Advertisement

ಸ್ಯಾಮ್ ಸಂಗ್ ಗೆಲಾಕ್ಸಿ ಎಸ್23 ಸರಣಿ ಭಾರತದಲ್ಲಿ ಬಿಡುಗಡೆ

08:31 PM Feb 03, 2023 | Team Udayavani |

ಗುರುಗ್ರಾಮ: ಸ್ಯಾಮ್ ಸಂಗ್ ಕಂಪೆನಿ ಅತ್ಯುನ್ನತ ಶ್ರೇಣಿಯಾದ ಎಸ್ ಸರಣಿಯಲ್ಲಿ ವರ್ಷಕ್ಕೊಮ್ಮೆ ಮೊಬೈಲ್ ಗಳನ್ನು ವಿಶ್ವ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಇದೀಗ ಗೆಲಾಕ್ಸಿ ಎಸ್ 23 ಸರಣಿಯ 3 ಫೋನ್ ಗಳನ್ನು ಭಾರತ ಸೇರಿ ಅನೇಕ ದೇಶಗಳಲ್ಲಿ ಬಿಡುಗಡೆ ಮಾಡಲಾಯಿತು. ಗೆಲಾಕ್ಸಿ ಎಸ್ 23 ಅಲ್ಟ್ರಾ, ಎಸ್ 23 ಪ್ಲಸ್ ಹಾಗೂ ಎಸ್ 23 ಈ ಹೊಸ ಮೊಬೈಲ್‌ಗಳು.

Advertisement

ಈ ಫೋನ್ ಗಳು ಭಾರತದ ನೋಯ್ಡಾದಲ್ಲಿರುವ ಸ್ಯಾಮ್ ಸಂಗ್ ಕಾರ್ಖಾನೆಯಲ್ಲಿ ತಯಾರಾಗಿವೆ ಎಂದು ಕಂಪೆನಿ ತಿಳಿಸಿದೆ. ಎಸ್ 23 ಸರಣಿಯ ಫೋನ್ ಗಳನ್ನು ಭಾರತದಲ್ಲೇ ತಯಾರಿಸಬೇಕೆಂಬ ಬದ್ಧತೆಯನ್ನು ಸ್ಯಾಮ್ ಸಂಗ್ ಹೊಂದಿತ್ತು ಎಂದು ಕಂಪೆನಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದಲ್ಲೇ ಅತಿ ದೊಡ್ಡದಾದ ಮೊಬೈಲ್ ತಯಾರಿಕಾ ಕಾರ್ಖಾನೆಯನ್ನು 2018ರಲ್ಲಿ ಉದ್ಘಾಟಿಸಿದ್ದರು. ವಿಶ್ವದಲ್ಲೇ ದೊಡ್ಡದಾದ ಮೊಬೈಲ್ ಎಕ್‌ಸ್ಪೀರಿಯನ್‌ಸ್ ಕೇಂದ್ರವಾದ ಸ್ಯಾಮ್ ಸಂಗ್ ಒಪೆರಾ ಹೌಸ್ ಬೆಂಗಳೂರಿನಲ್ಲಿದೆ ಎಂದು ಕಂಪೆನಿ ತಿಳಿಸಿದೆ.
ಎಸ್23 ಸರಣಿಯ ಫೋನ್‌ಗಳ ತಯಾರಿಕೆಗೆ ಪುನರ್ ಬಳಕೆ ಮಾಡಲಾದ ಅಲ್ಯೂಮಿನಿಯಂ, ಗ್ಲಾಸ್ ಹಾಗೂ ಪ್ಲಾಸ್ಟಿಕ್ ಅನ್ನು ಬಳಸಲಾಗಿದ್ದು, ಇದು ಪರಿಸರ ಸ್ನೇಹಿಯಾಗಿದೆ ಎಂದು ತಿಳಿಸಿದೆ.

ಫೋನ್‌ಗಳು ಅತ್ಯುತ್ತಮ ಕ್ಯಾಮರಾ ಅನುಭವ ನೀಡುತ್ತವೆ ಎಂದು ಕಂಪೆನಿ ತಿಳಿಸಿದೆ. ಈ ಫೋನ್‌ಗಳು ಸ್ನಾಪ್‌ಡ್ರಾಗನ್ 8 ಜನರೇಷನ್ 2 ಪ್ರೊಸೆಸರ್ ಹೊಂದಿವೆ.

