Advertisement

ಸ್ಯಾಮ್‌ಸಂಗ್ E.D.G.E. ಕ್ಯಾಂಪಸ್‌ ಪ್ರೋಗ್ರಾಮ್‌ :ಐಐಎಂ ಬೆಂಗಳೂರಿಗೆ ಪ್ರಥಮ ಸ್ಥಾನ

09:18 PM Nov 25, 2022 | Team Udayavani |

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ ಸ್ಯಾಮ್‌ಸಂಗ್‌ ತನ್ನ ಕ್ಯಾಂಪಸ್ ಪ್ರೋಗ್ರಾಮ್ ಸ್ಯಾಮ್‌ಸಂಗ್‌ E.D.G.E.ನ ಏಳನೇ ಆವೃತ್ತಿಯನ್ನು ಪೂರ್ತಿಗೊಳಿಸಿದ್ದು, 27 ಅಗ್ರ ಸಂಸ್ಥೆಗಳಿಂದ 9,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

ಐಐಎಂ ಬೆಂಗಳೂರಿನ ಟೀಮ್‌ ಟ್ರಾನ್ಸೆಂಡೆನ್ಸ್‌ನ ಶ್ರೇಯಸ್ ಎಸ್‌, ಅಮೃತಾ ಸಿಂಗ್‌ ಮತ್ತು ಶಿಂಧೆ ಚೈತನ್ಯ ಶರದ್‌ ಮೊದಲ ಬಹುಮಾನವನ್ನು ಗಳಿಸಿದ್ದಾರೆ. ಭಾರತದಲ್ಲಿ ಐಒಟಿ ಸಾಧನಗಳನ್ನು ಗ್ರಾಹಕರು ಅಳವಡಿಸಿಕೊಳ್ಳಲು ನೆರವಾಗುವ ಪರಿಹಾರೋಪಾಯಗಳನ್ನು ಈ ವಿಜೇತರು ಪ್ರಸ್ತುತಪಡಿಸಿದ್ದಾರೆ. ಇದು ಜ್ಯೂರಿಗೆ ಹೆಚ್ಚು ಮೆಚ್ಚುಗೆಯಾಗಿದ್ದು, 4.5 ಲಕ್ಷ ರೂ. ನಗದು ಬಹುಮಾನವನ್ನು ಗೆದ್ದುಕೊಂಡಿದೆ. ಸ್ಯಾಮ್‌ಸಂಗ್‌ನ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳು ಇದರಲ್ಲಿವೆ.

ಸ್ಯಾಮ್‌ಸಂಗ್ E.D.G.E. ಎಂಬುದು ರಾಷ್ಟ್ರಾದ್ಯಂತ ನಡೆಯುವ ಕ್ಯಾಂಪಸ್ ಪ್ಲಾಟ್‌ಫಾರಂ ಆಗಿದ್ದು, ವಿದ್ಯಾರ್ಥಿಗಳಿಗೆ ತಮ್ಮೊಳಗಿನ ಉದ್ಯಮಶೀಲತೆ, ನಾಯಕತ್ವ ಕೌಶಲಗಳನ್ನು ಪ್ರದರ್ಶಿಸುವುದಕ್ಕೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ತಮ್ಮ ವೃತ್ತಿ ಜೀವನವನ್ನು ಆರಂಭಿಸಲು ಒಂದು ಅವಕಾಶವನ್ನು ಈ ಕಾರ್ಯಕ್ರಮವು ಒದಗಿಸುತ್ತದೆ.

ಸಂಪೂರ್ಣ ಮೋಶನ್ ವೀಡಿಯೋ ಮೂಲಕ ಗೇಮಿಫಿಕೇಶನ್ ಬಳಸಿಕೊಂಡು ಗ್ರಾಹಕರ ಜೊತೆಗೆ ನೇರ ಸಂವಹನ ನಡೆಸುವ ಆಧುನಿಕ ವಿನ್ಯಾಸ ಪರಿಹಾರವನ್ನು ರೂಪಿಸಿದ ಎನ್‌ಐಡಿ ಬೆಂಗಳೂರಿನ ಟೀಮ್ ಸೃಜನ್‌ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು ರೂ. 3 ಲಕ್ಷರೂ. ನಗದು ಬಹುಮಾನವನ್ನು ಗೆದ್ದಿದ್ದಾರೆ

