ಗುಂಡ್ಲುಪೇಟೆ: ತಾಲೂಕಿನಲ್ಲಿ ಬೆಳೆದಿದ್ದ ಸಾಂಬಾರ್ ಈರುಳ್ಳಿ ವಾರದಿಂದ ಬೀಳುತ್ತಿರುವ ಮಳೆಗೆ ಸಿಲುಕಿ ಕೊಳೆಯುವ ಸ್ಥಿತಿ ತಲುಪಿದೆ.
ಉತ್ತಂಗೆರೆಹುಂಡಿ ಮಹದೇವೆಗೌಡ ಒಂದು ಎಕರೆ ಜಮೀನಿನಲ್ಲಿ80 ಸಾವಿರ ರೂ.ವ್ಯಯಿಸಿ 4 ಕ್ವಿಂಟಲ್ ನಾಟಿ ಮಾಡಿದ್ದರು. ನಂತರ ಉತ್ತಮ ಫಲವತ್ತತೆಯಿಂದ ಬೆಳೆದು ಸಾಂಬಾರ್ ಈರುಳ್ಳಿ 50ಕ್ವಿಂಟಲ್‌ನಷ್ಟು ಫಸಲು ಬಂದಿತ್ತು.
ವಾರದ ಹಿಂದೆ ಈರುಳ್ಳಿಕಿತ್ತುಕೊಯ್ಲು ಮಾಡಲು ಸಿದ್ಧತೆ ನಡೆಸಲಾಗಿತ್ತು. ಈ ವೇಳೆ ಸತತವಾಗಿ ಮಳೆ ಬಂದಕಾರಣ ಟಾರ್ಪಲ್ ಹಾಕಿ ಸುರಿಯಲಾಗಿದೆ. ವಾರದಿಂದ ಒಂದೇ ಜಾಗದಲ್ಲಿ ಈರುಳ್ಳಿ ರಾಶಿ ಇರುವುದರಿಂದಕೊಳೆಯ ತೊಡಗಿದೆ.
ಇದನ್ನೂ ಓದಿ:ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಜಮ್ಮು|ಕಣಿವೆ ನಾಡಿನಲ್ಲಿ ಬಾನೆತ್ತರಕ್ಕೆ ಹಾರಿದ ತಿರಂಗಾ
ಕಳೆದ ತಿಂಗಳು ಸಾಂಬಾರ್ ಈರುಳ್ಳಿಕ್ವಿಂಟಲ್‌ಗೆ 3500 ರೂ. ಬೆಲೆ ಇತ್ತು. ಆದರೆ, ವಾರದಿಂದ ಸತತ ಮಳೆ ಬೀಳುತ್ತಿರುವಕಾರಣ 2ರಿಂದ2500 ರೂ.ಗೆ ತಲುಪಿದೆ.ಸಾಲ ಮಾಡಿ ಒಂದು ಎಕರೆ ಜಮೀನಿನಲ್ಲಿ ಸಾಂಬಾರ್ ಈರುಳ್ಳಿ ಬೆಳೆದಿದ್ದೆ. ಈರುಳ್ಳಿ ಕಿತ್ತ ನಂತರ ಮಳೆ ಸತತವಾಗಿ ಬೀಳುತ್ತಿರುವ ಹಿನ್ನೆಲೆ ಕೊಳೆಯುವ ಹಂತ ತಲುಪಿದೆ.
ಇದರಿಂದ ಹಾಕಿದ ಬಂಡವಾಳವು ಕೈಸೇರದ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರೈತ ಮಹದೇವೇಗೌಡ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.