ಕೊರಟಗೆರೆ: ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ವತಿಯಿಂದ ಏರ್ಪಡಿಸಿದ್ದ ನಾಡಿಗೆ ನಾಯಕ ಡಾ.ಜಿ.ಪರಮೇಶ್ವರ್ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕನವರನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಸಾರ್ವಜನಿಕರ ಪರವಾಗಿ ಗೌರವಿಸಿ ಅಭಿನಂದಿಸಿದರು.
ಕೊರಟಗೆರೆ ಪಟ್ಟಣದ ಸರ್ಕಾರಿ ಜೂನಿಯರ್ ಮೈದಾನದಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ವತಿಯಿಂದ ಡಾ.ಪುನೀತ್‌ರಾಜ್‌ಕುಮಾರ್ ಅವರ ಸ್ಮರಣಾರ್ಥ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಗಾಯಕಿ ಡಾ.ಶಮಿತಾಮಲ್ನಾಡ್ ರವರ ಸಂಗೀತ ರಸ ಸಂಜೆ ಹಾಗೂ ಡಾ.ಜಿ.ಪರಮೇಶ್ವರ್ ರವರ ನಾಡಿಗೆ ನಾಯಕ ಡಾ.ಜಿ.ಪರಮೇಶ್ವರ್ ರವರ ದ್ವನಿಸುರಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾಲುಮರದ ತಿಮ್ಮಕ್ಕ ನವರನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ರವರು ಕ್ಷೇತ್ರದ ಜನತೆಯ ಪರವಾಗಿ ಗೌರವಿಸಿ ನಂತರ ಧ್ವನಿಸುರಳಿ ಬಿಡುಗಡೆಮಾಡಿ ಮಾತನಾಡಿ ಅವರ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿ ಧ್ವನಿಸುರುಳಿ ಬಿಡುಗಡೆ ಮಾಡಿ ನಗುತಾ ರಂಗನಾಥ್‌ಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕುಣಿಗಲ್ ಬಿದನಗೆರೆ ಶನಿಮಹಾತ್ಮ ಹಾಗೂ ವಿಶ್ವವಿಖ್ಯಾತ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಪೀಠಾಧ್ಯಕ್ಷ ಶ್ರೀ ಧನುಜಯ್‌ಸ್ವಾಮಿ, ರೇಮೊ ಚಲನಚಿತ್ರ ನಿರ್ದೆಶಕ ಪವನ್‌ಒಡೆಯರ್, ಚಿತ್ರ ನಟಿ ಆಶಿಕಾ ರಂಗನಾಥ್, ಚಿತ್ರ ನಿರ್ಮಾಪಕ ಉಮಾಪತಿ ಹಾಗೂ ರೇಮೊ ಚಿತ್ರ ತಂಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಮಾಜಿ ಅಧ್ಯಕ್ಷ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ಮುರಳೀಥರ ಹಾಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತ ರಿದ್ದರು.