ಮುಂಬೈ : ವಿಶಾಲ ಹೃದಯಿ ಸಲ್ಮಾನ್ ಖಾನ್ ಕೋವಿಡ್ ಎರಡನೇ ಅಲೆಯು ಸೃಷ್ಟಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಸದ್ದಿಲ್ಲದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕೋವಿಡ್ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವ ಸಲ್ಲು ಭಾಯ್, ಪಿಡುಗಿನಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೂ ನೆರವಿನ ಹಸ್ತ ಚಾಚಿದ್ದಾರೆ.
ಇತ್ತೀಚಿಗಷ್ಟೆ ಸುಮಾರು 5000 ಜನರಿಗೆ ಆಹಾರ ಒದಗಿಸಿದ್ದ ಸಲ್ಮಾನ್ ಖಾನ್, ಇದೀಗ ಕರ್ನಾಟಕ ಮೂಲದ ಬಾಲಕನೋರ್ವನ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ.
ಸಲ್ಮಾನ್ ಖಾನ್ ಅವರ ಆಪ್ತ, ಯುವ ಸೇನಾ ಮುಖಂಡ ರಾಹುಲ್.ಎಸ್. ಕನಲ್ ಮಾಹಿತಿ ನೀಡಿರುವ ಪ್ರಕಾರ, ಕೋವಿಡ್‍ಗೆ ತಂದೆಯನ್ನು ಕಳೆದುಕೊಂಡು ಅನಾಥವಾಗಿರುವ ಬಾಲಕನಿಗೆ ನೆರವಿನ ಹಸ್ತ ಚಾಚಿದ್ದಾರಂತೆ ಸಲ್ಮಾನ್. ಆತನ ಮನೆಗೆ ರೇಷನ್ ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲವನ್ನು ಒದಗಿಸಿಕೊಟ್ಟಿದ್ದಾರಂತೆ. ಇದು ಕೇವಲ ತಾತ್ಕಾಲಿಕ ನೆರವು ಅಲ್ಲ, ಬದಲಾಗಿ ಆ ಬಾಲಕನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಸಲ್ಮಾನ್ ಖಾನ್, ಅವನ ಶಿಕ್ಷಣದ ಸಂಪೂರ್ಣ ಹೊಣೆ ತಮ್ಮ ಹೆಗಲಿಗೆ ಹಾಕಿಕೊಂಡಿದ್ದಾರೆ. ಮುಂದಿನ ದಿನಗಗಳಲ್ಲಿ ಅವನಿಗೆ ಅಗತ್ಯವೆನ್ನಿಸುವ ಎಲ್ಲವನ್ನೂ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಹುಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೆ ಸಲ್ಮಾನ್ ನಟಿಸಿರುವ ‘ರಾಧೆ: ಯುವರ್ ಮೋಸ್ಟರ್ ವಾಂಟೆಡ್ ಭಾಯ್’ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ದಿಶಾ ಪಠಾಣಿ ನಟಿಸಿದ್ದಾರೆ. ರಣದೀಪ್ ಹೂಡಾ ಹಾಗೂ ಜಾಕಿ ಶ್ರಾಫ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಮಡಿದ್ದಾರೆ.