Advertisement

ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ದಾರುಣ ಸಾವು

11:13 AM Aug 29, 2019 | Hari Prasad |

ಗಂಗಾವತಿ: ಕನಕಗಿರಿ ತಾಲೂಕಿನ ನವಲಿ ಎಂಬ ಗ್ರಾಮದಲ್ಲಿ ಮರಳಿನ ದಿಬ್ಬವೊಂದು ಮೂವರು ಮಕ್ಕಳನ್ನು ಬಲಿ ಪಡೆದುಕೊಂಡಿದೆ. ಮೃತಪಟ್ಟಿರುವ ಮಕ್ಕಳನ್ನು ಒಂದು ವರ್ಷದ ಸೋನಂ, ಎರಡು ವರ್ಷದ ಸವಿತಾ ಹಾಗೂ ಮೂರು ವರ್ಷದ ಕವಿತಾ ಎಂದು ಗುರುತಿಸಲಾಗಿದೆ. ಇವರ ಜೊತೆಯಲ್ಲಿ ಆಟವಾಡಿಕೊಂಡಿದ್ದ ರೋಷನ್, ಕಿರಣ್ ಮತ್ತು ಬಾಬು ಎಂಬ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಮಕ್ಕಳೊಂದಿಗೆ ದುಡಿಮೆ‌ ಮಾಡಿಕೊಂಡು ಜೀವನ ನಡೆಸಲು ಬಂದಿದ್ದ ಮಹಾರಾಷ್ಟ್ರದ ಮೂಲ ಕುಟುಂಬ ನವಲಿ ಬಳಿ ವಾಸವಾಗಿತ್ತು. ಮಕ್ಕಳು ಮರಳು ದಿನ್ನೆಯ ಬಳಿ ತೆರಳಿದ ವೇಳೆ ಕುಸಿದು ಮೂವರು ಮೃತಪಟ್ಟಿದ್ದಾರೆ.

ಆಟವಾಡುತ್ತಾ ಮರಳಿನ ಗುಡ್ಡದೊಳಗೆ ಮಕ್ಕಳು ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಮರಳಿನ ಗುಡ್ಡ ಕುಸಿದು ಬಿದ್ದಿದೆ. ಆಗ ಮಕ್ಕಳಿಗೆ ಹೊರಗೆ ಓಡಿ ಬರಲು ಸಾಧ್ಯವಾಗದೇ ಮರಳಿನ ಅಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗುತ್ತಿದೆ.

ಅಕ್ರಮವಾಗಿ ಹಳ್ಳದಲ್ಲಿ ಮರಳು ಸಾಗಿಸುವವರು ಕೃತ್ಯಕ್ಕೆ ಮಕ್ಕಳ ಪ್ರಾಣಪಕ್ಷಿ ಹಾರಿಗೋಗಿವೆ.‌

ಕನಕಗರಿ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪೊಲೀಸರು ಅಕ್ರಮ‌ ದಂಧೆ‌ ಜೊತೆ ಕೈ ಜೋಡಿಸಿದ್ದಾರೆ. ಅವರು ದಂಧೆಕೋರರಿಂದ ‌ಹಣ ವಸೂಲಿ ಮಾಡುತ್ತಿದ್ದಾರೆ. ಈಗ ಅಕ್ರಮ ದಂಧೆಗೆ ಮಕ್ಕಳು ಬಲಿಯಾಗಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next