Advertisement

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಸರಣಿ: 24 ಗಂಟೆಗಳಲ್ಲಿ 1.40 ಲಕ್ಷ ಮುಂಗಡ ಬುಕ್ಕಿಂಗ್ ದಾಖಲೆ

08:37 PM Feb 16, 2023 | Team Udayavani |

ನವದೆಹಲಿ: ಭಾರತದಲ್ಲಿ ಹೊಸದಾಗಿ ಬಿಡುಗಡೆಯಾದ ಗ್ಯಾಲಕ್ಸಿ ಎಸ್23 ಸರಣಿ ಮೊಬೈಲ್ ಫೋನ್ ಗಳು ದಾಖಲೆಯ ಮುಂಗಡ ಬುಕ್ಕಿಂಗ್ ಸ್ವೀಕರಿಸಿದೆ. ಮೊದಲ 24 ಗಂಟೆಗಳಲ್ಲಿ, 1.4 ಲಕ್ಷಕ್ಕೂ ಅಧಿಕ ಗ್ಯಾಲಕ್ಸಿ ಎಸ್23 ಸರಣಿಯ ಯುನಿಟ್ ಗಳು ಮುಂಗಡ ಬುಕ್ಕಿಂಗ್ ಆಗಿದ್ದು, ಇದು ಸ್ಯಾಮ್ ಸಂಗ್ ಫ್ಲಾಗ್ ಶಿಪ್ ಸಾಧನಗಳಲ್ಲಿ ಹೊಸ ದಾಖಲೆಯಾಗಿದೆ. ಹೊಸ ಗ್ಯಾಲಕ್ಸಿ ಎಸ್23 ಸರಣಿ ಫೋನ್ ಗಳು ಭಾರತದ ನೊಯ್ಡಾ ಫ್ಯಾಕ್ಟರಿಯಲ್ಲಿ ತಯಾರಾಗಿದ್ದು, ಇದು ಭಾರತದ ತಯಾರಿಕೆ ಮತ್ತು ಬೆಳವಣಿಗೆಯ ಕಥೆಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಸ್ಯಾಮ್ ಸಂಗ್ ಇಂಡಿಯಾದ ಮೊಬೈಲ್ ಬಿಸಿನೆಸ್ ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಹೇಳಿದ್ದಾರೆ.

Advertisement

ಗ್ಯಾಲಕ್ಸಿ ಎಸ್23 ಹೊಸ ಅಲ್ಟ್ರಾ 200 ಎಂಪಿ ಸೆನ್ಸಾರ್ ನೊಂದಿಗೆ ಲಭ್ಯವಿದ್ದು, ಇದರಲ್ಲಿ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿಯುವ ಅಡಾಪ್ಟಿವ್ ಪಿಕ್ಸೆಲ್ ಗಳಿವೆ. ಗ್ಯಾಲಕ್ಸಿ ಎಸ್23 ಸರಣಿ ವ್ಯವಸ್ಥಿತವಾಗಿ ವಿನ್ಯಾಸಗೊಳಿಸಲಾದ ಸ್ನ್ಯಾಪ್ ಡ್ರ್ಯಾಗನ್ 8 ಜೆನ್ 2 ಪ್ರೊಸೆಸರ್ ಹೊಂದಿದೆ. ಗ್ಯಾಲಕ್ಸಿ ಎಸ್23 ಸರಣಿ ನಾಲ್ಕು ಅಂಡ್ರಾಯ್ಡ್ ಅಪ್ಡೇಟ್ ಹಾಗೂ ಐದು ವರ್ಷಗಳ ಬದ್ರತಾ ಅಪ್ಡೇಟ್ ಹೊಂದಿದೆ ಹಾಗೂ ಸ್ಯಾಮ್ ಸಂಗ್ ನಾಕ್ಸ್ ರಕ್ಷಣೆಯೊಂದಿಗೆ ಲಭ್ಯವಿದೆ.

