ಗುರುಗ್ರಾಮ: ಕಳೆದ 17 ವರ್ಷಗಳಿಂದ ಜಾಗತಿಕ ನಂಬರ್ ಒನ್ ಟಿವಿ ಬ್ರ್ಯಾಂಡ್ ಆದ ಸ್ಯಾಮ್ ಸಂಗ್, ತನ್ನ ಅಲ್ಟ್ರಾ-ಪ್ರೀಮಿಯಂ 2023 ನಿಯೋ ಕ್ಯೂಎಲ್‌ಇಡಿ 8 ಕೆ ಟಿವಿಗಳು ಮತ್ತು ನಿಯೋ ಕ್ಯೂಎಲ್‌ಇಡಿ 4 ಕೆ ಟಿವಿಗಳನ್ನು ಬಿಡುಗಡೆ ಮಾಡಿದೆ.
ಈ ಹೊಸ ಕ್ಯೂಎಲ್ಇಡಿ ಟಿವಿಗಳು 50-ಇಂಚಿನಿಂದ ಮೊದಲುಗೊಂಡು 98-ಇಂಚು ಅಳತೆಯ ಮಾದರಿಯಲ್ಲಿ ಲಭ್ಯ.
ನಮ್ಮ ಇತ್ತೀಚಿನ ನಿಯೋ ಕ್ಯು ಎಲ್ ಇ ಡಿ ಟಿವಿಗಳು ಪರಿಸರ ಸ್ನೇಹಿ ತಂತ್ರಜ್ಞಾನಗಳೊಂದಿಗೆ ಹೊರ ಬರುತ್ತಿವೆ.8ಕೆ ರೆಸಲ್ಯೂಶನ್ ಮತ್ತು ಅಡ್ವಾನ್ಸ್ ಸ್ ಚಿತ್ರ ಮತ್ತು ಧ್ವನಿ ಗುಣಮಟ್ಟ ಹೊಂದಿವೆ. ನಿಯೋ ಕ್ಯು ಎಲ್ ಇ ಡಿ ಟಿವಿಗಳು ಭಾರತದಲ್ಲಿನ ಪ್ರೀಮಿಯಂ ಟಿವಿ ಮಾರುಕಟ್ಟೆಯಲ್ಲಿ ನಮ್ಮ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸುವ ವಿಶ್ವಾಸವಿದೆ ಎಂದು ಏಷ್ಯಾದ ಸ್ಯಾಮ್ ಸಂಗ್ ಸೌತ್‌ವೆಸ್ಟ್‌ನ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್ ಬಿಡುಗಡೆ ಸಂದರ್ಭದಲ್ಲಿ ತಿಳಿಸಿದರು.
ನಿಯೋ ಕ್ಯು ಎಲ್ ಇ ಡಿ ಟಿವಿಗಳಲ್ಲಿನ ಚಿತ್ರಗಳು ಸ್ಯಾಮ್‌ಸಂಗ್ ನ ಕ್ವಾಂಟಮ್ ಮ್ಯಾಟ್ರಿಕ್ಸ್ ಟೆಕ್ನಾಲಜಿ ಹೊಂದಿದ್ದು, ಅದು 33 ಮಿಲಿಯನ್ ಪಿಕ್ಸೆಲ್‌ಗಳವರೆಗೆ ಪವರ್ ನೀಡುತ್ತದೆ ಮತ್ತು ಬಿಲಿಯನ್ ಬಣ್ಣಗಳನ್ನು ನೀಡುತ್ತದೆ. ಸ್ಯಾಮ್‌ಸಂಗ್‌ನ ಸುಧಾರಿತ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಇದು ಕ್ವಾಂಟಮ್ ಮಿನಿ ಎಲ್‌ಇಡಿ-ಲಿಟ್ ಟಿವಿಯನ್ನು 14-ಬಿಟ್ ಪ್ರೊಸೆಸಿಂಗ್ ಮತ್ತು ಎಐ ಅಪ್‌ಸ್ಕೇಲಿಂಗ್‌ನೊಂದಿಗೆ ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
Related Articles
ನಿಯೋ ಕ್ಯು ಎಲ್ ಇ ಡಿ 8ಕೆ ಮತ್ತು 4ಕೆ ಟಿವಿಗಳೆರಡೂ ಮಾದರಿಗಳು ಪ್ರಕಾಶಮಾನವಾದ ಹೈಲೈಟ್ ಗಳನ್ನು ಮತ್ತು ಪ್ಯಾಂಟೋನ್® ತಜ್ಞರು ಮೌಲ್ಯೀಕರಿಸಿದ ವ್ಯಾಪಕ ಶ್ರೇಣಿಯ ಬಣ್ಣಗಳನ್ನು ನೀಡುತ್ತವೆ. 2,030 ಪ್ಯಾಂಟೋನ್® ಬಣ್ಣಗಳು ಮತ್ತು 110 ಸ್ಕಿನ್ ಟೋನ್ ಛಾಯೆಗಳನ್ನು ಒಳಗೊಂಡಿದೆ.
ಹೊಸ ಶ್ರೇಣಿಯ ನಿಯೋ ಕ್ಯು ಎಲ್ ಇ ಡಿ ಟಿವಿಗಳು ಕ್ಯು ಸಿಂಫನಿ 3.0 ತಂತ್ರಜ್ಞಾನ ಹೊಂದಿದ್ದು, ಇದು ಸರೌಂಡ್ ಎಫೆಕ್ಟ್‌ಗಾಗಿ ಟಿವಿ ಮತ್ತು ಸೌಂಡ್‌ಬಾರ್ ಸ್ಪೀಕರ್‌ಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸಲು ಸಹಾಯಕವಾಗಿದೆ. ಪ್ರಪಂಚದ ಮೊದಲ ವೈರ್ ಲೆಸ್ ಡಾಲ್ಬಿ ಅಟ್ಮಾಸ್® ಮತ್ತು ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಹೊಂದಿವೆ.
