Advertisement
ದ.ಕ. ಜಿಲ್ಲೆಯಲ್ಲಿ ಮರಳು ಲಭ್ಯತೆಯ ಬಗ್ಗೆ ಹಲವು ರೀತಿಯ ಸಮಸ್ಯೆ ಮತ್ತು ಸವಾಲುಗಳು ಮತ್ತೆ ಮತ್ತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಸಿಗುವಂತಾಗಲು ದ.ಕ. ಜಿಲ್ಲಾಡಳಿತ ‘ಸ್ಯಾಂಡ್ ಬಜಾರ್’ ಎಂಬ ಆ್ಯಪ್ ಅನ್ನು ಪರಿಚಯಿಸಲಿದೆ. ಸದ್ಯಕ್ಕೆ ಇದು ಮಂಗಳೂರು ಸುತ್ತಮುತ್ತ ವ್ಯಾಪ್ತಿಯಲ್ಲಿ ಅಂದರೆ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ. ಆ ಬಳಿಕ ಜಿಲ್ಲೆಯಾದ್ಯಂತ ಈ ಆ್ಯಪ್ ಕಾರ್ಯನಿರ್ವಹಿಸಲಿದೆ.
ಬರಲಿದೆ. ಈ ಮೊತ್ತವನ್ನು ಪೇಟಿಎಂ, ನೆಟ್‌ಬ್ಯಾಂಕಿಂಗ್ ಮುಖೇನ ಸಂದಾಯ ಮಾಡಬೇಕು.
Related Articles
ಮರಳು ದಕ್ಕೆಯ ಗಮನಕ್ಕೆ ತರಬೇಕು. ಜತೆಗೆ ದಕ್ಕೆಗೆ ಕಂಟ್ರೋಲ್ ರೂಂನಿಂದ ಸಂದೇಶ ಹೋಗಲಿದೆ. ಇದರ ಆಧಾರದ ಮೇಲೆಯೇ ಮರಳು ಸಾಗಾಟ ನಡೆಯಲಿದೆ.
Advertisement
ಮರಳು ಪೂರೈಕೆಯಲ್ಲಿ ನಡೆಯುವ ಮಧ್ಯವರ್ತಿಗಳ ಹಾವಳಿ, ದರಗಳ ಏರಿಳಿತ ಸಹಿತ ಮರಳು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಕ್ರಮ ಎನ್ನುವುದು ಜಿಲ್ಲಾಡಳಿತದ ಅಭಿಪ್ರಾಯ.
ಗ್ರಾಹಕರಿಗೆ ಅನುಕೂಲಮರಳು ಬುಕ್ಕಿಂಗ್ ನೋಂದಣಿಯಿಂದ ಹಿಡಿದು ಹಣಪಾವತಿ, ಮರಳು ಬುಕ್ಕಿಂಗ್, ವಾಹನ ಬುಕ್ಕಿಂಗ್, ಮರಳು ಲಾರಿ ಸಾಗಾಟವಾಗುವ ಟ್ರ್ಯಾಕಿಂಗ್ ಸ್ಟೇಟಸ್ ಹಂತಹಂತವಾಗಿ ಸ್ಯಾಂಡ್ ಬಜಾರ್ ಆ್ಯಪ್‌ನಲ್ಲಿ ದೊರೆಯಲಿದ್ದು, ಇದು ಗ್ರಾಹಕರ ಮಾಹಿತಿಗೆ ಅನುಕೂಲವಾಗಲಿದೆ. ಜತೆಗೆ, ಬುಕ್ಕಿಂಗ್ ಮಾಹಿತಿ, ಗ್ರಾಹಕರ ಮಾಹಿತಿ, ‘ಗೂಗಲ್ ಮ್ಯಾಪ್ ವಿವ್’ ಮುಖೇನ ಮರಳು ದಕ್ಕೆಯ ವಿವರವೂ ಸಿಗಲಿದೆ. ನಿಗದಿತ ಸಮಯದೊಳಗೆ ಸಾಗಿಸಿ
ಆ್ಯಪ್‌ನಲ್ಲಿ ಬುಕ್ಕಿಂಗ್ ಮಾಡಿದ ಮರಳನ್ನು ನಿಗದಿತ ಸಮಯದೊಳಗೆ ಸಂಬಂಧಪಟ್ಟ ಮರಳು ಲಾರಿಯವ ಸಾಗಾಟ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ಒಂದು ವೇಳೆ ವಿಳಂಬ ಮಾಡಿದರೆ ಆ ಲಾರಿಯ ಮೇಲೆ ಕ್ರಮಕೈಗೊಳ್ಳಲಾಗುತ್ತದೆ.
ನಿರಂತರ ಮೂರು ಬಾರಿ ಇದೇ ರೀತಿ ಲೋಪವಾದರೆ ಆ ಲಾರಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಪಾರದರ್ಶಕತೆ ಉದ್ದೇಶ
ಮರಳುಗಾರಿಕೆಯಲ್ಲಿ ಪಾರದರ್ಶಕತೆ ಮತ್ತು ನಿರ್ವಹಣೆ ಸುಲಭವಾಗುವ ನೆಲೆಯಲ್ಲಿ ‘ಸ್ಯಾಂಡ್ ಬಜಾರ್’ ಆ್ಯಪ್ ತಯಾರಿಸಲಾಗಿದೆ. ಶೀಘ್ರದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ಈ ಮೂಲಕ ಗ್ರಾಹಕರಿಗೆ ಸುಲಭವಾಗಿ ಮರಳು ಸಿಗಲಿದೆ.
– ಶಶಿಕಾಂತ್ ಸೆಂಥಿಲ್,
ಜಿಲ್ಲಾಧಿಕಾರಿ, ದ.ಕ. ಏನಿದು ಆ್ಯಪ್?
‘ಸ್ಯಾಂಡ್ ಬಜಾರ್ ಆ್ಯಪ್’-ಶೋರ್ ಟು ಎವಿರಿ ಡೋರ್- (ನದಿ ದಡದಿಂದ ಮನೆಬಾಗಿಲಿಗೆ) ಎಂಬ ಸ್ಲೋಗನ್‌ನಲ್ಲಿ ಈ ಆ್ಯಪ್ ತಯಾರಿಸಲಾಗಿದ್ದು, ಮರಳು ಸಾಗಾಟ ಸುಲಭವಾಗಿ ಗ್ರಾಹಕರಿಗೆ ತಲುಪಲು ಅನುಕೂಲವಾಗಲಿದೆ. ಜಿಲ್ಲಾಡಳಿತ ಮರಳಿಗೆ ದರ ನಿಗದಿ ಮಾಡಿ ಅದರ ಆಧಾರದಲ್ಲಿ ಪೂರೈಕೆ ಮಾಡಲಿದೆ. ಈ ನೂತನ ಐಡಿಯಾ ರಾಜ್ಯದಲ್ಲೇ ಮೊದಲ ಪ್ರಯೋಗ. ಇದರ ನಿರ್ವಹಣೆಯನ್ನು ಭೂವಿಜ್ಞಾನ ಮತ್ತು ಗಣಿ ಇಲಾಖೆ ಮಾಡಲಿದೆ.