Advertisement

ಅತೀ ಕಡಿಮೆ ದರಕ್ಕೆ ಸಿಗಲಿದೆ ಮರಳು

02:49 AM Jun 20, 2020 | Sriram |

ಬೆಂಗಳೂರು: ಮರಳು ನೀತಿ ಜಾರಿ ಬಳಿಕ ರಾಜ್ಯದಲ್ಲಿ ನೈಸರ್ಗಿಕ ಮರಳಿನ ಬೆಲೆ ಮಾತ್ರವಲ್ಲದೆ ಸಾಗಣೆಗೂ ಏಕರೂಪ ದರ ನಿಗದಿ ಪಡಿಸಲು ಸಿದ್ಧತೆ ನಡೆದಿದೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ಖರೀದಿ ದಾರರು ಬೇಕಾದ ಕಡೆಯಿಂದ ಬೇಕಾದಷ್ಟು ಮರಳನ್ನು ನಿಗದಿತ ದರ ದಲ್ಲೇ ಖರೀದಿಸುವ ವ್ಯವಸ್ಥೆ ಕೂಡ ಸಿಗಲಿದೆ.

Advertisement

ಈಗಾಗಲೇ ಗುರುತಿಸಿರುವ ಮರಳು ಬ್ಲಾಕ್‌ಗಳಲ್ಲಿ ಪ್ರತಿ ಟನ್‌ಗೆ 700 ರೂ., ಗ್ರಾ.ಪಂ. ವ್ಯಾಪ್ತಿ ಯಲ್ಲಿ ಟನ್‌ಗೆ 300 ರೂ. ದರ ನಿಗದಿಗೆ ಪ್ರಸ್ತಾವ ಸಲ್ಲಿಕೆಯಾಗಿದ್ದು, ಸರ ಕಾರದ ಮಟ್ಟದಲ್ಲಿ ಚರ್ಚೆ ನಡೆ ದಿದೆ. ಒಂದೊಮ್ಮೆ ಇದೇ ದರ ನಿಗದಿ ಯಾದರೆ ಎಂಎಸ್‌ಐಎಲ್‌ ಮಲೇಷ್ಯಾ ಮರಳನ್ನು ಮಾರಾಟ ಮಾಡು ತ್ತಿರುವ 2,835 ರೂ.ಗಿಂತಲೂ (ಟನ್‌ಗೆ) ಕಡಿಮೆ ದರಕ್ಕೆ ನೈಸರ್ಗಿಕ ಮರಳು ಸಿಗಲಿದೆ. ಸೆಪ್ಟಂಬರ್‌ ಹೊತ್ತಿಗೆ ಅಗ್ಗದ ದರ ದಲ್ಲಿ ಮರಳು ಪೂರೈಕೆ ಪ್ರಕ್ರಿಯೆ ಆರಂಭಕ್ಕೆ ಸಿದ್ಧತೆ ನಡೆದಿದೆ.

ಮರಳು ಸಾಗಾಟ ದರ ನಿಗದಿಗೂ ಪ್ರಯತ್ನ ನಡೆದಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸಾರಿಗೆ ಇಲಾಖೆ ನಡುವೆ ಚರ್ಚೆ ನಡೆಯು ತ್ತಿದೆ. ಸದ್ಯ ಮರಳಿನ ಬೆಲೆ ಯಷ್ಟೇ ಸಾಗಣೆ ದರವನ್ನು ನಿಗದಿ ಪಡಿಸುತ್ತಿದ್ದರಿಂದ ಗ್ರಾಹಕ ರಿಗೆ ತೀವ್ರ ಹೊರೆಯಾಗುತ್ತಿತ್ತು. ಇನ್ನು ಗ್ರಾಹಕರು ಮರಳಿನ ದರ ಹಾಗೂ ಸಾಗಣೆ ವೆಚ್ಚವನ್ನು ಮೊದಲೇ ಲೆಕ್ಕ ಹಾಕಿ ಮುಂಗಡ ಪಾವತಿಸಿ ಮರಳು ಪಡೆಯ ಬಹುದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಂತಾರಾಜ್ಯ ಸಾಗಣೆ ಮೇಲೂ ನಿಗಾ
ರಾಜ್ಯದೊಳಗೆ ಮರಳು ಗಣಿಗಾರಿಕೆ, ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳ ಲಾಗುತ್ತಿದೆ. ಅನ್ಯ ರಾಜ್ಯಗಳಿಂದ ರಾಜ್ಯಕ್ಕೆ ಪೂರೈಕೆಯಾಗುವ ಮರಳು ಸೇರಿದಂತೆ ಕಟ್ಟಡ ಸಾಮಗ್ರಿ ಗಳ ಮೇಲೆ ನಿಗಾ ವಹಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಎಂಎಸ್‌ಐಎಲ್‌ ದರಕ್ಕಿಂತಲೂ ಅಗ್ಗ
ಕೋವಿಡ್‌- 19 ವೈರಸ್‌ ಹರಡುವಿಕೆ ಹಾಗೂ ಲಾಕ್‌ಡೌನ್‌ನಿಂದಾಗಿ ಮರಳಿನ ಬೇಡಿಕೆ ತಗ್ಗಿದ್ದು, ಸದ್ಯದಲ್ಲೇ ಚೇತರಿಕೆಯಾಗುವ ನಿರೀಕ್ಷೆ ಇದೆ. ಆ ಹೊತ್ತಿಗೆ ನೈಸರ್ಗಿಕ ಮರಳಿನ ಪೂರೈಕೆಯೂ ಶುರು ವಾಗ ಲಿದೆ. ಎಂಎಸ್‌ಐಎಲ್‌ನ ಮಲೇಷ್ಯಾ ಮರಳಿಗೂ ರಾಜ್ಯದ ನೈಸರ್ಗಿಕ ಮರಳಿನ ದರಕ್ಕೂ ಹೋಲಿ ಸಲು ಸಾಧ್ಯವಿಲ್ಲ. ಮಲೇಷ್ಯಾ ಮರಳಿನ ಮೂರನೇ ಒಂದರಷ್ಟು ಇಲ್ಲವೇ ನಾಲ್ಕನೇ ಒಂದ ರಷ್ಟು ದರ ದಲ್ಲಿ ನೈಸರ್ಗಿಕ ಮರಳು ಸಿಗುವ ನಿರೀಕ್ಷೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next