Advertisement

ಭಾರತದ ಮಾರುಕಟ್ಟೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ M31: ಅದ್ಬುತ ವಿನ್ಯಾಸ, ಕೈಗೆಟುಕುವ ಬೆಲೆ !

11:08 AM Feb 27, 2020 | Mithun PG |

ನವದೆಹಲಿ: ಗ್ಯಾಲಕ್ಸಿ M30, ಗ್ಯಾಲಕ್ಸಿ M30s ಭಾರೀ ಜನಪ್ರಿಯತೆ ಗಳಿಸಿದ ನಂತರ ಸ್ಯಾಮ್ ಸಂಗ್ ಕಂಪೆನಿ ಗ್ಯಾಲಕ್ಸಿ M31   ಎಂಬ ಹೊಸ ಸ್ಮಾರ್ಟ್ ಫೋನ್ ನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು 64 ಮೆಗಾಫಿಕ್ಸೆಲ್ ನ ಕ್ಯಾಮಾರ ಗುಣಮಟ್ಟವನ್ನು ಹೊಂದಿದೆ. ಮಾತ್ರವಲ್ಲದೆ ಆ್ಯಂಡ್ರಾಯ್ಡ್ 10 ಬೆಂಬಲವನ್ನು ಪಡೆದಿದೆ.

Advertisement

ಸ್ಯಾಮ್ ಸಂಗ್ ಗ್ಯಾಲಕ್ಸಿ M31 64 ಜಿಬಿ ಸ್ಟೋರೇಜ್ ನ ಬೆಲೆ  ಭಾರತದಲ್ಲಿ 15,999 ರೂ. ಹಾಗೂ 128ಜಿಬಿ ಸ್ಟೋರೇಜ್ ಹೊಂದಿರುವ ಸ್ಮಾರ್ಟ್ ಫೋನಿನ ಬೆಲೆ 16,999 ರೂ. ಎಂದು ಕಂಪೆನಿ ಹೇಳಿಕೊಂಡಿದೆ. ಈ ಫೋನ್ ಓಷನ್ ಬ್ಲೂ ಹಾಗೂ ಸ್ಪೇಸ್ ಬ್ಲ್ಯಾಕ್ ಕಲರ್ ಆಯ್ಕೆಯನ್ನು ಹೊಂದಿದೆ. ಮಾರ್ಚ್ 5 ರ ನಂತರ ಅಮೆಜಾನ್ ಮತ್ತು, ಸ್ಯಾಮ್ ಸಂಗ್ ಇಂಡಿಯಾ ಅನ್ ಲೈನ್ ಸ್ಟೋರ್ ನಲ್ಲಿ ಈ ಸ್ಮಾರ್ಟ್ ಪೋನ್ ಗ್ರಾಹಕರ ಕೈಗೆಟುಕಲಿದೆ ಎಂದು ಸಂಸ್ಥೆ ತಿಳಿಸಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ M31 ವಿಶೇಷತೆಗಳು:

ಡ್ಯುಯಲ್ ಸಿಮ್ ಹೊಂದಿರುವ ಈ ಫೋನ್ ನ 6.4 ಇಂಚಿನ ಫುಲ್ HD+ ಸಾಮಾರ್ಥ್ಯ ಪಡೆದಿವೆ. ಮಾತ್ರವಲ್ಲದೆ ಓಕ್ಟಾ ಕೋರ್ ಎಕ್ಸಿನೋಸ್ 9611 SoC ಪ್ರೊಸೆಸರ್ ಹೊಂದಿದೆ.

Advertisement

ಕ್ಯಾಮಾರ ಸಾಮಾರ್ಥ್ಯ: ಈ ಸ್ಮಾರ್ಟ್ ಪೋನ್ f/1.8 ಲೆನ್ಸ್ ನ 64 ಎಂಪಿ ಪ್ರಾಥಮಿಕ ಕ್ಯಾಮಾರ ಹೊಂದಿದೆ. 8ಎಂಪಿಯ ಸೆಕಂಡರಿ ಸೆನ್ಸಾರ್ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್, 5ಎಂಪಿ ಮ್ಯಾಕ್ರೋ ಶೂಟರ್, 5ಎಂಪಿಯ ಡೆಪ್ತ್ ಕ್ಯಾಮಾರವನ್ನು ಹೊಂದಿದೆ. ಮಾತ್ರವಲ್ಲದೆ ನೈಟ್ ಮೋಡ್, ಸೂಪರ್ ಸ್ಟೆಡಿ ಮೋಡ್, ಸೂಪರ್ ಸ್ಲೋ ಮೋಷನ್ ವಿಶೇಷ ಆಯ್ಕೆಗಳು ಇವೆ.

ಸೆಲ್ಪಿ ಕ್ಯಾಮರಾದ ಸಾಮಾರ್ಥ್ಯ 33 ಮೆಗಾ ಫಿಕ್ಸೆಲ್, ಇದರಲ್ಲಿ ಕೂಡ 4K ಹಾಗೂ ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ ಆಯ್ಕೆಗಳು ಇವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ M31 64ಜಿಬಿ ಹಾಗೂ 128 ಜಿಬಿ ಸ್ಟೋರೇಜ್ ಆಯ್ಕೆಯನ್ನು ಹೊಂದಿದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 512 ಜಿಬಿ ವರೆಗೂ ವಿಸ್ತರಿಸಬಹುದು. ಬ್ಯಾಟರಿ ಗುಣಮಟ್ಟ ಅತ್ಯದ್ಭುತವಾಗಿದ್ದು, 6000 mAh  ಸಾಮಾರ್ಥ್ಯ ಪಡೆದಿವೆ.

 

Advertisement

Udayavani is now on Telegram. Click here to join our channel and stay updated with the latest news.

Next