ಹೊಸ ಸರಣಿಯು ಅಂತರ್ನಿರ್ಮಿತ ಐಓಟಿ ಹಬ್‌ನೊಂದಿಗೆ ಕಾಮ್ ಆನ್‌ಬೋರ್ಡಿಂಗ್ ಸೌಲಭ್ಯ ಹೊಂದಿದೆ.
ಕಾಮ್ ಆನ್ ಬೋರ್ಡಿಂಗ್ ನಿಂದ ಸ್ಯಾಮ್ ಸಂಗ್ ಸಾಧನಗಳನ್ನು ಸಿಂಕ್ ಮಾಡುತ್ತದೆ. ಐಓಟಿ ಸಾಧನಗಳನ್ನೂ ಸುಲಭವಾಗಿ ನಿಯಂತ್ರಿಸುತ್ತದೆ. ಈ ಟೆಲಿವಿಷನ್‌ಗಳು ಮಗುವಿನ ಅಳು ಅಥವಾ ನಾಯಿ ಬೊಗಳುವ ಎಚ್ಚರಿಕೆಗಳನ್ನು ಐಓಟಿ-ಚಾಲಿತ ಸಂವೇದಕಗಳ ಸಹಾಯದಿಂದ ಗ್ರಾಹಕರ ಸ್ಮಾರ್ಟ್ ಫೋನ್ ಗಳಿಗೆ ಕಳುಹಿಸುವ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿವೆ.
ಸ್ಯಾಮ್‌ಸಂಗ್‌ನ ಸ್ವಂತ ವರ್ಚುವಲ್ ಸಹಾಯಕ, ಬಿಕ್ಸ್‌ಬಿ ಜೊತೆಗೆ, ನಿಯೋ ಕ್ಯೂಎಲ್‌ಇಡಿ ಟಿವಿಗಳು ಸಹ ಅಲೆಕ್ಸಾ ಇನ್ ಬಿಲ್ಟ್ ಆಗಿವೆ. ಅಲೆಕ್ಸಾ ಮೂಲಕ ಗ್ರಾಹಕರು ರಿಮೋಟ್‌ನಲ್ಲಿ ಮೈಕ್ ಬಟನ್ ಅನ್ನು ಒತ್ತಿ ಮತ್ತು ‘ಅಲೆಕ್ಸಾ, ಚಲನಚಿತ್ರಗಳಿಗಾಗಿ ಹುಡುಕು, ಧ್ವನಿ ಹೆಚ್ಚಿಸು, ಕಡಿಮೆ ಮಾಡು ಎಂದು ತಿಳಿಸಬಹುದು. Google Meet ನೊಂದಿಗೆ ವೀಡಿಯೊ ಕರೆ ಗಳನ್ನು ಮಾಡಬಹುದು.
ಬೆಲೆ ಮತ್ತು ಲಭ್ಯತೆ
ನಿಯೋ QLED 8K ಟಿವಿಗಳು QN990C(98-inch), QN900C (85-inch), QN800C (75, 65-inch), QN700C (65-inch) ಮಾದರಿಗಳಲ್ಲಿ ಬರುತ್ತವೆ ಮತ್ತು 3,14,990 ರೂ.ಗಳಿಂದ ಬೆಲೆ ಪ್ರಾರಂಭವಾಗುತ್ತದೆ.
ನಿಯೋ QLED 4K ಟಿವಿಗಳು QN95C (65, 55-ಇಂಚಿನ), QN90C (85-, 75-, 65-, 55-, 50-ಇಂಚು), QN85C (65-, 55-ಇಂಚಿನ) ಮಾದರಿಗಳಲ್ಲಿ ಬರುತ್ತವೆ, ಇದರ ಬೆಲೆ 1,41,990 ರೂ.ಗಳಿಂದ ಪ್ರಾರಂಭವಾಗಲಿದೆ. ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಸ್ಯಾಮ್‌ಸಂಗ್ ಶಾಪ್ ಸೇರಿದಂತೆ ಎಲ್ಲಾ ಸ್ಯಾಮ್‌ಸಂಗ್ ರಿಟೇಲ್ ಸ್ಟೋರ್‌ಗಳು, ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯ.
ಸೌಂಡ್ ಬಾರ್ ಆಫರ್: ಮೇ 25 ರವರೆಗೆ ನಿಯೋ ಕ್ಯು ಎಲ್ ಇ ಡಿ ಟಿವಿಗಳನ್ನು ಖರೀದಿಸುವ ಗ್ರಾಹಕರು 99,990 ರೂ. ಮೌಲ್ಯದ ಸ್ಯಾಮ್ ಸಂಗ್ ಸೌಂಡ್ ಬಾರ್ ಹೆಚ್ ಡಬ್ಲ್ಯು-ಕ್ಯು990 ಅನ್ನು ಆಯ್ದ ನಿಯೋ ಕ್ಯು ಎಲ್ ಇ ಡಿ 8ಕೆ ಟಿವಿಗಳೊಂದಿಗೆ ಹಾಗೂ 44,990 ರೂ. ಮೌಲ್ಯದ ಸ್ಯಾಮ್ ಸಂಗ್ ಸೌಂಡ್ ಬಾರ್ ಹೆಚ್ ಡಬ್ಲ್ಯು-ಕ್ಯು800 ಅನ್ನು ನಿಯೋ ಕ್ಯು ಎಲ್ ಇ ಡಿ 4ಕೆ ಟಿವಿಗಳೊಂದಿಗೆ ಉಚಿತವಾಗಿ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.