Advertisement

ಯೋಧರು ಮೆಚ್ಚಿದ ಸಂಯುಕ್ತ 2; 300 ಸೈನಿಕರಿಗೆ ಉಚಿತ ಪ್ರದರ್ಶನ

02:58 PM Nov 16, 2017 | Team Udayavani |

ಗಡಿ ಕಾಯುವ ಯೋಧರ ಕುರಿತು ಈಗಾಗಲೇ ಅನೇಕ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಇತ್ತೀಚೆಗೆ ಬಂದ “ಸಂಯುಕ್ತ 2′ ಚಿತ್ರದಲ್ಲೂ ಯೋಧರಿಗೆ ಸಂಬಂಧಿಸಿದ ವಿಷಯಗಳಿವೆ. ಕಳೆದ ವಾರ ಬಿಡುಗಡೆಯಾಗಿರುವ ಈ ಚಿತ್ರವನ್ನು ಯೋಧರಿಗೆ ಉಚಿತವಾಗಿ ತೋರಿಸಬೇಕೆಂಬ ಉದ್ದೇಶ ನಿರ್ಮಾಪಕ ಡಾ.ಡಿ.ಎಸ್‌.ಮಂಜುನಾಥ್‌ ಅವರಿಗಿತ್ತು. ಅದರಂತೆ ಅವರು, ನ.13 ರ ಸೋಮವಾರ ಮಂತ್ರಿ ಮಾಲ್‌ನಲ್ಲಿ ಸುಮಾರು 300 ಯೋಧರನ್ನು ಆಹ್ವಾನಿಸಿ, “ಸಂಯುಕ್ತ 2′ ಚಿತ್ರವನ್ನು ಉಚಿತವಾಗಿ ವಿಶೇಷ ಪ್ರದರ್ಶನ ಮಾಡುವ ಯೋಧರ ಮೇಲಿನ ಪ್ರೀತಿ, ದೇಶ ಮೇಲಿರುವ ಭಕ್ತಿ ಮೆರೆದಿದ್ದಾರೆ.

Advertisement

“ಸಂಯುಕ್ತ 2′ ಚಿತ್ರದಲ್ಲಿ ದೇಶಭಕ್ತಿ ಮತ್ತು ಯೋಧರ ಅನೇಕ ವಿಚಾರ ಧಾರೆಗಳಿವೆ. ಯೋಧರಿಗೆ ಚಿತ್ರ ತೋರಿಸುವ ಸಲುವಾಗಿ, ನಿರ್ಮಾಪಕರು ಬೆಂಗಳೂರು ಸೇನೆ ಕಚೇರಿಯ 300 ಸೈನಿಕರನ್ನು ಗೌರವದಿಂದ ಆಹ್ವಾನಿಸುವ ಮೂಲಕ ಚಿತ್ರವನ್ನು ತೋರಿಸಿದ್ದಾರೆ. ಈ ಚಿತ್ರದಲ್ಲಿ ದೇಶಭಕ್ತಿಯ ಸಂದೇಶವಿದೆ. ಅಷ್ಟೇ ಅಲ್ಲ, ಸೈನಿಕರ ನೋವುಗಳಿಗೆ ಸ್ಪಂದಿಸಬೇಕು, ದೇಶದ ಪ್ರತಿಯೊಬ್ಬರೂ ಅವರಿಗೆ ನೆರವಾಗಬೇಕು ಎಂಬ ಕಾಳಜಿಯ ಅಂಶಗಳೂ ಇವೆ. ಇದರೊಂದಿಗೆ ಪ್ರತಿಯೊಬ್ಬರೂ ಸೈನಿಕ ಕಲ್ಯಾಣ ನಿಧಿಗೆ ಕೇವಲ ಒಂದು ರುಪಾಯಿ ನೀಡಿದರೆ, ಅದೇ ಅವರಿಗೆ ಮತ್ತು ದೇಶಕ್ಕೆ ಕೊಡುವ ದೊಡ್ಡ ಗೌರವ ಎಂಬ ಸಂದೇಶ ಸಾರಲಾಗಿದೆ. 

ಈ ಚಿತ್ರಕ್ಕೆ ಅಭಿರಾಮ್‌ ನಿರ್ದೇಶಕರು. ಇದು ಇವರ ಮೊದಲ ನಿರ್ದೇಶನದ ಚಿತ್ರ. ಇನ್ನು, ನಿರ್ಮಾಪಕರು ಚಿತ್ರ ಬಿಡುಗಡೆಯ ಮೊದಲ ದಿನ ಬೆಂಗಳೂರಿನ ಪ್ರಮುಖ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಹಣವನ್ನು ಸದ್ಯದಲ್ಲೇ ಸೈನಿಕ ಕಲ್ಯಾಣ ನಿಧಿಗೆ ಕೊಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಚೇತನ್‌ ಚಂದ್ರ ನಾಯಕರಾಗಿದ್ದಾರೆ. ಐಶ್ವರ್ಯ ಸಿಂಧೋಗಿ, ನೇಹಾಪಾಟೀಲ್‌ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next