Advertisement

ತಾಲಿಬಾನ್ ಉಗ್ರರಿಗೆ ಸಡ್ಡು ಹೊಡೆದು ಪಡೆ ಕಟ್ಟಿದ್ದ ಮಹಿಳಾ ಗವರ್ನರ್ ಸಲೀಮಾ ಸೆರೆ!

01:19 PM Aug 18, 2021 | Team Udayavani |

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ವಿರುದ್ಧವೇ ಸಡ್ಡು ಹೊಡೆದಿದ್ದ ಅಫ್ಘಾನ್ ನ ಪ್ರಥಮ ಮಹಿಳಾ ಗವರ್ನರ್ ಸಲೀಮಾ ಮಜಾರಿಯನ್ನು ತಾಲಿಬಾನ್ ಉಗ್ರರು ಸೆರೆಹಿಡಿದಿದ್ದು, ಸದ್ಯ ಸಲೀಮಾ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ವಿಷಯ ತಿಳಿದು ಬಂದಿಲ್ಲ ಎಂದು ವರದಿ ತಿಳಿಸಿದೆ.

Advertisement

ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗುತ್ತಿದ್ದಂತೆಯೇ ಹಲವು ಮಂದಿ ರಾಜಕೀಯ ಮುಖಂಡರು ದೇಶ ಬಿಟ್ಟು ಪಲಾಯನವಾಗಿದ್ದರು. ಆದರೆ ಸಲೀಮಾ ಗವರ್ನರ್ ಆಗಿದ್ದ ಚಹಾರ್ ಜಿಲ್ಲೆ ತಾಲಿಬಾನ್ ವಶಕ್ಕೆ ಪಡೆದ ನಂತರ ಬಾಲ್ಕ್ ಪ್ರಾಂತ್ಯದಲ್ಲಿ ಸಲೀಮಾ ಅವರನ್ನು ಸೆರೆ ಹಿಡಿಯಲಾಯಿತು ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:ಸುನಂದಾ ಪುಷ್ಕರ್ ಸಾವಿನ ಪ್ರಕರಣ: ಶಶಿ ತರೂರ್ ಎಲ್ಲಾ ಆರೋಪದಿಂದ ಮುಕ್ತ: ದೆಹಲಿ ಕೋರ್ಟ್

ವರದಿಯ ಪ್ರಕಾರ, ತಾಲಿಬಾನ್ ಬಂಡುಕೋರರು ಇಡೀ ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದ ನಂತರ ಗವರ್ನರ್ ಸಲೀಮಾ ಮಜಾರಿಯನ್ನು ಬಂಧಿಸಿದ್ದಾರೆ. ಏತನ್ಮಧ್ಯೆ ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಕೂಡಾ ದೇಶ ಬಿಟ್ಟು ಪರಾರಿಯಾಗಿದ್ದರು.

Advertisement

ಕೆಲವು ವರ್ಷಗಳ ಹಿಂದೆ ಸಲೀಮಾ ಮಜಾರಿ ಅಫ್ಘಾನಿಸ್ತಾನ ಕಂಡ ಮೂವರು ಮಹಿಳಾ ರಾಜ್ಯಪಾಲರಲ್ಲಿ ಒಬ್ಬರಾಗಿದ್ದಾರೆ. ಅಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯಗಳನ್ನು ತಾಲಿಬಾನ್ ಬಂಡುಕೋರರು ಯಾವುದೇ ವಿರೋಧ, ಹಿಂಸೆ ಇಲ್ಲದೆ ವಶಪಡಿಸಿಕೊಂಡಿದ್ದರು. ಆದರೆ ಬಾಲ್ಕ ಪ್ರಾಂತ್ಯದ ಚಹಾರ್ ಕಿಂಟ್ ನಲ್ಲಿ ಯಾವುದೇ ಸಾವು ನೋವು ಸಂಭವಿಸದಂತೆ ಉಳಿಸಿಕೊಳ್ಳಲು ಸಲೀಮಾ ಪ್ರಯತ್ನಿಸಿದ್ದರು.

