Advertisement

ಶಕ್ತಿಶಾಲಿ ಆ್ಯಂಟಿ ವೈರಸ್‌ ಶೀಘ್ರ? ಗೂಗಲ್‌-ಮೈಕ್ರೊಸಾಫ್ಟ್ ಜತೆಗೆ ಕೈಗೂಡಿಸಿದ ಸ್ಯಾಮ್ಸಂಗ್‌

12:41 AM Jul 10, 2022 | Team Udayavani |

ನವದೆಹಲಿ: ಅಂತರ್ಜಾಲ ತಾಣಗಳ ಮೇಲೆ, ಮೊಬೈಲ್‌, ಲ್ಯಾಪ್‌ಟಾಪ್‌ ಗಳು ಮೇಲೆ ಪ್ರಬಲ ವೈರಸ್‌ಗಳ ದಾಳಿಯಾಗುವುದು ಈಗ ಸರ್ವೇಸಾಮಾನ್ಯ. ಇದನ್ನು ತಡೆಯಲು ವಿಶ್ವದ ಪ್ರಬಲ ತಾಂತ್ರಿಕ ದೈತ್ಯ ಕಂಪನಿಗಳು ಯತ್ನಿಸುತ್ತಲೇ ಇರುತ್ತವೆ.

Advertisement

ಇದೀಗ ದ.ಕೊರಿಯದ ಪ್ರಖ್ಯಾತ ಸ್ಯಾಮ್ಸಂಗ್‌ ಕಂಪನಿ, ಅಮೆರಿಕದ ಮೈಕ್ರೊಸಾಫ್ಟ್ ಮತ್ತು ಗೂಗಲ್‌ ಜೊತೆಗೂಡಿ ಪ್ರಬಲ ವ್ಯವಸ್ಥೆಯೊಂದನ್ನು ಸಿದ್ಧಪಡಿಸಲು ಹೊರಟಿದೆ.

ಆ್ಯಪಲ್‌ ಕಂಪನಿ ತನ್ನ ಐಫೋನ್‌, ಐಪ್ಯಾಡ್‌, ಮ್ಯಾಕ್‌ಗಳನ್ನು ರಕ್ಷಿಸಿಕೊಳ್ಳಲು ಲಾಕ್‌ಡೌನ್‌ ಮೋಡ್‌ ಎಂಬ ಆಯ್ಕೆಯನ್ನು ಕೆಲವು ದಿನಗಳ ಹಿಂದೆ ಪ್ರಕಟಿಸಿದೆ.

ಹೇಳದೇ ಕೇಳದೇ ರಹಸ್ಯವಾಗಿ ಒಳನುಸುಳಿ ನಮ್ಮ ಮಾಹಿತಿಯನ್ನು ಕದಿಯುವ ವೈರಸ್‌ಗಳಿಂದ; ಲಾಕ್‌ಡೌನ್‌ ಆಯ್ಕೆ ಬಳಕೆದಾರರನ್ನು ರಕ್ಷಿಸುತ್ತದೆ. ಅದರ ಬೆನ್ನಲ್ಲೇ ಸ್ಯಾಮ್ಸಂಗ್‌ ಈ ಘೋಷಣೆ ಮಾಡಿದೆ.

ಇದನ್ನೂ ಓದಿ :ಗೊಟಬಯಾ ಪರಾರಿ: ಶ್ರೀಲಂಕಾದಲ್ಲಿ ಅರಾಜಕತೆ ಹೇಗಿದೆ ಎಂಬುದಕ್ಕೆ ಈ ವೈರಲ್ ವಿಡಿಯೋಗಳೇ ಸಾಕ್ಷಿ!

Advertisement

ಸ್ಯಾಮ್ಸಂಗ್‌ ಯೋಜನೆಯೇನು?: ಸ್ಯಾಮ್ಸಂಗ್‌ನ ಗೆಲಾಕ್ಸಿ ಮೊಬೈಲ್‌ ಅತ್ಯಂತ ಜನಪ್ರಿಯವಾಗಿದೆ. ಈ ಮೊಬೈಲ್‌ನೊಳಗೆ ವೈರಸ್‌ ನುಸುಳುವುದನ್ನು ತಡೆಯಲು ಹಲವು ಸ್ತರದ ಭದ್ರತಾವ್ಯವಸ್ಥೆಯನ್ನು ಸ್ಯಾಮ್ಸಂಗ್‌ ಮಾಡಲಿದೆ. ಹಾರ್ಡ್‌ವೇರ್‌ (ಮೊಬೈಲ್‌) ಮತ್ತು ಸಾಫ್ಟ್ ವೇರ್‌ (ಮೊಬೈಲ್‌ನಲ್ಲಿ ಬಳಸುವ ಆ್ಯಪ್‌ ಗಳು)ಗಳನ್ನು ಬಳಕೆದಾರ ತಾನೇ ಸೃಷ್ಟಿಸಿದ ಕೀ ಮೂಲಕ ರಕ್ಷಿಸಲಿದೆ. ಈ ಕೀಯನ್ನು ತೆರೆಯಲು ಸ್ವತಃ ಸ್ಯಾಮ್ಸಂಗ್‌ಗೂ ಸಾಧ್ಯವಿಲ್ಲ.

ಬಳಕೆದಾರ ಒಂದು ಪ್ರತ್ಯೇಕ ಫೋಲ್ಡರ್‌ ಸೃಷ್ಟಿಸಿ, ಪಾಸ್‌ವರ್ಡ್‌, ಪಿನ್‌, ಖಾಸಗಿ ಮಾಹಿತಿಗಳನ್ನು ಅಲ್ಲಿ ಸಂಗ್ರಹಿಸಿಡಬಹುದು.

ರಿಯಲ್‌ ಮಾನಿಟರಿಂಗ್‌ ವ್ಯವಸ್ಥೆಯ ಮೂಲಕ ಅಲ್ಲೇನಾದರೂ ಅಸಹಜ ಬೆಳವಣಿಗೆಗಳಾದರೆ ಸ್ಯಾಮ್ಸಂಗ್‌ ಪತ್ತೆ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next