Advertisement

ಕೋವಿಡ್ ಸಂಕಷ್ಟ : ಬಡ ರೋಗಿಗಳ ನೆರವಿಗೆ ನಿಂತ ನಟ ಸಲ್ಮಾನ್ ಖಾನ್  

07:08 PM May 22, 2021 | Team Udayavani |

ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಕೋವಿಡ್ ರೋಗಿಗಳ ಪಾಲಿಗೆ ಆಪತ್ಬಾಂಧವ ಆಗಿದ್ದಾರೆ. ಬಡರೋಗಿಗಳ ಚಿಕಿತ್ಸೆಗಾಗಿ 500 ಆಮ್ಲಜನಕದ ಸಾಂದ್ರಕಗಳನ್ನು ನೀಡಿದ್ದಾರೆ.

Advertisement

ದೇಶದಲ್ಲಿ ಕೋವಿಡ್ ಎರಡನೇ ಅಲೆ ಶುರುವಾದಾಗಿನಿಂದ ಪರೋಪಕಾರಿ ಕೆಲಸ ಮಾಡುತ್ತಿರುವ ಸಲ್ಲು ಭಾಯ್, ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕರಿಗಾಗಿ ಅನ್ನ ದಾಸೋಹ ಮಾಡುತ್ತಿದ್ದಾರೆ. ನಿತ್ಯ 5000 ಕ್ಕೂ ಹೆಚ್ಚು ಜನರ ಹಸಿವು ನೀಗಿಸುತ್ತಿದ್ದಾರೆ.  ಇದೀಗ ಕೋವಿಡ್ ರೋಗದಿಂದ ಬಳಲುತ್ತಿರುವ ಬಡವರ ಚಿಕಿತ್ಸೆಗೆ ನೆರವಾಗಿದ್ದಾರೆ.

ಶಾಸಕ ಬಾಬಾ ಸಿದ್ದಿಕ್ ಹಾಗೂ ಅವರ ಮಗ ಜೀಶಾನ್ ಸಿದ್ದಿಕ್  ಜೊತೆ ಸೇರಿ 500 ಆಕ್ಸಿಜನ್ ಸಾಂದ್ರಕಗಳನ್ನು ನೀಡಿದ್ದಾರೆ.   ಬುಧವಾರ ಇವು ಮುಂಬೈ ತಲುಪಿವೆ .  ಈ ಎಲ್ಲಾ ಆಕ್ಸಿಜನ್ ಸಾಂದ್ರಕಗಳನ್ನು ಪೋಲ್ಯಾಂಡ್, ದುಬೈ, ಯುಕೆಯಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಮೊದಲು ತೀರಾ ಅವಶ್ಯಕತೆ ಇರುವ ಮುಂಬೈನ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ತಲುಪಿಸುತ್ತೇವೆ. ಜೊತೆಗೆ ಮಹಾರಾಷ್ಟ್ರದ ವಿವಿಧ ಭಾಗಗಳಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಜೊತೆಗೆ ಅಕಸ್ಮಾತ್ ಇನ್ನಿತರ ರಾಜ್ಯಗಳಾದ ಗೋವಾ, ಬಿಹಾರ ರಾಜ್ಯಗಳಿಗೆ ಆಕ್ಸಿಜನ್ ಅವಶ್ಯಕತೆ ಇದ್ದರೆ ಯಾವುದೇ ಹಣವಿಲ್ಲದೇ ಉಚಿತವಾಗಿ ಕಳುಹಿಸಿಕೊಡುತ್ತೇವೆ ಎಂದು ಎಂದು ಬಾಬಾ ಸಿದ್ದಿಕ್ ಮಾಹಿತಿ ನೀಡಿದ್ದಾರೆ.

ಆಮ್ಲಜನಕ ಸಾಂದ್ರಕಗಳ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಸಲ್ಮಾನ್ ಅವರು ಅವಶ್ಯಕತೆ ಇದ್ದವರು ಈ ಮೊಬೈಲ್ ನಂಬರ್​ಗೆ 8451869785 ಸಂಪರ್ಕಿಸಲು ತಿಳಿಸಿದ್ದು, ಉಚಿತವಾಗಿ ನೀಡಲಿದ್ದೇವೆ ಎಂದು ಹೇಳಿದ್ದಾರೆ. ಜೊತೆಗೆ ಸಾಂದ್ರಕಗಳನ್ನು ತರಿಸಿರುವ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next