Advertisement

‘ಯೂ ಆರ್‌ ಮೈ ಹೀರೋ’: ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಸಂಹಿತಾ ವಿನ್ಯಾ ನಾಯಕಿ

02:42 PM Jun 12, 2022 | Team Udayavani |

ಮಾಡೆಲಿಂಗ್‌ ಕ್ಷೇತ್ರಕ್ಕೂ ಸಿನಿಮಾ ಕ್ಷೇತ್ರಕ್ಕೂ ಮೊದಲಿನಿಂದಲೂ ಬಿಡಿಸಲಾಗದ ನಂಟು. ಪ್ರತಿವರ್ಷ ಮಾಡೆಲಿಂಗ್‌ನಿಂದ ಸಿನಿಮಾಕ್ಕೆ, ಸಿನಿಮಾದಿಂದ ಮಾಡೆಲಿಂಗ್‌ಗೆ ತಾರೆಯರ ಓಡಾಟ ನಿರಂತರ. ಇಂಥ ಕಲಾವಿದರ ಪಟ್ಟಿ ಸಿನಿಮಾ ಮತ್ತು ಮಾಡೆಲಿಂಗ್‌ನಲ್ಲಿ ಸಾಕಷ್ಟು ಸಿಗುತ್ತದೆ. ಈಗ ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೆಸರು ಸಂಹಿತಾ ವಿನ್ಯಾ.

Advertisement

ಮಾಡೆಲಿಂಗ್‌ನಿಂದ ಆರಂಭವಾದ ಕನ್ನಡದ ಹುಡುಗಿ ಸಂಹಿತಾ ವಿನ್ಯಾ ಜರ್ನಿ ಇದೀಗ ಪ್ಯಾನ್‌ ಇಂಡಿಯಾ ಸಿನಿಮಾವರೆಗೂ ಬಂದು ನಿಂತಿದೆ. ಇದೇ ಜೂ. 17ಕ್ಕೆ ಬಿಡುಗಡೆಯಾಗಲಿರುವ “ಯೂ ಆರ್‌ ಮೈ ಹೀರೋ’ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ.

ಅಂದಹಾಗೆ, ಮೂಲ ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಹಿಂದಿಯಲ್ಲಿಯೂ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಇನ್ನುಳಿದಂತೆ ಕನ್ನಡ, ತಮಿಳು, ಮಲಯಾಳಂ ಭಾಷೆಗೆ ಡಬ್‌ ಆಗಿ ತೆರೆಗೆ ಬರಲಿದೆ. ಮೊದಲಿಗೆ ಇದೇ 17ಕ್ಕೆ ತೆಲುಗು ಅವತರಣಿಕೆ ತೆರೆಗೆ ಬರಲಿದೆ.

ಇದನ್ನೂ ಓದಿ:ಡಬ್ಬಿಂಗ್‌ ಮುಗಿಸಿದ ಖುಷಿಯಲ್ಲಿ ‘ಗೌಳಿ’: ರಗಡ್‌ ಲುಕ್‌ನಲ್ಲಿ ಕಂಬ್ಯಾಕ್‌ಗೆ ಕಿಟ್ಟಿ ತಯಾರಿ

ಈ ಬಗ್ಗೆ ಹೇಳಿಕೊಳ್ಳುವ ಸಂಹಿತಾ ವಿನ್ಯಾ, “ಇಲ್ಲಿಯವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆ ಎಲ್ಲ ಸಿನಿಮಾಗಳಿಗಿಂತ ಈ ಸಿನಿಮಾ ತುಂಬ ಡಿಫ‌ರಂಟ್. ಏಕೆಂದರೆ, ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರುತ್ತಿದೆ. ಮೊದಲ ಸಲ ತೆಲುಗು ಟೀಮ್‌ ಜೊತೆಗೆ ಕೆಲಸ ಮಾಡಿದ್ದೇನೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ತೆಲುಗಿನಲ್ಲಿನ ವಾತಾರಣವೇ ಬೇರೆ ಇತ್ತು. ಚಿತ್ರದ ಬಹುತೇಕ ಶೂಟಿಂಗ್‌ ಹೈದರಾಬಾದ್‌ನಲ್ಲಿಯೇ ಮುಗಿದಿದೆ’ ಎನ್ನುತ್ತಾರೆ.

Advertisement

“ಇದೊಂದು ಹಾರರ್‌ ಸಿನಿಮಾ. ಯಾವುದೋ ಒಂದು ಕಾರಣಕ್ಕೆ ಮನೆಯೊಂದನ್ನು ಸೇರಿಕೊಳ್ಳುತ್ತೇನೆ. ಅಲ್ಲಿ ದೆವ್ವದ ಕಾಟ ಶುರುವಾಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇಲ್ಲದಿದ್ದರೂ, ಒಂದಷ್ಟು ಅನುಭವ ಆಗುತ್ತದೆ. ಅದರ ಕಾಟ ಹೇಗಿರುತ್ತದೆ? ಕೊನೆಗೆ ಅದರ ಆಟಕ್ಕೆ ಬ್ರೇಕ್‌ ಹಾಕುವುದು ಹೇಗೆ? ಹಾರರ್‌ ಟಚ್‌ ಜತೆಗೆ ಸಸ್ಪೆನ್ಸ್‌ ರೀತಿಯಲ್ಲಿ ಸಿನಿಮಾ ನೋಡಿಸಿಕೊಂಡು ಸಾಗಲಿದೆ’ ಎಂದು ಚಿತ್ರದ ಕಥಾಹಂದರ ಬಿಚ್ಚಿಡುತ್ತಾರೆ ಸಂಹಿತಾ.

ಇನ್ನು ತೆಲುಗಿನ “ಯೂ ಆರ್‌ ಮೈ ಹೀರೋ’ದಲ್ಲಿ ದೊಡ್ಡ ತಾರಾಬಳಗವೇ ಇದೆ. ಫಿರೋಜ್‌ ಖಾನ್‌, ಸನಾ ಖಾನ್‌, ಸಂಹಿತಾ ವಿನ್ಯಾ, ಐಶ್ವರ್ಯಾ, ಮಿಲಿಂದ್‌ ಗುನಾಜಿ, ಮೇಕಾ ರಾಮಕೃಷ್ಣ ಸೇರಿ ಹಲವರು ನಟಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next