Advertisement
ಕೊಪ್ಪಳದಿಂದ ಹೊಸಪೇಟೆ ಹಾದಿಯಲ್ಲಿ 17 ಕಿ.ಮೀ.ಕ್ರಮಿಸಿದರೆ ಗಿಣಗೇರಾ ಗ್ರಾಮಕ್ಕೆ ಹೊಂದಿಕೊಂಡಂತೆ ರಸ್ತೆಯ ಬಲ ಭಾಗದಲ್ಲಿ ರುದ್ರಾಪುರ ಅರಣ್ಯ ಪ್ರದೇಶವಿದೆ. ಅಲ್ಲಿ ನೀರಿನಿಂದ ದಂಡಿಗೆ ಬಂದು ಬಾಯಿ ತೆರೆದುಕೊಂಡು, ಬಿಸಿಲು ಕಾಯಿಸುತ್ತಿರುವ ಮೊಸಳೆಗಳು, ದೊಡ್ಡ ಕಲ್ಲಬಾವಿ, ಮರಿಯನ್ನು ಮುದ್ದಾಡುತ್ತಿರುವ ಆನೆಗಳು,ಬೆದರಿದ ಚಿಗರಿಗಳ ಹಿಂಡು, ಬೇಟೆಯಾಡುತ್ತಿರುವ ತೋಳ, ಹುಲಿ, ೌಹಾರಿ ಕತ್ತೆತ್ತಿ ಆತಂಕದಿಂದ ಅತ್ತಿತ್ತ ನೋಡುತ್ತಿರುವ ಹರಣಿಗಳು, ಕಡವೆಗಳು… ಹೀಗೆ ಕಾಡಿನಿಂದ ನಾಡಿನ ಪ್ರಾಣಿಗಳೆಲ್ಲಾ ನಾಡಿಗೆ ಬಂದು ಬಿಟ್ಟಿವೆಯೇನೋ ಅನಿಸುತ್ತವೆ. ಇಷ್ಟೆಲ್ಲಾ ಪ್ರಾಣಿಗಳು ಎಲ್ಲಿಂದ ಬಂದವು ?
ಇವೆಲ್ಲ ಜೀವಂತ ಪ್ರಾಣಿಗಳಲ್ಲ. ಕುರುಚಲು ಕಾಡಿನ ಗಿಡಗಳ ನಡುವೆ ಅಲ್ಲಲ್ಲಿ ನಿಲ್ಲಿಸಿರುವ ಪ್ರಾಣಿಗಳ ಪ್ರತಿಕೃತಿಗಳು. ಇದುವೇ ಸಾಲು ಮರದ ತಿಮ್ಮಕ್ಕ ವೃಕ್ಷ$ ಉದ್ಯಾನವನ . ಈ ಮರೋದ್ಯಾನ ಪ್ರದೇಶವನ್ನು ಆಕರ್ಷಕ ವಿನ್ಯಾಸದ ಗೇಟ್ ಸ್ವಾಗತಿಸುತ್ತದೆ. ಬಿರುಬಿಸಿಲಿನ ನಾಡಲ್ಲಿ ಮರೋದ್ಯಾನ ನಿರ್ಮಾಣ ಸ್ವಾಗತಾರ್ಹ. ಫ್ಯಾಕ್ಟರಿಗಳ ದಟ್ಟ ಹೊಗೆ, ಧೂಳುಗಳ ನಡುವೆ ಹಸಿರು ಚಿಗುರುವುದೇ ಕಷ್ಟ. ಈ ಬೆಟ್ಟ ಪ್ರದೇಶದಲ್ಲಿ ನೀರಿಗೂ ಬರ. ಈ ಪ್ರತಿಕೂಲ ಸವಾಲುಗಳ ನಡುವೆಯೂ ಅರಣ್ಯ ಬೆಳೆಸುವ, ಉದ್ಯಾನ ನಿರ್ಮಿಸುವ ಪ್ರಯತ್ನ ಯಶಸ್ಸು ಕಂಡಿದೆ.
Related Articles
Advertisement
ಮರ ಕಡಿಯಬೇಡಿ ಎಂಬ ಸಂದೇಶ ಸಾರುವ ಶಿಲ್ಪ ಮಾರ್ಮಿಕವಾಗಿದೆ.ಕೊಡಲಿ ಎತ್ತಿದ ವ್ಯಕ್ತಿಯನ್ನು ತಾಯಿ-ಮಗ ಮರವನ್ನು ತಬ್ಬಿಕೊಂಡು ಕಡಿಯಬೇಡ ಎಂದು ಬೇಡುತ್ತಿದ್ದಾರೆ. ಮುಂದೆ ಶಾಲಾ ಮಕ್ಕಳ ಸಮವಸ್ತ್ರದಲ್ಲಿರುವ ಪುಟಾಣಿಗಳು ಮರವನ್ನು ಅಪ್ಪಿಕೊಂಡು ನಿಂತಿವೆ. ಈ ದೃಶ್ಯಗಳು ಪ್ರವಾಸಿಗರ ಮನ ಕಲಕದೇ ಬಿಡವು. ಸಾಲು ಮರದ ತಿಮ್ಮಕ್ಕನ ಹೆಸರಿಟ್ಟಿರುವ ಸಾರ್ಥಕತೆಯನ್ನು ಇವು ಸಾರಿ ಸಾರಿ ಹೇಳುತ್ತವೆ. ರಂಗಮಂದಿರದ ಮುಂದೆ ದೊಡ್ಡ ಕÇÉಾವೆ ಇದೆ. ಅದರ ಮುಂದೆ ನೀರು ತುಂಬಿದ ಕೊಳ.
