Advertisement

ಹೊಸ ಚಿಂತನೆಯಲ್ಲಿ ಸಮಾನತೆಯ ಕಡೆಗೆ

01:19 PM Dec 11, 2020 | Suhan S |

ಈಗಾಗಲೇ ಜಾತಿ ತಾರತಮ್ಯ, ಅಸ್ಪೃಶ್ಯತೆನಿವಾರಣೆಕುರಿತಾಗಿ ಹಲವು ಸಿನಿಮಾಗಳು ಬಂದಿವೆ. ಈಗ ಅದಕ್ಕೆ ಹೊಸ ಸೇರ್ಪಡೆ “ಸಮಾನತೆಯ ಕಡೆಗೆ’. ಹೀಗೊಂದು ಚಿತ್ರ ಸದ್ದಿಲ್ಲದೇ ಸಿದ್ಧವಾಗಿದೆ.

Advertisement

ಈ ಚಿತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ನಡೆಯುವ ಜಾತಿ ತಾರತಮ್ಯ ಹಾಗೂ ದೌರ್ಜನ್ಯಗಳನ್ನು ತಡೆಯಲು ಕಾನೂನು ಕುರಿತು ಹೇಳಲಾಗಿದೆ. ಚಿತ್ರದಲ್ಲಿ ಅಸ್ಪೃಶ್ಯತೆಯನ್ನು ನಿವಾರಿಸಲು ಕಾನೂನು ಜಾರಿ ಮಾಡುವ ಜೊತಗೆ ಮೇಲ್ಜಾತಿಯ ಪ್ರಗತಿ ಪರರ ಸಹಕಾರ ಅತಿಮುಖ್ಯ ಎಂಬುದನ್ನು ಸಮಾನತೆಯಕಡೆಗೆ ಚಿತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ : ಮಂಗಳೂರು- ಮೈಸೂರು ವಿಮಾನಯಾನ ಆರಂಭ: ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ

ಜೊತೆಗೆ ಕುಡಿತದ ಚಟ ತೊರೆಯುವಂತೆಪ್ರೋತ್ಸಾಹಿಸುವ, ಶಿಕ್ಷಣದ ಮಹತ್ವ,ಸರ್ಕಾರದ ಸವಲತ್ತುಗಳನ್ನುಬಳಸಿಕೊಂಡು ಅಭಿವೃದ್ಧಿಸಾಧಿಸುವ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಪ್ರೇರೇಪಿಸುವ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ. ಚಿತ್ರವನ್ನು ಅನಂತರಾಯಪ್ಪ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹನುಮಂತರಾಜು, ಮಂಡ್ಯ ಜಯರಾಂ, ಲೋಕೇಶ್‌, ಮಂಜುಳ ಪುಟ್ಟರಾಜು ಸೇರಿದಂತೆಅನೇಕರು ನಟಿಸಿದ್ದಾರೆ. ರವೀಶ್‌ ಅವರ ಸಂಗೀತ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next