Advertisement

ಭಾರತಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ  M02 ಎಂಟ್ರಿ

11:25 AM Feb 03, 2021 | Team Udayavani |

ನವ ದೆಹಲಿ:  5000mAh ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ದೊಡ್ಡ ಸ್ಕ್ರೀನ್ ನೊಂದಿಗೆ ಗ್ಯಾಲಕ್ಸಿ M02 ಅನ್ನು ಬಿಡುಗಡೆ ಮಾಡುವ ಮೂಲಕ ಸ್ಯಾಮ್‌ ಸಂಗ್ ತನ್ನ ಯಶಸ್ವಿ ‘M’ ಸೀರೀಸ್ ನ್ನು ಭಾರತದಲ್ಲಿ ವಿಸ್ತರಿಸಿದೆ.

Advertisement

ಸ್ಯಾಮ್‌ ಸಂಗ್ ಗ್ಯಾಲಕ್ಸಿ  M02 ಭಾರತದಲ್ಲಿ 6,999 ರೂ (2 ಜಿಬಿ + 32 ಜಿಬಿ ಮಾಡೆಲ್ ) ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ. 3 ಜಿಬಿ + 32 ಜಿಬಿ ಮಾಡೆಲ್ ಅಮೆಜಾನ್.ಇನ್, ಸ್ಯಾಮ್‌ಸಂಗ್.ಕಾಮ್ ಮತ್ತು ಎಲ್ಲಾ ಪ್ರಮುಖ ಕೀ ರಿಟೇಲರ್ಸ್ ಸ್ಟೋರ್ ಗಳಲ್ಲಿ 7,499 ರೂ ಗೆ ಸಿಗಲಿವೆ. ಇಂಟ್ರೊಡಕ್ಟರಿ ಆಫರ್ ನಲ್ಲಿ, ಗ್ರಾಹಕರು ನಿಗದಿತ ಸಮಯದೊಳಗೆ ಅಮೆಜಾನ್.ಇನ್‌ ನಲ್ಲಿ 200 ರೂ.ಗಳ ವಿಶೇಷ ರಿಯಾಯಿತಿಯನ್ನು ಪಡೆಯಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಓದಿ : ಸುಬ್ರಹ್ಮಣ್ಯ: ಶೌಚಾಲಯದಲ್ಲಿ ಬಂಧಿಯಾದ ಚಿರತೆ ಹಿಡಿಯಲು ಕಾರ್ಯಚರಣೆ ಆರಂಭಿಸಿದ ಅರಣ್ಯ ಇಲಾಖೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 02 ಕಪ್ಪು, ನೀಲಿ, ಕೆಂಪು ಮತ್ತು ಗ್ರೇ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಗ್ಯಾಲಕ್ಸಿ M02 6.5-ಇಂಚಿನ ಸ್ಕ್ರೀನ್ ನೊಂದಿಗೆ ಎಚ್‌ ಡಿ+ ಇನ್ಫಿನಿಟಿ ವಿ ಡಿಸ್ಪ್ಲೇಯೊಂದಿಗೆ ಅದ್ಭುತ ವೀಕ್ಷಣೆ ಅನುಭವ ನೀಡಲಿದೆ ಎಂದು ಹೇಳಲಾಗುತ್ತಿದೆ.

ದೊಡ್ಡ ಎಚ್‌ ಡಿ+ ಸ್ಕ್ರೀನ್ ವೀಡಿಯೊ ಕಾಲ್, ಕಂಟೆಂಟ್ ಸ್ಟ್ರೀಮಿಂಗ್, ಆನ್‌ ಲೈನ್ ಎಜ್ಯುಕೇಶನ್ ಮತ್ತು ಮನರಂಜನೆಗೆ ಸೂಕ್ತವಾಗಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ.

Advertisement

ಡಿವೈಸ್ 5000mAh ಬ್ಯಾಟರಿಯನ್ನು ಒಳಗೊಂಡಿದ್ದು, ಇದು ಮೀಡಿಯಾ ಟೆಕ್ 6739 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಸ್ಯಾಮ್‌ ಸಂಗ್ ಗ್ಯಾಲಕ್ಸಿ  M02 ಕ್ಲೀಯರ್  ಮತ್ತು ಬ್ರೈಟ್ ಫೋಟೋಗಳನ್ನು ತೆಗೆದುಕೊಳ್ಳಲು 13 ಎಂಪಿ ಮೈನ್ ಲೆನ್ಸ್ ಮತ್ತು 2 ಎಂಪಿ ಮ್ಯಾಕ್ರೋ ಸೆನ್ಸಾರ್ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ ಎಂದು ಸ್ಯಾಮ್ ಸಂಗ್ ತಿಳಿಸಿದೆ.

ಓದಿ : ಗೆಲುವಿನ ನಗೆ ಬೀರಿದ ರಾಮಾರ್ಜುನ: ಅನೀಶ್‌ ಮೊಗದಲ್ಲಿ ನಗು

 

Advertisement

Udayavani is now on Telegram. Click here to join our channel and stay updated with the latest news.

Next