ಕೊಳದ ದಂಡೆಯಲ್ಲಿ ಬಾಯಿ ತೆರೆದು ಬೇಟೆಗಾಗಿ ಕಾದಿರುವ ಮೊಸಳೆಗಳ ಮೂರ್ತಿಗಳಿವೆ. ಕೊಳದ ಮಧ್ಯದಲ್ಲೊಂದು ಮರ, ಭೂಮಂಡಲವನ್ನೇ ಎತ್ತಿ ಹಿಡಿದಿರುವ ದೃಶ್ಯ ಸುಂದರವಾಗಿದೆ. ಭೂಮಂಡಲವನ್ನು ಹಸಿರೆಲೆಗಳು ಮುತ್ತಿಕೊಂಡಿವೆ. ಹಸಿರಿದ್ದರೆ ಭೂಮಿಯ ಮೇಲೆ ಉಸಿರು ಎಂಬ ಸಂದೇಶವನ್ನು ಸಾರುವಂತೆ. ರಂಗಮಂದಿರದ ಬಯಲಿನ ಎಡಕ್ಕೆ ಮರಕ್ಕೆ ಸುತ್ತಿಹಾಕಿಕೊಂಡು ಬಾಯಿ ತೆರದಿರುವ ಅನಕೊಂಡ ಎಂಥವರಿಗೂ ಭಯ ಹುಟ್ಟಿಸುತ್ತದೆ. ಕುರುಚಲು ಕಾಡಿನ ನಡುವೆ ಸೀಳಿದಂತೆ ಕಾಣುವ ದಾರಿಯಲ್ಲಿ ಸಾಗಿದರೆ ಪ್ರತಿಕೃತಿಗಳ ಪ್ರಾಣಿ ಲೋಕ ಮಕ್ಕಳಿಂದ ಮುದುಕರವರೆಗೆ ಎಲ್ಲರನ್ನೂ ರಂಜಿಸುವುದು. ಬೃಹತ್ ಬೆಟ್ಟದ ಬ್ಯಾಕ್ ಡ್ರಾಪ್‌ನಲ್ಲಿ ಇಡೀ ಮರೋದ್ಯಾನ ,ಉದ್ಯಾನದ ಒಳಗಿರುವ ಗರಿಬಿಚ್ಚಿ ಹರಡಿರುವ ಹಚ್ಚ ಹಸುರಿನ ಗಿಡಗಳು,ಕಿರುದಾರಿಗಳು,ಕಾಡುಪ್ರಾಣಿಗಳ ದೃಶ್ಯಾವಳಿಗಳು ಬಿಸಿಲೂರಿನಲ್ಲಿರುವುದನ್ನೇ ಮರೆಸುತ್ತವೆ. ಈ ಮರೋದ್ಯಾನಕ್ಕೆ ಶಿಗ್ಗಾವಿ ಗೋಟಗೋಡಿ ಬಳಿಯ ರಾಕ್ ಗಾರ್ಡನ್ ರುವಾರಿ ಸೊಲಬಕ್ಕನವರ ಮಾರ್ಗದರ್ಶನ ಮಾಡಿ¨ªಾರೆ. ಕಡಿ,ಕಬ್ಬಿಣ, ಸಿಮೆಂಟ…, ಮರಳು, ಇಟ್ಟಿಗೆ ಬಳಸಿ ವಿಭಿನ್ನ ಶೈಲಿಯಲ್ಲಿ ನಿರ್ಮಾಣಗೊಂಡಿರುವುದು ಈ ‘ಟ್ರೀ-ಪಾರ್ಕ್ ‘ನ ವಿಶೇಷ. ಮಕ್ಕಳನ್ನು ಕರೆದುಕೊಂಡು ಈ ಮರೋದ್ಯಾನಕ್ಕೆ ಹೋಗಲು ಅಡ್ಡಿಯಿಲ್ಲ. ಮಕ್ಕಳು ಕುತೂಹಲಕ್ಕೆ ಪ್ರಾಣಿಗಳನ್ನು ಮುಟ್ಟುವುದು,ತಟ್ಟುವುದು, ಜಗ್ಗಾಡುವುದನ್ನು ಮಾಡದಂತೆ ಪಾಲಕರು ಕಾಳಜಿ ವಹಿಸಬೇಕು. ಸೆಕ್ಯುರಿಟಿಗಳ ಸೇವೆ ಇರದಿದ್ದರಿಂದಾಗಿ ಕೆಲವು ಪ್ರಾಣಿಗಳು ಊನಗೊಂಡಿವೆ. ಪ್ರವೇಶ ಫೀ ಪಡೆಯುತ್ತಿರುವ ಸರಕಾರ ಇವುಗಳ ರಕ್ಷ$ಣೆಯತ್ತ ಗಮನ ಹರಿಸಬೇಕು. ಈ ಕೈಕಂಕರ್ಯಕ್ಕೆ ಸಾರ್ವಜನಿಕರೂ ಸಹಕರಿಸಬೇಕು.ಅಂದಾಗ ಮಾತ್ರ ಇದು ಬಹು ಕಾಲ ಬಾಳೀತು! ಬೆಳಗೀತು !! ಡಾ.ಕರವೀರಪ್ರಭು ಕ್ಯಾಲಕೊಂಡ