Advertisement
ಸಂಚಾರಿ ಎಂದರೆ ಸಂಚಲನ ಮೂಡಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟ ಇನ್ನು ನಮ್ಮೆಲ್ಲರ ಮನದಲ್ಲಿ ನೆನಪು ಮಾತ್ರ. ಜುಲೈ 17ರ 1983 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿ, ಲಿಂಗಾಪುರ ಗ್ರಾಮದಲ್ಲಿ ಈ ಉದಯೋನ್ಮುಖ ದೈತ್ಯ ಪ್ರತಿಭೆಯ ಉದಯವಾಯಿತು. ತಂದೆ ಬಸವರಾಜಯ್ಯ ಚಿತ್ರ ಕಲಾವಿದರಾಗಿದ್ದು, ಸಂಗೀತ ವಾದಕರಾಗಿದ್ದರು. ತಾಯಿ ಗೌರಮ್ಮ ಜನಪದ ಕಲಾವಿದೆಯಾಗಿದ್ದು, ಭದ್ರಾವತಿ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಇಡೀ ಕುಟುಂಬವೇ ಕಲೆಯನ್ನು ಆರಾಧಿಸುತ್ತಿದ್ದಿದ್ದರಿಂದ ಸಂಚಾರಿ ವಿಜಯ್ ಬಾಲ್ಯದಿಂದಲೇ ಕಲಾ ಮಾತೆಯ ಆರಾಧನೆಯಲ್ಲಿ ತೊಡಗಿಸಿಕೊಂಡು ಚಿತ್ರ ಕಲಾವಿದರಾಗಿ ಗುರುತಿಸಿಕೊಂಡರು. ಅನಂತರ ರಂಗಭೂಮಿಯ ಆಸಕ್ತಿ ಇವರ ಸೆಳೆದು ಸಾವು ಧ್ಯೇಯಕ್ಕಿಲ್ಲ, ಶ್ಮಶಾನ ಕುರುಕ್ಷೇತ್ರ, ಸತ್ಯಾಗ್ರಹ, ಶೂದ್ರ ತಪಸ್ವಿ, ಸಾವಿರದವಳು, ಸಂತೆಯೊಳಗೊಂದು ಮನೆಯ ಮಾಡಿ, ಪ್ಲಾಸ್ಟಿಕ್ ಭೂತ, ಹಳ್ಳಿಯೂರ ಹಮ್ಮಿàರ, ಕಮಲಮಣಿ ಕಾಮಿಡಿ ಕಲ್ಯಾಣ, ಸಾಂಬಶಿವ ಪ್ರಹಸನ, ಮುಂತಾದ ನಾಟಕಗಳಲ್ಲಿ ಅಭಿನಯಿಸಿ ರಂಗಪ್ರೇಮಿಗಳನ್ನು ಮನರಂಜಿಸಿದ್ದರು.
Related Articles
Advertisement
38 ವರ್ಷದ ಈ ನಟನ ಸಾಧನೆ ಇನ್ನೂ ಹಲವಿತ್ತು, ಕನ್ನಡಕ್ಕೆ ಇನ್ನೂ ಪ್ರಶಸ್ತಿಗಳ ಸುರಿಮಳೆ ಬರುವುದಿತ್ತೇನು.ಸಂಚಾರಿಯ ಕನಸು ನೂರಿತ್ತು. ಇನ್ನೂ ಚಿತ್ರ ರಸಿಕರನ್ನು ಮನರಂಜಿಸಲಿತ್ತು. ಆದರೇನು ಮಾಡುವುದು, ಸಂಚಾರಿ ಸಂಚಾರಿ ನಿಯಮವನ್ನು ಪಾಲಿಸಲಿಲ್ಲ ಎಂಬ ಅಪವಾದದ ದುಃಖದ ಸುದ್ದಿ ನೀಡುತ್ತಲೇ ಮರೆಯಾದರು. ಪಾದರಸದಂತಹ ನಟನೆಯ ಪರಿಪೂರ್ಣ ನಟ, ನಟನ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಭೂಪ ಕನ್ನಡ ಚಿತ್ರರಂಗದಲ್ಲಿ ಮಿನುಗುತ್ತಿದ್ದ ಧ್ರುವತಾರೆ ಅನಿರೀಕ್ಷಿತವಾಗಿ ನಡೆದ ಅಪಘಾತದಲ್ಲಿ ವಿಧಿಯ ಕರೆಗೆ ಓಗೊಟ್ಟು ಸಂಚಾರ ಅಂತ್ಯಗೊಳಿಸಿದರು.
ಎಲ್ಲೆಲ್ಲೂ ನೀರವ ಮೌನ, ಕನ್ನಡ ಚಿತ್ರರಂಗ ಮತ್ತೆ ಮತ್ತೆ ಬರಿದಾಗುತ್ತಿದೆ ಇಂತಹ ಅಮೋಘ ನಟರನ್ನು ಕಳೆದುಕೊಂಡು. ಹೋಗಿಬನ್ನಿ ಸಂಚಾರಿ ವಿಜಯ್.
ಜೀವನದ ಸಂಚಾರದಲ್ಲಿ ಕಣ್ಮರೆಯಾದರು ನಿಮ್ಮೆಲ್ಲ ಅಭಿಮಾನಿಗಳ ನೆನಪಲ್ಲಿ ಸದಾಕಾಲವೂ ಸಂಚಾರಿಯಾಗಿ ನಿಶಬ್ದದಿಂದಲೇ ಸಂಚರಿಸುವಿರಿ. ಸಾವಲ್ಲೂ ಮಾನವೀಯತೆ ಮೆರೆದು ಅಂಗಾಗ ದಾನ ಮಾಡಿ ಇನ್ನೊಂದು ಜೀವಕ್ಕೆ ಆಸರೆಯಾದ ನಿಮ್ಮ ಅಭಿಮಾನಿ ನಾವು ಎಂಬ ಹೆಮ್ಮೆ, ಸಾರ್ಥಕತೆ ನಮ್ಮಲ್ಲಿದೆ.
ಕೃತಿಕಾ ಸದಾಶಿವ
ದ್ವಿತೀಯ ಪತ್ರಿಕೋದ್ಯಮ ವಿವೇಕಾನಂದ ಕಾಲೇಜು ಪುತ್ತೂರು