Advertisement

ಸಮುದ್ರಯಾನಕ್ಕೆ ಭಾರತ ಸಜ್ಜು; ಸಮುದ್ರದ 6 ಸಾವಿರ ಅಡಿ ಆಳಕ್ಕೆ ತೆರಳಲಿದ್ದಾರೆ ವಿಜ್ಞಾನಿಗಳು

07:06 PM Aug 06, 2022 | Team Udayavani |

ನವದೆಹಲಿ: ಬ್ರಹ್ಮಾಂಡದಾಚೆಗಿನ ರಹಸ್ಯವನ್ನು ತಿಳಿಯಲು “ಗಗನಯಾನ’, ಆಳ ಸಮುದ್ರದ ನಿಗೂಢ ಜಗತ್ತನ್ನು ಆವಿಷ್ಕರಿಸಲು “ಸಮುದ್ರಯಾನ’!

Advertisement

ಹೌದು, ಆಳ ಸಮುದ್ರದ ಶೇ.95ರಷ್ಟು ಭಾಗವನ್ನು ಇನ್ನೂ ಯಾರೂ ಅನ್ವೇಷಣೆ ಮಾಡಿಲ್ಲ. ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಭಾರತವು ಸದ್ಯದಲ್ಲೇ “ಸಮುದ್ರಯಾನ’ ಯೋಜನೆಯ ಮೂಲಕ ತಜ್ಞರ ತಂಡವೊಂದನ್ನು ಆಳ ಸಮುದ್ರಕ್ಕೆ ಕಳುಹಿಸಿಕೊಡಲಿದೆ. ಮಾನವಸಹಿತ ಜಲಾಂತರ್ಗಾಮಿ ನೌಕೆ “ಮತ್ಸ್ಯ 6000’ದ ಮೂಲಕ ಮೂವರು ತಜ್ಞರು ಕಡಲಾಳಕ್ಕೆ ತೆರಳಿ ಹಲವು ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ.

ಮತ್ಸ್ಯ 6000 ಮೂಲಕ ಪಯಣ
ಮಾನವಸಹಿತ ಜಲಾಂತರ್ಗಾಮಿ ನೌಕೆಯ ಹೆಸರೇ “ಮತ್ಸ್ಯ 6000′. ಇಸ್ರೋ, ಐಐಟಿಎಂ, ಡಿಆರ್‌ಡಿಒ ಸೇರಿದಂತೆ ಹಲವು ಸಂಸ್ಥೆಗಳ ಸಹಾಯದಿಂದ ದೇಶೀಯವಾಗಿ ಈ ಜಲಾಂತರ್ಗಾಮಿಯನ್ನು ನಿರ್ಮಿಸಲಾಗಿದೆ.

ಇದು ಸಂಶೋಧನೆಗೆ ಹೇಗೆ ಸಹಾಯಮಾಡುತ್ತದೆ?
ಈ ನೌಕೆಯಲ್ಲಿ ಪ್ರಯಾಣಿಸುವ ವಿಜ್ಞಾನಿಗಳು ಈವರೆಗೆ ಅನ್ವೇಷಣೆ ಮಾಡದಂಥ ಆಳ-ಸಮುದ್ರವನ್ನು ಅವಲೋಕಿಸಿ, ಅದರ ಕುರಿತು ಅಧ್ಯಯನ ನಡೆಸಲಿದ್ದಾರೆ. ಒಂದು ಸಾವಿರದಿಂದ 5500 ಮೀಟರ್‌ ಆಳದಲ್ಲಿರುವ ಪಾಲಿಮೆಟಾಲಿಕ್‌ ಮ್ಯಾಂಗನೀಸ್‌ ನೊಡ್ನೂಲ್‌ಗ‌ಳು, ಗ್ಯಾಸ್‌ ಹೈಡ್ರೇಟ್‌ಗಳು, ಹೈಡ್ರೋ ಥರ್ಮಲ್‌ ಸಲ್ಫೈಡ್ ಗಳು ಮತ್ತು ಕೊಬಾಲ್ಟ್ ಕ್ರಸ್ಟ್‌ಗಳು ಮುಂತಾದ ಸಂಪನ್ಮೂಲಗಳ ಅಧ್ಯಯನವನ್ನೂ ಕೈಗೊಳ್ಳಲಿದ್ದಾರೆ.

ಉದ್ದೇಶವೇನು?
– ಸಮುದ್ರದಾಳದ ಜೀವಿಗಳು, ಜೀವವೈವಿಧ್ಯದ ಬಗ್ಗೆ ತಿಳಿಯುವುದು
– ಆಳ ಸಮುದ್ರ ಗಣಿಗಾರಿಕೆ, ಖನಿಜಾಂಶಗಳು ಸೇರಿದಂತೆ ಸಮುದ್ರದಾಳದಲ್ಲಿರುವ ಸಂಪನ್ಮೂಲಗಳ ಶೋಧನೆ
– ಸಮುದ್ರದಡಿಯಲ್ಲಿ ಕಳೆದುಹೋದ ವಸ್ತುಗಳ ಪತ್ತೆ
– ನೀರಿನಡಿಯಲ್ಲಿರುವ ಸಲಕರಣೆಗಳ ರಿಪೇರಿ ಮತ್ತು ನಿರ್ವಹಣೆ
– ಆಳ-ಸಮುದ್ರ ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜನ

Advertisement

ಸಮುದ್ರಯಾನ
ಯೋಜನೆಯ ಅಂದಾಜು ವೆಚ್ಚ – 4,077 ಕೋಟಿ ರೂ.
ಯೋಜನೆಯ ಕಾಲಾವಧಿ – 5 ವರ್ಷಗಳು
ಸಮುದ್ರದ ಎಷ್ಟು ಆಳಕ್ಕೆ ವಿಜ್ಞಾನಿಗಳ ಸಂಚಾರ?- 6,000 ಮೀಟರ್‌
ಈವರೆಗೆ ಎಷ್ಟು ದೇಶಗಳು ಮಾನವಸಹಿತ ಜಲಾಂತರ್ಗಾಮಿಗಳನ್ನು ಕಳುಹಿಸಿದೆ?- 5

ಜಲಾಂತರ್ಗಾಮಿಯ ವೈಶಿಷ್ಟ್ಯ
ಎಷ್ಟು ಆಳಕ್ಕೆ ಸಂಚರಿಸಬಲ್ಲದು?- 6 ಕಿ.ಮೀ.
ಸಿಬ್ಬಂದಿ ಸಾಮರ್ಥ್ಯ – 3 (1 ಪೈಲಟ್‌, 2 ವಿಜ್ಞಾನಿಗಳು)
ಒಳಗಿರುವ ಸ್ಥಳಾವಕಾಶ- 5 ಕ್ಯೂಬಿಕ್‌ ಮೀಟರ್‌
ಎಷ್ಟು ಹೊತ್ತು ನೀರಿನಡಿ ಇರಬಲ್ಲದು?- 6-8 ಗಂಟೆಗಳು

Advertisement

Udayavani is now on Telegram. Click here to join our channel and stay updated with the latest news.

Next