Advertisement
ರಂಗಭೂಮಿ ಹಿನ್ನೆಲೆಯಿಂದ ಬಂದ ನಟ ಸಂಚಾರಿ ವಿಜಯ್ ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿ ರಾಷ್ಟ್ರ ಪ್ರಶಸ್ತಿ ಪಡೆದರು. ವಿಭಿನ್ನ ಪಾತ್ರಗಳ ಮೂಲಕ ಮನೆ ಮಾತಾಗಿದ್ದ ಸಂಚಾರಿ ವಿಜಯ್ ಚಿತ್ರರಂಗದಲ್ಲಿ ಗಟ್ಟಿಯಾಗಿ ತಳವೂರುವ ಮೊದಲೇ ತಮ್ಮ 38ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
Related Articles
Advertisement
ಸಂಚಾರಿ ವಿಜಯ್ ಮೊದಲಿನಿಂದಲೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ಲಾಕ್ಡೌನ್ ಸಂದರ್ಭದಲ್ಲೂ ಅನೇಕರಿಗೆ ಸಹಾಯಹಸ್ತ ಚಾಚಿದ್ದ ಅವರು ಅಂಗಾಂಗಳನ್ನು ದಾನ ಮಾಡಲು ಅವರ ಸಹೋದರರು ನಿರ್ಧರಿಸಿದ್ದಾರೆ.
ನಾನು ಅವನಲ್ಲ ಅವಳು, ಒಗ್ಗರಣೆ, ಕೃಷ್ಣ ತುಳಸಿ, ಆಟಕ್ಕುಂಟು ಲೆಕ್ಕಕ್ಕಿಕ್ಕ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ನಾತಿಚರಾಮಿ ಸೇರಿದಂತೆ ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ತೆರೆ ಕಂಡ ಆ್ಯಕ್ಟ್ 1978 ಸಿನಿಮಾದಲ್ಲಿ ಕಮಾಂಡೋ ಪಾತ್ರ ನಿರ್ವಹಿಸಿದ್ದ ಸಂಚಾರಿ ವಿಜಯ್ ತಮ್ಮ ಎಲ್ಲ ಸಿನಿಮಾಗಳಲ್ಲೂ ವಿಭಿನ್ನವಾದ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು.
ಶ್ರುತಿ ಹರಿಹರನ್ ಜೊತೆ ಸಂಚಾರಿ ವಿಜಯ್ ಅಭಿನಯಿಸಿದ್ದ ನಾತಿಚರಾಮಿ ಸಿನಿಮಾಗೂ ಅತ್ಯುತ್ತಮ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಬಂದಿತ್ತು. ಈ ಸಿನಿಮಾ ವಿಮರ್ಶಾತ್ಮಕವಾಗಿ ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ರಾಷ್ಟ್ರ ಪ್ರಶಸ್ತಿ ಬಂದ ಹರಿವು ಸಿನಿಮಾದಲ್ಲೂ ಸಂಚಾರಿ ವಿಜಯ್ ಮುಖ್ಯ ಪಾತ್ರ ನಿರ್ವಹಿಸಿದ್ದರು.
ಕನ್ನಡ ಮಾತ್ರವಲ್ಲದೆ ಹಲವು ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಸಂಚಾರಿ ವಿಜಯ್ ಕೆಲಸ ಮಾಡಿದ್ದಾರೆ. ಸಾಲು ಸಾಲಾಗಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಂಚಾರಿ ವಿಜಯ್ಗೆ ಇತ್ತೀಚೆಗೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ಅವಕಾಶಗಳು ಅರಸಿ ಬರತೊಡಗಿದ್ದವು. ಆದರೆ, ಚಿತ್ರರಂಗದಲ್ಲಿ ಇನ್ನೇನು ತಳವೂರುತ್ತಿರುವಾಗಲೇ ಅವರು ನಮ್ಮನ್ನು ಅಗಲಿದ್ದಾರೆ.
ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರ್ಷದಲ್ಲಿ ಕೆಲವೇ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಸಂಚಾರಿ ವಿಜಯ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು. ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆಯಬೇಕೆಂಬ ಅವರ ಕನಸು ಆರಂಭದಲ್ಲೇ ಕಮರಿಹೋಗಿದೆ.