Advertisement

ನನ್ನ ಆರೋಗ್ಯ ಸ್ಥಿತಿ ಗಂಭೀರವಾಗಿಲ್ಲ: ಕಾಯಿಲೆ ಬಗ್ಗೆ ಮೌನ ಮುರಿದ ಸಮಂತಾ

12:56 PM Nov 08, 2022 | Team Udayavani |

ಮುಂಬಯಿ: ಬಹುಭಾಷಾ ನಟಿ ಸಮಂತಾ ಮಯೋಸಿಟಿಸ್‌ (ಸ್ನಾಯು ಅಂಗಾಂಶದ ಉರಿಯೂತ) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Advertisement

ಸಮಂತಾ ಬಾಡಿಗೆ ತಾಯಿಯ ಪಾತ್ರದಲ್ಲಿ, ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ʼಯಶೋಧಾʼ ಚಿತ್ರದ ಪ್ರಮೋಷನ್‌ ಭರದಿಂದ ಸಾಗುತ್ತಿದೆ. ಸಿನಿಮಾದ ಪ್ರಮೋಷನ್‌ ವೇಳೆ ಸಮಂತಾ ಮತ್ತೆ ತಮ್ಮ ಮಯೋಸಿಟಿಸ್‌ ಕಾಯಿಲೆ  ಬಗ್ಗೆ ಮಾತನಾಡಿದ್ದಾರೆ.

“ನಾನು ಮೊದಲೇ ಹೇಳಿದಂತೆ ಎಲ್ಲರ ಜೀವನದಲ್ಲಿ ಒಳ್ಳೆಯ ಹಾಗೂ ಕೆಟ್ಟ ದಿನಗಳು ಇರುತ್ತವೆ. ಕೆಲ ದಿನಗಳಲ್ಲಿ ನಾವು ಹಾಸಿಗೆಯಿಂದ ಏಳಲು ಕಷ್ಟವಾಗುತ್ತದೆ. ಇನ್ನು ಕೆಲವು ದಿನಗಳಲ್ಲಿ ನಾನು ಹೋರಾಡಲು ಬಯಸುತ್ತೇನೆ. ನನ್ನ ಹೋರಾಟದ ದಿನಗಳು ಹೆಚ್ಚಾಗಿದೆ” ಎಂದರು.

“ಮೂರು ತಿಂಗಳಾಯಿತು. ನಾನೀಗ ಸ್ಪಷ್ಟನೆ ಕೊಟ್ಟಲು ಬಯಸುತ್ತೇನೆ. ನಾನು ಶೀಘ್ರದಲ್ಲಿ ಸಾಯುವುದಿಲ್ಲ. ಕೆಲ ಲೇಖನಗಳನ್ನು ಓದಿದೆ ಅದರಲ್ಲಿ ನನ್ನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಬರೆದಿದೆ. ಇಲ್ಲ ಹಾಗಲ್ಲ ಇದು ಮಯೋಸಿಟಿಸ್‌. ನಾನು ಹೋರಾಟ ಮಾಡುತ್ತೇನೆ”ಎಂದು ತಿಳಿಸಿದ್ದಾರೆ.

ನಾನು ಯಾವಾಗಲೂ ಸಮಯವನ್ನು ಸೂಕ್ತವಾಗಿ ಬಳಸಲು ಇಷ್ಟಪಡುತ್ತೇನೆ. ಇದು ಕಷ್ಟದ ಸಮಯ. ಔಷಧ ಹಾಗೂ ವೈದ್ಯರ ಭೇಟಿ ಪೂರ್ಣಗೊಂಡಂತೆ ಕಾಣುತ್ತದೆ. ಸಮಯವನ್ನು ಸೂಕ್ತವಾಗಿ ಬಳಸದೇ ಇದ್ದರು ಪರವಾಗಿಲ್ಲ. ಎಲ್ಲಾ ಸಮಯವೂ ನಿಮಗೆ ಉತ್ತಮವಾಗಬೇಕೆಂದಿಲ್ಲ” ಎಂದರು. ಹರಿ -ಹರೀಶ್‌ ನಿರ್ದೇಶನದ ʼಯಶೋಧಾʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನ.11 ರಂದು ರಿಲೀಸ್‌ ಆಗಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next