ಐಐಎಫ್‌ಟಿಯ ಟೀಮ್‌ ಜಿ.ಯು.ಜಿ ಮೂರನೇ ಸ್ಥಾನವನ್ನು ಪಡೆದಿದ್ದು, ಇನ್‌ ಸ್ಟೋರ್ ಸ್ಮಾರ್ಟ್ ಹೋಮ್ ಮಾಡೆಲ್ ಮತ್ತು ಮೆಟಾವರ್ಸ್‌ ಎಕ್ಸ್‌ಪೀರಿಯನ್ಸ್‌ ಸ್ಟೋರ್‌ ಮೂಲಕ ಕನೆಕ್ಟೆಡ್‌ ಸಾಧನಗಳ ಪರಿಸರವನ್ನು ಅನುಭವಿಸಲು ಗ್ರಾಹಕರಿಗೆ ಅನುವು ಮಾಡುವ ಸೌಲಭ್ಯವನ್ನು ಇದು ಅಭಿವೃದ್ಧಿಪಡಿಸಿದೆ. ತಂಡವು 1.5 ಲಕ್ಷ ರೂ. ಬಹುಮಾನವನ್ನು ಗಳಿಸಿದೆ.

Advertisement

ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿತ್ತು. ಆದರೆ, 2022 ಆವೃತ್ತಿಯ ಸ್ಯಾಮ್‌ಸಂಗ್‌ E.D.G.E. ಅನ್ನು ಭೌತಿಕವಾಗಿ ನಡೆಸಲಾಯಿತು. ಗುರುಗ್ರಾಮದಲ್ಲಿ ನಡೆದ ಫಿನಾಲೆಯಲ್ಲಿ ಸ್ಯಾಮ್‌ಸಂಗ್‌ ಸೌತ್‌ವೆಸ್ಟ್ ಏಷ್ಯಾದ ಅಧ್ಯಕ್ಷರು ಮತ್ತು ಸಿಇಒ ಕೆನ್‌ ಕಾಂಗ್‌ ಭಾಗವಹಿಸಿದ್ದರು ಮತ್ತು ಸ್ಯಾಮ್‌ಸಂಗ್‌ ಇಂಡಿಯಾದ ಇತರ ಹಿರಿಯ ನಾಯಕರು ಭಾಗವಹಿಸಿದ್ದರು.

2 ತಿಂಗಳ ಕಾರ್ಯಕ್ರಮವನ್ನು ಮೂರು ಸುತ್ತಿನ ಕಟ್ಟುನಿಟ್ಟಿನ ಮೌಲ್ಯಮಾಪನದ ಮೂಲಕ ನಡೆಸಲಾಗುತ್ತದೆ. ಈ ವರ್ಷ 27 ಕಾಲೇಜುಗಳ 2700 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮೌಲ್ಯಮಾಪನ ಮಾಡಿದ ನಂತರ, ಪ್ರತಿ ಕ್ಯಾಂಪಸ್‌ನಿಂದ ಒಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಅವರು ಪ್ರಕರಣ ಅಧ್ಯಯನ ನಡೆಸಿ, ವಿವರವಾದ ಪ್ರಾತ್ಯಕ್ಷಿಕೆಗಳನ್ನು ಪ್ರಾದೇಶಿಕ ಸುತ್ತಿನಲ್ಲಿ ಪ್ರಸ್ತುತಪಡಿಸುತ್ತಾರೆ. ಈ ವರ್ಷ ಒಟ್ಟು ಒಂಬತ್ತು ತಂಡಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿತ್ತು ಮತ್ತು ರಾಷ್ಟ್ರೀಯ ಸುತ್ತಿನಲ್ಲಿ ಅಗ್ರ 3 ಸ್ಥಾನಗಳಿಗೆ ಸ್ಫರ್ಧಿಸಲು ಸ್ಯಾಮ್‌ಸಂಗ್‌ ಲೀಡರ್‌ಗಳು ಮಾರ್ಗದರ್ಶನ ನೀಡಿದ್ದರು.

ಇದನ್ನೂ ಓದಿ : ಲಾವಾದಿಂದ ಅಗ್ಗದ ದರದ ಹೊಸ ಫೋನ್‍ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next