ಮಜಾರಿಯ ಹಲವು ಭಾಗ ತಾಲಿಬಾನ್ ಹಿಡಿತದಲ್ಲಿದ್ದು, ಇನ್ನುಳಿದ ಪ್ರದೇಶವನ್ನು ತಾಲಿಬಾನ್ ವಶಕ್ಕೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಲೀಮಾ ತಾಲಿಬಾನ್ ವಿರುದ್ಧ ಹೋರಾಡಲು ಜನರನ್ನು ನೇಮಕ ಮಾಡಿಕೊಳ್ಳುವುದರಲ್ಲಿಯೇ ಹೆಚ್ಚಿನ ಸಮಯ ಕಳೆದಿದ್ದರು. ಆ ನಿಟ್ಟಿನಲ್ಲಿ ರೈತರು, ಕಾರ್ಮಿಕರು, ಕುರಿಗಾಹಿಗಳು ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಸೇರ್ಪಡೆಗೊಂಡಿದ್ದರು. ನಮ್ಮ ಜನರ ಕೈಯಲ್ಲಿ ಗನ್ ಗಳಿಲ್ಲ, ಆದರೂ ತಮ್ಮ ದನ, ಕುರಿ, ಭೂಮಿಯನ್ನು ಮಾರಾಟ ಮಾಡಿ ಶಸ್ತ್ರಾಸ್ತ್ರವನ್ನು ಖರೀದಿಸುತ್ತಿದ್ದಾರೆ ಎಂದು ಸಲೀಮಾ ತಿಳಿಸಿದ್ದರು.

ಯಾವುದೇ ಸಂಬಳ ಪಡೆಯದೇ ಹಗಲು, ರಾತ್ರಿ ಅವರೆಲ್ಲಾ ಪಹರೆ ಕಾಯುತ್ತಿದ್ದ ಪರಿಣಾಮ ತಾಲಿಬಾನ್ ಉಗ್ರರಿಗೆ ಇನ್ನೂ ಮಝಾರಿ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈಯದ್ ನಜೀರ್ ವಿಶ್ವಾಸವ್ಯಕ್ತಪಡಿಸಿದ್ದರು. ಜನರ ಬೆಂಬಲದಿಂದಾಗಿ ನಮಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಇತ್ತೀಚೆಗಷ್ಟೇ ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ನಡೆಸುವ ವೇಳೆ ಸಲೀಮಾ ಕಾಲಿಗೆ ಗುಂಡೇಟು ಕೂಡಾ ಬಿದ್ದಿತ್ತು.

ಆದರೂ ಧೈರ್ಯ ಕಳೆದುಕೊಳ್ಳದ ಸಲೀಮಾ ಜನರನ್ನು ಸಂಘಟಿಸುವ ಕೆಲಸ ಮುಂದುವರಿಸಿದ್ದರು. ಇದಕ್ಕೆ ಕಾರಣ ತಾಲಿಬಾನ್ ಆಡಳಿತದ ಸಂದರ್ಭದಲ್ಲಾದ ಭಯಾನಕ ಅನುಭವಗಳು ಇನ್ನೂ ಮಾಸಿಲ್ಲ ಎಂಬುದಾಗಿ ಚಾರ್ಕಿಂಟ್ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು. ಒಂದು ವೇಳೆ ತಾಲಿಬಾನ್ ಉಗ್ರರು ಮತ್ತೊಮ್ಮೆ ವಾಪಸ್ ಅಧಿಕಾರಕ್ಕೆ ಬಂದರೆ ಅವರು ಮಹಿಳೆಯೊಬ್ಬಳು ಗವರ್ನರ್ ಹುದ್ದೆಯಲ್ಲಿರುವುದನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸತ್ಯದ ಅರಿವಿದೆ ಎಂದು ಸಲೀಮಾ ಅಭಿಪ್ರಾಯವ್ಯಕ್ತಪಡಿಸಿದ್ದರು.!

Advertisement

Udayavani is now on Telegram. Click here to join our channel and stay updated with the latest news.

Next