ಹೊಳಲ್ಕೆರೆ : ಚಿತ್ರದುರ್ಗ ಜಿಲ್ಲೆ ರಾಜ್ಯದ ಅರಣ್ಯ ಪ್ರದೇಶದಲ್ಲಿ ಆಕ್ರಮವಾಗಿ ವನ್ಯ ಪ್ರಾಣಿಗಳ ಚರ್ಮ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ 6 ಮಂದಿ ನಟೋರಿಯಸ್ ಕಳ್ಳರನ್ನು ಬಂಧಿಸಲಾಗಿದೆ.
ರಾಜ್ಯ ಸೇರಿದಂತೆ ವಿವಿಧ ಕಡೆಗಳಲ್ಲಿ ಹಾಗೂ ತಾಲೂಕಿನಲ್ಲಿ ಅರಣ್ಯ ಪ್ರದೇಶದಲ್ಲಿ ಆಕ್ರಮವಾಗಿ ವನ್ಯಪ್ರಾಣೀಗಳನ್ನು ಸೇರೆ ಹಿಡಿದು ಹಾಗೂ ಕೊಂದು ಅವುಗಳ ಚರ್ಮ, ಮಾಂಸ, ಕೊಂಬು ಸೇರಿದಂತೆ ವಿವಿಧ ಭಾಗಗಳನ್ನು ಕಾನೂನು ಬಾಹಿರವಾಗಿ ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ 6ಮಂದಿ ಕಳ್ಳರ ತಂಡವನ್ನು ಹೊಳಲ್ಕೆರೆ ಹಾಗೂ ಹೊಸದುರ್ಗ ಅರಣ್ಯ ಇಲಾಖೆ ಸಿಬ್ಬಂದಿಗಳು ಪತ್ತೆ ಮಾಡಿದ್ದಾರೆ.
ಹೊಳಲ್ಕೆರೆ ಹಾಗೂ ಹೊಸದುರ್ಗ ಗಡಿಭಾಗದಲ್ಲಿರುವ ಉಪ್ಪರಿಗೆನಹಳ್ಳಿ, ಗೊಳಿಹೊಸಹಳ್ಳಿ, ಕುಮಾರನಹಳ್ಳಿ, ಕಿಟ್ಟದಹಳ್ಳಿ, ನೇರಳಕಟ್ಟೆ, ಘಟ್ಟಿಹೊಸಹಳ್ಳಿ ಸೇರಿದಂತೆ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿರುವ ಕೃಷ್ಣಂಬೃಗ, ಕಡವೆ, ಮೊಲ, ಮಳ್ಳುಹಂದಿ, ಚಿಪ್ಪು ಹಂದಿ ಸೇರಿದಂತೆ ಹಲವಾರು ಪ್ರಾಣಿಗಳನ್ನು ಬೇಟೆ ಮೂಲಕ ಕೊಂದು ಅವುಗಳ ಚರ್ಮ ವಿವಿಧ ಕಡೆಗಳ ಅಂತರಾಜ್ಯಗಳ ಕಳ್ಳರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಬಂಧಿತ ಆರೋಪಿಗಳಾಗಿರುವ ಹಿರಿಯೂರು ಶಿವಕುಮಾರ್, ಕಮತ್ತಮರಿಗುಂಟೆ ಗಿರೀಶ್, ಕಮತ್ತಮರಿಗುಂಟೆ ತಿಮ್ಮಯ್ಯ, ಅಕೀಲಾ ಎಂ.ಜಿ. ಕಮತ್ತಮರಿಗುಂಟೆ ಅಕಿಲಾ ಎಂ.ಜಿ., ಕೆರೆಹಿಂದಳಹಟ್ಟಿ ತಿಪ್ಪಯ್ಯ, ಉಳ್ಳಾರ್ತಿ ಎಸ್.ಮಂಜುನಾಥ ಇವರನ್ನು ಹೊಳಲ್ಕೆರೆ ಹಾಗೂ ಹೊಸದುರ್ಗ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದಿಸಿದ್ದು, ಅವರಿಂದ ಲಕ್ಷö್ಯಂತರ ಮೌಲ್ಯದ ಚರ್ಮ, ಕೊಂಬು ಸೇರಿದಂತೆ ವಿವಿಧ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶುಕ್ರವಾರ 6 ಜನ ಅರೋಪಿತರ ವಿರುದ್ದ ಅರಣ್ಯ ಸಶಸ್ತ್ರ ಕಾಯ್ದೆ, ವನ್ಯ ಜೀವಿ ಸಂರಕ್ಷಣಾ ಕಾಯ್ದೆ1972 ಅಡಿ ಪ್ರಕರಣ ದಾಖಲಿದೆ. ಅರೊಪಿಗಳನ್ನು ಪಟ್ಟಣದ ನ್ಯಾಯಾಲಯಕ್ಕೆ ಹಾಜುಪಡಿಸಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಡಿಸಿಎಫ್ ರಾಜಣ್ಣ, ಎಸಿಎಪ್ ಸುರೇಶ್, ಹೊಳಲ್ಕೆರೆ ಅರಣ್ಯಾಧಿಕಾರಿ ವಸಂತಕುಮಾರ್, ಹೊಸದುರ್ಗ ಅರಣ್ಯಾಧಿಕಾರಿ ಸುಜಾತ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.