಕಾರಿಯವರು ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಬಾರಿಯ ಧರಣಿ ಜಿಲ್ಲಾಡಳಿತದ ವಿರುದ್ಧವೇ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next