Advertisement

ಸಂಪಾಜೆ : ರೋಡ್‌ರೋಲರ್‌ಗೆ ಢಿಕ್ಕಿ;  ಕಾರಿಗೆ ಬೆಂಕಿ, ಚಾಲಕ ಪಾರು

09:59 AM Oct 27, 2017 | |

ಬೆಳ್ಳಾರೆ: ಸಂಪಾಜೆಯ ಚೌಕಿ ಎಂಬಲ್ಲಿ ಗುರುವಾರ ಬೆಳಗ್ಗೆ ರೋಡ್‌ ರೋಲರ್‌ಗೆ  ಕಾರೊಂದು  ಢಿಕ್ಕಿ ಹೊಡೆದು ಕಾರು ಸಂಪೂರ್ಣ ಸುಟ್ಟು ಕರಕಲಾಗಿ ಚಾಲಕ ಅಪಾಯದಿಂದ ಪಾರಾದ  ಘಟನೆ ವರದಿಯಾಗಿದೆ.

Advertisement

ಮಂಗಳೂರಿನ ಕುತ್ತಾರಿನ ಇಬ್ರಾಹಿಂ ಅವರ ಮಗ ಮಹಮ್ಮದ್‌ (42)  ಕೊಡಗಿನ ಎಮ್ಮೆಮಾಡಿಗೆ ಹೋಗಿ ಹಿಂದಿರುಗುತ್ತಿದ್ದಾಗ ಮುಂಜಾನೆ ಮೂರು ಗಂಟೆ ಸಮಯಕ್ಕೆ ಚೌಕಿ ಎಂಬಲ್ಲಿ ನಿಲ್ಲಿಸಿದ್ದ ರೋಡ್‌ರೋಲರ್‌ಗೆ ಢಿಕ್ಕಿ ಹೊಡೆಯಿ ತೆನ್ನಾಗಿದೆ. ಪರಿಣಾಮವಾಗಿ ಕಾರಿಗೆ ಬೆಂಕಿ ಹತ್ತಿಕೊಂಡಿತ್ತು. ಚಾಲಕ ತತ್‌ಕ್ಷಣ ಕೆಳಗಿಳಿದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬಳಿಕ ಸುಳ್ಯದ ಅಗ್ನಿ ಶಾಮಕ ದಳದವರಿಗೆ ಮಾಹಿತಿ ತಿಳಿಸಿ  ಅವರು ಬಂದು ಬೆಂಕಿ ನಂದಿಸಿದರು. ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next