Advertisement

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ : ಭಾಷಣಕ್ಕೆ ಸಮಂತಾಗೆ ಆಹ್ವಾನ

06:58 PM Nov 08, 2021 | Team Udayavani |

ನವದೆಹಲಿ: ನವೆಂಬರ್ 20 ರಿಂದ 28 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಷಣ ಮಾಡಲು ನಟಿ ಸಮಂತಾ ರುತ್ ಪ್ರಭು ಅವರಿಗೆ ಆಹ್ವಾನ ನೀಡಲಾಗಿದೆ.

Advertisement

ಸಮಂತಾ ಮಾತ್ರವಲ್ಲದೆ ಮನೋಜ್ ಬಾಜಪೇಯಿ, ನಿರ್ದೇಶಕ ಅರುಣಾ ರಾಜೆ, ನಟ ಜಾನ್ ಎಡತಟ್ಟಿಲ್ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಚಲನಚಿತ್ರೋತ್ಸವದಲ್ಲಿ ಭಾಷಣಕಾರರನ್ನಾಗಿ ಆಯ್ಕೆ ಮಾಡಲಾಗಿದೆ.

ಸಮಂತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪೀಕರ್ ಆಗಿ ಆಹ್ವಾನಿಸಲ್ಪಟ್ಟ ಮೊದಲ ದಕ್ಷಿಣ ಭಾರತದ ನಟಿಯಾಗಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ತನ್ನ ಅಭಿನಯದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ ಸಮಂತಾ, ಚಲನಚಿತ್ರೋತ್ಸವದಲ್ಲಿ ಮಾತನಾಡಲು ಆಹ್ವಾನ ಪಡೆದಿದ್ದಾರೆ.

ಸಮಂತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ವದಂತಿಗಳು ಹರಿದಾಡುತ್ತಿದ್ದು, ತಾಪ್ಸೀ ಪನ್ನು ಅವರ ಹೋಮ್ ಪ್ರೊಡಕ್ಷನ್ ಅಡಿಯಲ್ಲಿ ಸಮಂತಾ ಶೀಘ್ರದಲ್ಲೇ ತಮ್ಮ ಮೊದಲ ಹಿಂದಿ ಚಿತ್ರಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ ಆದರೆ, ಎರಡೂ ಕಡೆಯಿಂದ ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.

ಗುಣಶೇಖರ್ ಅವರ ಪೌರಾಣಿಕ ‘ಶಾಕುಂತಲಂ’ ನಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next