Advertisement

ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

06:20 PM Mar 26, 2023 | Team Udayavani |

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆ ಕಳುಹಿಸಿದ್ದ ಆರೋಪಿಯನ್ನು ಮುಂಬೈ ಪೊಲೀಸರೊಂದಿಗೆ ರಾಜಸ್ಥಾನ ಪೊಲೀಸರು ಭಾನುವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

Advertisement

ಭಾನುವಾರ, ಜೋಧ್‌ಪುರ ಪೊಲೀಸರು ಬಾಂದ್ರಾ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಬಜರಂಗ್ ಜಗತಾಪ್ ಅವರೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ, ಆರೋಪಿ ಧಕದ್ರಾಮ್ ಅನ್ನು ರಾಜಸ್ಥಾನದಲ್ಲಿ ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ.

ಮಾರ್ಚ್ 18 ರಂದು ಬಾಂದ್ರಾ ಪೊಲೀಸ್ ಠಾಣೆಗೆ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಇಮೇಲ್ ಬಂದಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು, ಈ ಕುರಿತು ತನಿಖೆ ಕೈಗೆತ್ತಿಕೊಂಡ ಬಾಂದ್ರಾ ಪೊಲೀಸರು, ನಟನಿಗೆ ಬಂದಿರುವ ಇಮೇಲ್ ರಾಜಸ್ಥಾನದ ಜೋಧ್‌ಪುರದಿಂದ ಬಂದಿರುವುದು ಪತ್ತೆಯಾಗಿದೆ ಕೂಡಲೇ ಬಾಂದ್ರಾ ಪೊಲೀಸರು ಜೋಧ್‌ಪುರ ಪೊಲೀಸರಿಗೆ ಮಾಹಿತಿಯನ್ನು ರವಾನಿಸಿದ್ದು ಕೂಡಲೇ ಕಾರ್ಯ ಪ್ರವೃತ್ತರಾದ ಪೂಲೀಸರು ಜೋಧ್‌ಪುರದ ಸಿಯಾಗೊ ಕಿ ಧಾನಿ ನಿವಾಸಿ ಧಕದ್ರಾಮ್ ಬಿಷ್ಣೋಯ್ ಎಂಬಾತ ಇಮೇಲ್ ಕಳುಹಿಸಿದ್ದಾನೆ ಎಂದು ಪತ್ತೆಹಚ್ಚಿದ್ದಾರೆ.

ವಿಚಾರ ತಿಳಿದ ಕೊಡಲೇ ಬಾಂದ್ರಾ ಪೊಲೀಸರು ಜೋಧ್‌ಪುರಕ್ಕೆ ತೆರಳಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿ ಧಕದ್ರಾಮ್ ಬಿಷ್ಣೋಯ್ ಅನ್ನು ವಶಕ್ಕೆ ಪಡೆದು ಮುಂಬೈಗೆ ಕರೆತಂದಿದ್ದಾರೆ. ಇನ್ನು ತನಿಖೆ ಬಳಿಕವೇ ಯಾವ ಕಾರಣಕ್ಕೆ ಬೆದರಿಕೆ ಹಾಕಿದ್ದಾನೆ ಎಂಬ ವಿಚಾರ ಬೆಳಕಿಗೆ ಬರಬೇಕಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next