Advertisement

ಎಸ್‌ಪಿ ತೊರೆದ ನೀರಜ್‌

12:38 AM Jul 16, 2019 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ದಿ| ಚಂದ್ರಶೇಖರ್‌ ಪುತ್ರ ನೀರಜ್‌ ಶೇಖರ್‌ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಮಾಜವಾದಿ ಪಕ್ಷದಿಂದ ಅವರು ಮೇಲ್ಮನೆಗೆ ಆಯ್ಕೆಯಾಗಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎನ್ನುವುದು ಅವರ ಆರೋಪ. ಶೇಖರ್‌ ರಾಜೀನಾಮೆ ಯನ್ನು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅಂಗೀಕರಿಸಿದ್ದಾರೆ. 2020ರ ನವೆಂಬರ್‌ ವರೆಗೆ ಅವರ ಸದಸ್ಯತ್ವದ ಅವಧಿ ಇತ್ತು. ಲೋಕಸಭೆ ಚುನಾವಣೆಯಲ್ಲಿ ಬಲಿಯಾದಿಂದ ಸ್ಪರ್ಧಿಸಲು ಅವಕಾಶ ಕೇಳಿದ್ದಾಗ ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌ ತಿರಸ್ಕರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next