Advertisement

Salman Khan: ಬುಲೆಟ್‌ ಪ್ರೂಫ್ ಎಸ್‌ಯುವಿ ಖರೀದಿಸಿದ ಸಲ್ಮಾನ್‌

09:11 PM Apr 07, 2023 | Team Udayavani |

ಮುಂಬೈ:  ಪದೇಪದೆ ಹತ್ಯೆ ಬೆದರಿಕೆ ಕರೆಗಳು ಹಾಗೂ ಇ-ಮೇಲ್‌ಗ‌ಳು ಬರುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಬುಲೆಟ್‌ ಪ್ರೂಫ್ ಎಸ್‌ಯುವಿ ಕಾರು ಖರೀದಿಸಿದ್ದಾರೆ. ಹೈ-ಎಂಡ್‌ ನಿಸ್ಸಾನ್‌ ಪ್ಯಾಟ್ರೋಲ್‌ ಎಸ್‌ಯುವಿ ಕಾರನ್ನು ಸಲ್ಮಾನ್‌ ಖರೀದಿಸಿದ್ದು, ಇದನ್ನು ವಿದೇಶದಿಂದ ಭಾರತಕ್ಕೆ ತರಲಾಗಿದೆ. ಏಕೆಂದರೆ ಈ ಮಾಡೆಲ್‌ ಭಾರತದಲ್ಲಿ ಲಭ್ಯವಿಲ್ಲ. ಬುಲೆಟ್‌ ಪ್ರೂಫ್ ವ್ಯವಸ್ಥೆ ಸೇರಿದಂತೆ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಈ ಕಾರು ಹೊಂದಿದೆ. ಈಗಾಗಲೇ ಮುಂಬೈ ಪೊಲೀಸರು ಸಲ್ಮಾನ್‌ ಖಾನ್‌ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಬುಲೆಟ್‌ ಪ್ರೂಫ್ ಕಾರಿನಿಂದ ಭದ್ರತೆ ಇನ್ನಷ್ಟು ಅಧಿಕವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next