ಮುಂಬಯಿ : ಬಾಲಿವುಡ್ ನಟ ಸಲ್ಮಾನ್ ಖಾನ್ ಕೋತಿಯೊಂದರ ಮೂಲಕ ಪರಿಸರ ಪೂರಕ ಸಂದೇಶ ನೀಡಿದ್ದಾರೆ.
ಪ್ರವಾಸಕ್ಕೆ ತೆರಳಿದ್ದ ವೇಳೆ ಕೋತಿಯೊಂದಕ್ಕೆ ಸಲ್ಮಾನ್ ಖಾನ್ ಬಾಳೆ ಹಣ್ಣು ನೀಡಿದ್ದಾರೆ ಬಳಿಕ ಕುಡಿಯಲು ನೀರಿನ ಬಾಟಲನ್ನು ನೀಡಿದ್ದಾರೆ. ಕೋತಿ ಬಾಟಲಿ ನೀರನ್ನು ಕುಡಿಯಲು ನಿರಾಕರಿಸಿದೆ, ಬಳಿಕ ಸಲ್ಮಾನ್ ಅವರು ಲೋಟದಲ್ಲಿ ನೀಡಿದ ನೀರನ್ನು ಕುಡಿದಿದೆ.
ಈ ವಿಡಿಯೋವನ್ನು ಸಲ್ಮಾನ್ ಖಾನ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಹಮಾರಾ ಭಜರಂಗಿ ಭಾಯಿಜಾನ್ ಬಾಟಲ್ ಮೇ ಪಾನಿ ನಹೀ ಪಿತಾ ಹೇ…(ನಮ್ಮ ಭಜರಂಗಿ ಭಾಯಿಜಾನ್ ಬಾಟಲಿ ನೀರು ಕುಡಿಯುವುದಿಲ್ಲ) ಎಂದು ಬರೆದಿದ್ದಾರೆ.
ಕೋತಿ ಇರುವ ವಿಡಿಯೋ ಫನ್ನಿ ಎನಿಸಬಹುದು ಆದರೆ ಇದರಲ್ಲಿ ಪ್ಲ್ರಾಸ್ಟಿಕ್ ಬಾಟಲಿಗಳನ್ನು ಬಳಸಬೇಡಿ ಎನ್ನುವ ಸಂದೇಶ ಅಡಗಿದೆ.
ಸಲ್ಮಾನ್ ಖಾನ್ ಅವರು ಸುಲ್ತಾನ್ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಚಿತ್ರ 150 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.