ಖ್ಯಾತ ಮೊಬೈಲ್ ಬ್ರ್ಯಾಂಡ್ ಸ್ಯಾಮ್‌ಸಂಗ್, ತನ್ನ 5ಜಿ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಎ14 5ಜಿ ಹಾಗೂ ಎ23 5ಜಿ ಮಾಡೆಲ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಈ ಎರಡೂ ಮಾದರಿಯ ಸ್ಮಾರ್ಟ್‌ಫೋನ್‌ಗಳು ಪ್ರೀಮಿಯಂ ವಿನ್ಯಾಸ ಹಾಗೂ ಸುಧಾರಿತ ಕ್ಯಾಮೆರಾ ವಿನ್ಯಾಸವನ್ನು ಹೊಂದಿದ್ದು, 5,000 ಎಂಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.
ಎ23 5ಜಿ ಮಾಡೆಲ್ ಸಿಲ್ವರ್, ಆರೆಂಜ್, ಲೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದ್ದು, ಇದರ ಆರಂಭಿಕ ಬೆಲೆ 22,999 ರೂ. 6 ಜಿಬಿ ರ್ಯಾಮ್ ಹಾಗೂ 50 ಎಂಪಿ ರೇರ್ ಕ್ಯಾಮೆರಾ ವಿನ್ಯಾಸವನ್ನು ಒಳಗೊಂಡಿದೆ.
ಎ14 5ಜಿ ಮಾಡೆಲ್‌ನ ಆರಂಭಿಕ ಬೆಲೆ 16,499 ರೂ.ಗಳಾಗಿದ್ದು, ಇದು ಡಾರ್ಕ್‌ರೆಡ್, ಲೈಟ್ ಗ್ರೀನ್ ಹಾಗೂ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ.