ನವ ದೆಹಲಿ : ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಖರೀದಿದಾರರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿವೆ. ಸ್ಯಾಮ್ ಸಂಗ್, ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಲು ಸಾಮಾನ್ಯರ ಕೈಗೆಟುಕುವ ದರದಲ್ಲಿ ಹೊಸದೊಂದು ಹ್ಯಾಂಡ್ ಸೆಟ್ ನೊಂದಿಗೆ ಮುಂದಡಿಯಿಡುತ್ತಿದೆ .
ಹೌದು, ಫೆಬ್ರವರಿ 2 ರಂದು 7,000 ರೂ ಮೌಲ್ಯದ ಗ್ಯಾಲಕ್ಸಿ M02 ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಸ್ಯಾಮ್ ಸಂಗ್.
ಓದಿ : ಅಪ್ರಾಪ್ತೆಯ ಕೈ ಹಿಡಿದು, ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್
ಗ್ಯಾಲಕ್ಸಿ M02 6.5 ಇಂಚಿನ ಇನ್ಫಿನಿಟಿ-ವಿ ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು 5,000 mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಗ್ಯಾಲಕ್ಸಿ M02ನ ಹೊಸ ಆವೃತ್ತಿಯಾಗಿದ್ದು, ಇದನ್ನು ನವೆಂಬರ್‌ನಲ್ಲಿ 3 ಜಿಬಿ + 32 ಜಿಬಿ ಮತ್ತು 6 ಜಿಬಿ + 128 ಜಿಬಿ ಮಾಡೆಲ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ M02 ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 450 SoC ಯನ್ನು ಹೊಂದಿದ್ದು, 3GB RAM ಮತ್ತು 32GB ಆನ್ ಬೋರ್ಡ್ ಸ್ಟೋರೇಜನ್ನು ಹೊಂದಿದೆ. ಅಷ್ಟಲ್ಲದೇ, ಫೋನ್ 13 ಎಂಪಿ ಪ್ರೈಮರಿ ಸೆನ್ಸಾರ್ ಮತ್ತು 5 ಎಂಪಿ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಒಳಗೊಂಡಿದೆ.
ಸ್ಯಾಮ್ ಸಂಗ್ 2020 ರಲ್ಲಿ ಭಾರತದಲ್ಲಿ 15 ಮಿಲಿಯನ್ `MO` ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದೆ ಎಂದಿ ಕಂಪೆನಿ ಹೇಳಿಕೊಂಡಿದೆ.
ಓದಿ : ಹೊಸ ಪಕ್ಷಿಗಳಿರುವ ಜಾಗದಲ್ಲಿ ಮತ್ತಷ್ಟು ಸಮೀಕ್ಷೆ