ಬೆಲೆ ಮತ್ತು ಲಭ್ಯತೆ

ಗ್ಯಾಲಕ್ಸಿ ಎಸ್23 ಅಲ್ಟ್ರಾ (12/1ಟಿಬಿ) ರೂ 154999 ಫ್ಯಾಂಟಮ್ ಬ್ಲ್ಯಾಕ್, ಕ್ರೀಂ, ಗ್ರೀನ್

ಗ್ಯಾಲಕ್ಸಿ ಎಸ್23 ಅಲ್ಟ್ರಾ (12/512 ಜಿಬಿ) ರೂ 134999

Advertisement

ಗ್ಯಾಲಕ್ಸಿ ಎಸ್23 ಅಲ್ಟ್ರಾ (12/256 ಜಿಬಿ) ರೂ 124999

ಗ್ಯಾಲಕ್ಸಿ ಎಸ್23+ (8/512 ಜಿಬಿ) ರೂ 104999 ಫ್ಯಾಂಟಮ್ ಬ್ಲ್ಯಾಕ್, ಕ್ರೀಂ

ಗ್ಯಾಲಕ್ಸಿ ಎಸ್23+ (8/256 ಜಿಬಿ) ರೂ 94999

ಗ್ಯಾಲಕ್ಸಿ ಎಸ್23 (8/256 ಜಿಬಿ) ರೂ 79999 ಫ್ಯಾಂಟಮ್ ಬ್ಲ್ಯಾಕ್, ಕ್ರೀಂ, ಗ್ರೀನ್, ಲ್ಯಾವೆಂಡರ್

ಗ್ಯಾಲಕ್ಸಿ ಎಸ್23 (8/128 ಜಿಬಿ) ರೂ 74999

ಮುಂಗಡ ಬುಕ್ಕಿಂಗ್ ಕೊಡುಗೆ

ಗ್ಯಾಲಕ್ಸಿ ಎಸ್23 ಅಲ್ಟ್ರಾ ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರು ಗ್ಯಾಲಕ್ಸಿ ವಾಚ್4 ಎಲ್ ಟಿ ಇ ಕ್ಲಾಸಿಕ್ ಮತ್ತು ಗ್ಯಾಲಕ್ಸಿ ಬಡ್ಸ್2 ಅನ್ನು ಕೇವಲ ರೂ 4999 ಕ್ಕೆ ಪಡೆಯಬಹುದು. ಗ್ಯಾಲಕ್ಸಿ ಎಸ್23+ ಮುಂಗಡ ಬುಕ್ಕಿಂಗ್ ಮಾಡುವ ಗ್ತಾಹಕರು ಗ್ಯಾಲಕ್ಸಿ ವಾಚ್4 ಬಿಟಿ ಯನ್ನು ರೂ 4999 ರ ಬೆಲೆಯಲ್ಲಿ ಪಡೆಯಬಹುದು. ಗ್ಯಾಲಕ್ಸಿ ಎಸ್23 ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರು ರೂ 5000 ಮೌಲ್ಯದ ಸ್ಟೋರೇಜ್ ಅಪ್ ಗ್ರೇಡ್ ಪಡೆಯಬಹುದು. ಗ್ರಾಹಕರು ಗ್ಯಾಲಕ್ಸಿ ಎಸ್23 ಸರಣಿ ಖರೀದಿಯ ಮೇಲೆ 24 ತಿಂಗಳ ನೋ ಕಾಸ್ಟ್ ಇಎಂಐ ಪಡೆಯಬಹುದು.

ಇದನ್ನೂ ಓದಿ: ಮರೆಯಾದ ಕಂಚಿನ ಕಂಠ; ಭಾಗವತಿಕೆಗೆ ಮಂಗಳ ಹಾಡಿದ ಬಲಿಪ ಭಾಗವತರು

Advertisement

Udayavani is now on Telegram. Click here to join our channel and stay updated with the latest news.

Next