Advertisement
“ಉದಯವಾಣಿ’ಯು ಬುಧವಾರ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡುಬಂದ ದೃಶ್ಯಗಳಿವು. ಒಂದೆಡೆ ಶಿಥಿಲ ರಸ್ತೆ ದುರಸ್ತಿಗೊಂಡು ನಯವಾದ ಹೊಸ ರಸ್ತೆ ನಿರ್ಮಾಣವಾಗಿದೆ. ಆದರೆ, ಕಳೆದ ಪ್ರಾಕೃತಿಕ ದುರಂತದಲ್ಲಿ ಬಿರುಕು ಬಿಟ್ಟಿರುವ ಗುಡ್ಡಗಳು ರಸ್ತೆಗೆ ತಾಗಿಕೊಂಡಿದ್ದು, ಮತ್ತೂಂದು ಅವಘಡಕ್ಕೆ ಕಾರಣವಾಗಬಲ್ಲ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಕಳೆದ ಆಗಸ್ಟ್‌ನಲ್ಲಿ ಜಲಪ್ರಳಯಕ್ಕೆ ಬಲಿಯಾಗಿದ್ದ ಜೋಡುಪಾಲ ಈಗ ಸುಧಾರಿಸಿದೆ. ಇಲ್ಲಿ ರಸ್ತೆ, ತಡೆಗೋಡೆ ನಿರ್ಮಾಣವಾಗಿದೆ. ಇಲ್ಲಿಂದ ಮೇಲ್ಭಾಗದಲ್ಲಿ ಮೊಣ್ಣಂಗೇರಿ, ಎರಡನೇ ಮೊಣ್ಣಂಗೇರಿ, ಮದೆನಾಡು ಮೊದಲಾದೆಡೆ ಆಳೆತ್ತರದ ಗುಡ್ಡಗಳು ರಸ್ತೆಗೆ ಜಾರಿ ನಿಂತಿವೆ. ಅದೂ ತಿರುವು ರಸ್ತೆಯಲ್ಲೇ. ಮೊಣ್ಣಂಗೇರಿಯಿಂದ ತುಸು ದೂರದಲ್ಲಿ ರಸ್ತೆಯ ಒಂದು ಪಾರ್ಶ್ವಕ್ಕೆ ಮರಳು ಚೀಲದ ತಡೆಗೋಡೆ ನಿರ್ಮಿಸಿದ್ದರೂ ಮೇಲ್ಭಾಗದ ಗುಡ್ಡ ಬಿರುಕು ಬಿಟ್ಟಿದೆ. ಮದೆನಾಡು ತನಕವೂ ಇಂತಹ ಅಪಾಯಕಾರಿ ಸ್ಥಿತಿ ಇದೆ. ಮಳೆ ಆರಂಭ: ಸುರಕ್ಷತೆ ಆತಂಕ
ಮಡಿಕೇರಿಯಾಚೆ ಈಗಾಗಲೇ ಮಳೆ ಆರಂಭಗೊಂಡಿದೆ. ಗುಡ್ಡ ಬಿರುಕು ಬಿಟ್ಟು ಜಾರಿ ನಿಂತಿರುವ ಕಾರಣ ಪೂರ್ಣ ಕುಸಿಯಲು ಸಣ್ಣ ಮಳೆ ಸಾಕು. ಆದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ನಿರ್ಮಾಣಕ್ಕೆ ತೋರಿರುವ ಕಾಳಜಿಯನ್ನು ಗುಡ್ಡ ತೆರವು ಅಥವಾ ಸಮತಟ್ಟು ಮಾಡಲು ತೋರಿಲ್ಲ. ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ.
Related Articles
ಸಂಪಾಜೆಯಿಂದ ಮಡಿಕೇರಿ ತನಕ ಹೊಸ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಒಂದು ಹಂತದ ಡಾಮರು ಕಾಮಗಾರಿ ಮುಗಿದು ಎರಡನೇ ಹಂತ ದೇವರ ಕೊಲ್ಲಿ ತಿರುವು ತನಕ ಸಾಗಿದೆ. ತಾಳತ್‌ಮನೆ, ಮದೆನಾಡು, ಎರಡನೇ ಮೊಣ್ಣಂಗೇರಿ ಬಳಿ ಶಾಶ್ವತ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಡಾಮರು ಕೆಲಸ ಪೂರ್ಣಗೊಳ್ಳಲಿದೆ. ತಡೆಗೋಡೆ ಸ್ಥಳದಲ್ಲಿ ಜಲ್ಲಿಪುಡಿ ತುಂಬಿದ ಚೀಲಗಳನ್ನು ಇರಿಸಲಾಗಿದೆ. ನೆಲದ ಮೇಲೆ ಜಿಯೋಫ್ಯಾಬ್ರಿಕ್ ಪದರ ಹಾಸಿ ಅದರ ಮೇಲೆ ಒಂದೂವರೆ ಅಡಿಯಷ್ಟು ದಪ್ಪಗೆ ಗ್ರಾನ್ಯುಲರ್ ಸಬ್‌ಬೇಸ್ (ಜಿಎಸ್‌ಬಿ) ಪದರ ಹಾಕಲಾಗಿದೆ. ಮಣ್ಣು ಹಾಕಿ ಎಂಬ್ಯಾಂಕ್‌ವೆುಂಟ್ ನಿರ್ಮಿಸಿ ಇಕ್ಕೆಲಗಳು ಕುಸಿಯದಂತೆ ರಿಟೇನಿಂಗ್ ವಾಲ್, ಗೇಬಿಯನ್ ವಾಲ್ ಮೂಲಕ ಶಾಶ್ವತ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸಲಾಗಿದೆ.
Advertisement
ಪ್ರಯಾಣ ಸಲೀಸಲ್ಲರಸ್ತೆ ಮರು ನಿರ್ಮಾಣ, ರಸ್ತೆ ಕುಸಿತದ ಸ್ಥಳಕ್ಕೆ ತಡೆಗೋಡೆ ಕಾಮಗಾರಿ ಉತ್ತಮವಾಗಿದೆ. ಆದರೆ ಇನ್ನೊಂದು ಭಾಗದಲ್ಲಿ ಗುಡ್ಡಗಳು ರಸ್ತೆಗೆ ಬೀಳುವ ಸ್ಥಿತಿಯಲ್ಲಿವೆ. ಈ ಬಗ್ಗೆ ಮೊದಲು ಕ್ರಮ ಕೈಗೊಳ್ಳಬೇಕಿತ್ತು.
– ಶ್ರೀನಿವಾಸ ಮಡಿಕೇರಿ
ವಾಹನ ಸವಾರ – ಕಿರಣ್ ಪ್ರಸಾದ್ ಕುಂಡಡ್ಕ