ಮುಂಬಯಿ: ಬಹುಭಾಷಾ ನಟಿ ಸಮಂತಾ ಅವರು ಇನ್ಸ್ಟಾಗ್ರಾಂನಲ್ಲಿ ತಮ್ಮ ಆರೋಗ್ಯದ ಕುರಿತ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ತಮಗೆ ಸ್ನಾಯುಗಳು ದುರ್ಬಲವಾಗುವಂಥ ಮಯೋಸಿಟಿಸ್ (ಸ್ನಾಯು ಅಂಗಾಂಶದ ಉರಿಯೂತ) ಎಂಬ ಕಾಯಿಲೆಯಿದೆ ಎಂದು ಹೇಳಿಕೊಂಡಿದ್ದಾರೆ.
Advertisement
ಆಸ್ಪತ್ರೆಯಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನೂ ಅಪ್ಲೋಡ್ ಮಾಡಿರುವ ಸಮಂತಾ, “ಈ ಕಾಯಿಲೆಯಿಂದ ಆದಷ್ಟು ಬೇಗ ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತೇನೆ ಎಂಬ ನಂಬಿಕೆಯಿದೆ.
ಬದುಕು ನನ್ನ ಮೇಲೆ ಎಸೆಯುತ್ತಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು ನನಗೆ ನೀವೇ(ಅಭಿಮಾನಿಗಳು) ಶಕ್ತಿಯಾಗಿರುತ್ತೀರಿ ಎಂಬ ಕಾರಣಕ್ಕೆ ನಿಮ್ಮೊಂದಿಗೆ ಈ ವಿಚಾರ ಹಂಚಿಕೊಂಡಿದ್ದೇನೆ’ ಎಂದೂ ಬರೆದುಕೊಂಡಿದ್ದಾರೆ.