Advertisement
ಮಂಗಳವಾರ ಬೆಳಗ್ಗೆ ನೆರೆ ನೀರು ಇಳಿದಿದೆಯಾದರೂ ಮನೆ, ಅಂಗಡಿ ಮುಂಗಟ್ಟುಗಳು, ರಸ್ತೆ, ತೋಟ ಇಡೀ ಪ್ರದೇಶ ಕೆಸರುಮಯವಾಗಿದೆ. ಹಲವು ಮಂದಿ ಸರ್ವಸ್ವವನ್ನೂ ಕಳೆದು ಕೊಂಡಿದ್ದಾರೆ.
Related Articles
ಅರಂತೋಡು: ಸ್ವ ಸಂಪಾದನೆಯ ಮೂಲಕವೇ ಬದುಕು ಸಾಗಿಸುವ ಛಲ ತೊಟ್ಟಿದ್ದ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ಕುಕ್ಕುಟೋದ್ಯಮ ಆರಂಭಿಸಿದ್ದರು. ಆದರೆ ಅವರ ಕನಸುಗಳೆಲ್ಲ ತಡರಾತ್ರಿ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಸಂಪಾಜೆ ಗ್ರಾಮದ ಚೌಕಿ ಸಮೀಪದ ಸಾವಿತ್ರಿ ಅವರು ಸಾಕಿದ 40ಕ್ಕೂ ಹೆಚ್ಚು ಕೋಳಿಗಳು ಪ್ರವಾಹಕ್ಕೆ ಗೂಡು ಸಮೇತ ನೀರು ಪಾಲಾಗಿವೆ. ಅವರ ಕನಸಿನ ಮನೆಯೂ ನೀರಿನ ರಭಸಕ್ಕೆ ಸಿಲುಕಿ ಕೆಸರಿನಿಂದ ನಲುಗಿ ಹೋಗಿದೆ. ಅವರ ಕುಟುಂಬವೀಗ ಕಣ್ಣೀರಿನಿಂದ ಕೈ ತೊಳೆಯುವಂತಾಗಿದೆ.
Advertisement
ಇದನ್ನೂ ಓದಿ : ಸುಬ್ರಹ್ಮಣ್ಯ ಗುಡ್ಡ ಕುಸಿದು ದುರಂತ ಪ್ರಕರಣ : ಇಬ್ಬರು ಮಕ್ಕಳಿಗೆ ಕಣ್ಣೀರ ವಿದಾಯ