ಮೂರು ಮಾದರಿಗಳು ಸಹ ಅಮೋಲೆಡ್ 2 ಎಕ್‌ಸ್ ಡಿಸ್‌ಪ್ಲೇ, 120 ಹರ್ಟ್‌ಜ್ ರಿಫ್ರೆಶ್ ರೇಟ್, ಐಪಿ68 ನೀರು ಮತ್ತು ಧೂಳು ನಿರೋಧಕ, ಗೊರಿಲ್ಲಾ ಗ್ಲಾಸ್ ವೆಕ್ಟಸ್ 2 ರಕ್ಷಣೆ, ಆರ್ಮರ್ ಅಲ್ಯುಮಿನಿಯಂ ಕವಚ ಮತ್ತು ಫ್ರೇಂ ಹೊಂದಿದೆ. ಎಸ್ 23 ಅಲ್ಟ್ರಾ ಮಾದರಿಗೆ ಎಂದಿನಂತೆ ಎಸ್ ಪೆನ್ ಇದೆ.

ಎಸ್ 23 ಅಲ್ಟ್ರಾ 6.8 ಇಂಚಿನ ಕ್ಯೂಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದರೆ, ಎಸ್ 23 ಪ್ಲಸ್ 6.6 ಇಂಚಿನ ಎಫ್‌ಎಚ್ ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಎಸ್23 ಮಾದರಿಯು 6.1 ಇಂಚಿನ ಎಪ್‌ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ.
ಈ ಪೈಕಿ ಎಸ್ 23 ಅಲ್ಟ್ರಾ 200 ಮೆ.ಪಿ. ಕ್ಯಾಮರಾ ಹೊಂದಿದೆ. ಮಂದ ಬೆಳಕಿನಲ್ಲೂ ಸೆಲ್ಫೀ ಅತ್ಯುತ್ತಮವಾಗಿ ಮೂಡಿಬರುತ್ತದೆ. ಡ್ಯುಯಲ್ ಪಿಕ್ಸಲ್ ಆಟೋ ಫೋಕಸ್ ತಂತ್ರಜ್ಞಾನದಿಂದ ಮುಖ್ಯ ಕ್ಯಾಮರಾ ಶೇ 60ರಷ್ಟು ವೇಗವಾಗಿ ಫೋಕಸ್ ಮಾಡುತ್ತದೆ.

Advertisement

ಬುಕಿಂಗ್ ಆರಂಭ: ಗೆಲಾಕ್ಸಿ ಎಸ್ 23 ಸರಣಿಯ ಫೋನ್‌ಗಳ ಮುಂಗಡ ಬುಕಿಂಗ್ ಇದೀಗ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್ ಗಳಲ್ಲಿ ಆರಂಭವಾಗಿದೆ. ಇವು ಫೆಬ್ರವರಿ 23 ರಿಂದ ಗ್ರಾಹಕರಿಗೆ ಲಭ್ಯವಾಗಲಿವೆ.

ಬೆಲೆ :
ಎಸ್ 23 ಅಲ್ಟ್ರಾ : 12 ಜಿಬಿ ರ್ಯಾಮ್, 1ಟಿಬಿ ಮೆಮೊರಿ 1,54,999 ರೂ. 12+512 ಜಿಬಿ 1,34,999 ರೂ., 12+256 ಜಿಬಿ 1,24,999 ರೂ. (ಫ್ಯಾಂಟಮ್ ಬ್ಲ್ಯಾಕ್, ಕ್ರೀಮ್ ಮತ್ತು ಗ್ರೀನ್ ಬಣ್ಣದಲ್ಲಿ ಲಭ್ಯ)

ಎಸ್ 23ಪ್ಲಸ್: 8+512 ಜಿಬಿ ಆವೃತ್ತಿಗೆ 1,04,999 ರೂ., 8+256 ಆವೃತ್ತಿಗೆ 94,999 ರೂ. (ಫ್ಯಾಂಟಮ್ ಬ್ಲ್ಯಾಕ್ ಮತ್ತು ಕ್ರೀಂ ಬಣ್ಣದಲ್ಲಿ ಲಭ್ಯ)

ಎಸ್ 23 : 8+256 ಜಿಬಿ ಆವೃತ್ತಿಗೆ 79,999 ರೂ. , 8+128 ಜಿಬಿ ಆವೃತ್ತಿಗೆ 74,999 ರೂ. (ಫ್ಯಾಂಟಮ್ ಬ್ಲ್ಯಾಕ್, ಗ್ರೀನ್, ಕ್ರೀಮ್ ಮತ್ತು ಲ್ಯಾವೆಂಡರ್ ಬಣ್ಣದಲ್ಲಿ ಲಭ್ಯ.)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next