ಬೆಂಗಳೂರು: ಬೆಂಗಳೂರಿನ ಹೃದಯಭಾಗದಲ್ಲಿರುವ ಸ್ಯಾಮ್‌ಸಂಗ್ ಒಪೇರಾ ಹೌಸ್ ಅನ್ನು ಸ್ಯಾಮ್ ಸಂಗ್ ಇಂಡಿಯಾ ನವೀಕರಿಸಿದ್ದು, ಹೊಸದಾಗಿ ಸ್ಟಾರ್ ಬಕ್ಸ್ ಸ್ಟೋರ್ ಅನ್ನು ತೆರೆದಿದೆ.
ಗ್ರಾಹಕರಿಗೆ ಹೊಸ ತಂತ್ರಜ್ಞಾನಗಳ ಅನುಭವ ದೊರಕುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಸ್ಯಾಮ್‌ಸಂಗ್ ಒಪೇರಾ ಹೌಸ್‌ಗೆ ಭೇಟಿ ನೀಡುವ ಗ್ರಾಹಕರು ಈಗ ಸ್ಯಾಮ್‌ಸಂಗ್‌ನ ಸಂಪೂರ್ಣ ಉತ್ಪನ್ನಗಳು ಮತ್ತು ಕನೆಕ್ಟೆಡ್ ಲಿವಿಂಗ್, ಗೇಮಿಂಗ್ ಅರೆನಾ, ಆಡಿಯೋ, ಹೋಮ್ ಥಿಯೇಟರ್ ಮತ್ತು ಲೈಫ್‌ಸ್ಟೈಲ್ ಟಿವಿಗಳಂತಹ ಹೊಸ ವಲಯಗಳನ್ನು ಒಂದು ಕಪ್ ಕಾಫಿಯೊಂದಿಗೆ ಆನಂದಿಸಬಹುದು ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.
70 ಆಸನಗಳನ್ನುಹೊಂದಿರುವ ಹೊಸ ಸ್ಟಾರ್‌ಬಕ್ಸ್ ಔಟ್‌ಲೆಟ್ ಅನ್ನು ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಜೋಂಗ್ ಬಮ್ ಪಾರ್ಕ್ ಮತ್ತು ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಸುಶಾಂತ್ ಡ್ಯಾಶ್ ಉದ್ಘಾಟಿಸಿದರು.