Advertisement
ಸತತ ಮಳೆಯಿಮದ ರವಿವಾರ ರಾತ್ರಿಯ ಬಹುತೇಕ ಪಂದ್ಯಗಳು ಮುಚ್ಚಿದ ಚಾವಣಿಯಡಿಯಲ್ಲಿ ನಡೆದವು. ಇಂಥ ಒಂದು ಜಿದ್ದಾಜಿದ್ದಿ ಮೇಲಾಟದಲ್ಲಿ ಸ್ಪೇನಿನ 12ನೇ ಶ್ರೇಯಾಂಕದ ಪಾಬ್ಲೊ ಕರೆನೊ ಬುಸ್ಟ ಕೆನಡಾದ 18ರ ಹರೆಯದ ಆಟಗಾರ ಡೆನ್ನಿಸ್ ಶಪೊವಲೋವ್ ಅವರನ್ನು 3 ಸೆಟ್‌ಗಳ ಟೈ-ಬ್ರೇಕರ್‌ನಲ್ಲಿ ಮಣಿಸುವಲ್ಲಿ ಯಶಸ್ವಿಯಾದರು. ಬುಸ್ಟ ಗೆಲುವಿನ ಅಂತರ 7-6 (2), 7-6 (4), 7-6 (3). ಇದು ಬುಸ್ಟ ಅವರ 2ನೇ ಕ್ವಾರ್ಟರ್ ಫೈನಲ್. ಫ್ರೆಂಚ್ ಓಪನ್‌ನಲ್ಲೂ ಅವರು ಕ್ವಾರ್ಟರ್ ಫೈನಲ್ ತನಕ ಬಂದಿದ್ದರು.
Related Articles
ಅಮೆರಿಕದ 17ನೇ ಶ್ರೇಯಾಂಕದ ಸ್ಯಾಮ್ ಕ್ವೆರ್ರಿ ಅವರದು ಸುಲಭ ಗೆಲುವು. ಜರ್ಮನಿಯ 23ನೇ ಶ್ರೇಯಾಂಕದ ಮಿಶಾ ಜ್ವೆರೇವ್ ವಿರುದ್ಧ ಕ್ವೆರ್ರಿ 6-2, 6-2, 6-1 ಅಂತರದ ಜಯ ಸಾಧಿಸಿದರು. ಕಳೆದೆರಡು ವರ್ಷ ಮೊದಲ ಸುತ್ತಿನ ಗಡಿ ದಾಟದೇ ಹೋಗಿದ್ದ ಕ್ವೆರ್ರಿ ಇದೇ ಮೊದಲ ಬಾರಿಗೆ ತವರಿನ ಗ್ರ್ಯಾಸ್ಲಾಮ್‌ನಲ್ಲಿ ಕ್ವಾರ್ಟರ್ ಫೈನಲ್ ಕಾಣುತ್ತಿದ್ದಾರೆ.
ಸ್ಯಾಮ್ ಕ್ವೆರ್ರಿ ಅವರ ಕ್ವಾರ್ಟರ್ ಫೈನಲ್ ಸ್ಪರ್ಧಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್. ಅವರು 6-4, 6-3, 6-7 (4-7), 6-4 ಅಂತರದಿಂದ ಇಟಲಿಯ ಪೌಲೊ ಲೊರೆಂಜಿ ವಿರುದ್ಧ ಜಯ ಸಾಧಿಸಿದರು.
Advertisement