Advertisement
ಗೌತಮ ಬುದ್ಧ ಒಮ್ಮೆ ದೀರ್ಘ ಯಾತ್ರೆಯ ಬಳಿಕ ತನ್ನ ಶಿಷ್ಯ ಆನಂದ ಮತ್ತು ಇತರರ ಜತೆಗೆ ಒಂದು ಹಳ್ಳಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ. ಹಳ್ಳಿಯ ಹತ್ತಿರಕ್ಕೆ ಸಾಗಿ, ಹೆಬ್ಟಾಗಿ ಲನ್ನು ದಾಟಿ ಒಳಪ್ರ ವೇಶಿಸುತ್ತಿರಬೇಕಾದರೆ ಮಕ್ಕಳ ಗುಂಪೊಂದು ಮರಳಿನಲ್ಲಿ ಆಟವಾಡು ವುದು ಕಾಣಿಸಿತು. ಬುದ್ಧ ಅಲ್ಲೇ ಅರಳಿ ಕಟ್ಟೆಯ ಮೇಲೆ ಕುಳಿತು ಮಕ್ಕಳಾಟವನ್ನು ಬಹಳ ಆಸಕ್ತಿ ವಹಿಸಿ ತದೇಕಚಿತ್ತನಾಗಿ ಗಮನಿಸಿದ. ಶಿಷ್ಯರೆ ಲ್ಲರೂ ಅಲ್ಲೇ ಸುತ್ತಮುತ್ತ ಕುಳಿತರು.
Related Articles
Advertisement
ಒಂದಿಬ್ಬರು ಮಕ್ಕಳು ಇನ್ನೊಂದು ತಂಡದ ಮರಳಿನ ಮನೆಯನ್ನು ಕೆಡವಿ ದರು. ಜಗಳವಾಯಿತು. ಇನ್ನೊಂದು ತಂಡದ ಮನೆ ಸಂಪೂರ್ಣವಾದಾಗ ಹರ್ಷೋದ್ಘಾರ ಕೇಳಿಬಂತು. ಬುದ್ಧ ಮೌನವಾಗಿ ಎಲ್ಲವನ್ನೂ ಗಮನಿಸು ತ್ತಲೇ ಇದ್ದ. ಅವನ ಪದ್ಮಸದೃಶ ಮುಖ ದಲ್ಲಿ ಮುಗುಳ್ನಗು ರಾರಾಜಿಸುತ್ತಿತ್ತು.
ಅಷ್ಟರಲ್ಲಿ ಸೂರ್ಯ ಮುಳುಗಿ ಕತ್ತಲು ಆವರಿಸಲಾರಂಭಿಸಿತು. ಹತ್ತಿ ರವೇ ಇದ್ದ ಹಳ್ಳಿಯ ಮನೆಗಳಿಂದ ಮಕ್ಕಳು ತಾಯಂದಿರ ಕೂಗು ಕೇಳಿಬಂತು, “ಬನ್ನಿರೋ, ಆಟ ಸಾಕು. ಕತ್ತಲಾಯಿತು. ಕೈಕಾಲು ತೊಳಕೊಂಡು ಬನ್ನಿ…’
ಎಲ್ಲ ಮಕ್ಕಳು ಆಟ ನಿಲ್ಲಿಸಿದರು. ಕೆಲವು ಮನೆಗಳು ಅರೆವಾಸಿ ಪೂರ್ಣಗೊಂಡಿದ್ದವು, ಇನ್ನು ಕೆಲವು ಸಂಪೂ ರ್ಣವಾಗಿದ್ದವು. . ಮಕ್ಕಳು ಅವುಗಳ ಮೇಲೆಯೇ ಥಕಥೈ ಕುಣಿದರು. ಕೆಲವು ಕ್ಷಣಗಳ ಹಿಂದೆ ಹಲವು ಮರಳಿನ ಮನೆಗಳಿದ್ದ ಜಾಗ ಈಗ ಮಟ್ಟಸ ವಾಗಿತ್ತು. ಸ್ವಲ್ಪ ಸಮಯ ಹಿಂದೆ ತಾವು ಕಟ್ಟಿದ ಮನೆಗಳನ್ನು ಯಾರಾದರೂ ಕೆಡಿಸಿದರೆ ಇದೇ ಮಕ್ಕಳು ಚೀರುತ್ತಿ ದ್ದರು. ಆದರೆ ಈಗ ಅವರೇ ಅವುಗ ಳನ್ನೆಲ್ಲ ಕೆಡವಿದರು. ಬಳಿಕ ಮಕ್ಕಳೆಲ್ಲ ತಾವು ಆಟವಾಡಿದ ಜಾಗದತ್ತ ಹಿಂದಿ ರುಗಿಯೂ ನೋಡದೆ ತಮ್ಮ ತಮ್ಮ ಮನೆಗಳತ್ತ ಧಾವಿಸಿದರು.
ಈಗ ಬುದ್ಧ ಮೌನ ಮುರಿದು ತನ್ನ ಶಿಷ್ಯರನ್ನು ಉದ್ದೇಶಿಸಿ ಹೇಳಿದ, “ನಮ್ಮ ಬದುಕು ಈ ಮಕ್ಕಳು ಆಡಿದ ಮರಳಿನಾಟಕ್ಕಿಂತ ಹೆಚ್ಚಿನದೇನಲ್ಲ…’
ಹೌದೋ ಅಲ್ಲವೋ, ಗಮನಿಸಿ ನೋಡಿ. ಹುಟ್ಟುತ್ತೇವೆ, ದೊಡ್ಡವರಾಗು ತ್ತೇವೆ. ಕಲಿಯುತ್ತೇವೆ. ಉದ್ಯೋಗ ಹಿಡಿಯುತ್ತೇವೆ. ಮಡದಿ, ಮಕ್ಕಳು, ಮನೆ, ಕಾರು, ಅಂತಸ್ತು ಒಂದೊಂದಾಗಿ ಒಂದೊಂದಾಗಿ ಕಟ್ಟಿಕೊಳ್ಳುತ್ತ ಹೋಗು ತ್ತೇವೆ. ಕೊನೆಗೊಂದು ದಿನ ಆಟ ನಡೆ ಯುತ್ತಲೇ ಇರುವಾಗ ಕರೆ ಬರುತ್ತದೆ. ಆಟವನ್ನು ಅಲ್ಲಿಯೇ ನಿಲ್ಲಿಸಿ ಹೋಗ ಬೇಕಾಗುತ್ತದೆ, ಹಿಂದಿರುಗಿಯೂ ನೋಡದೆ!ಹಾಗೆಂದು ಆಟವಾಡುವ ಸಂಭ್ರಮ ವನ್ನು ತಪ್ಪಿಸಿಕೊಳ್ಳಬಾರದು. ಪ್ರತೀ ಕ್ಷಣದಲ್ಲಿಯೂ ಸಂಪೂರ್ಣವಾಗಿ ತೊಡಗಿಸಿಕೊಂಡು ಖುಷಿ ಪಡುತ್ತ ಚೆನ್ನಾಗಿ ಆಟವಾಡಬೇಕು. -(ಸಾರ ಸಂಗ್ರಹ)