ಬಂಟ್ವಾಳ: ಅಬಕಾರಿ ಇಲಾಖೆಯ ತಂಡ ಗಸ್ತು ತಿರುಗುತ್ತಿದ್ದ ವೇಳೆ ಬಿ.ಸಿ. ರೋಡಿನಲ್ಲಿ ಆಟೋ ರಿûಾ ಮೂಲಕ ಅಕ್ರಮ ಮದ್ಯ ಮಾರಾಟ ಪತ್ತೆಯಾಗಿದ್ದು, ಮದ್ಯ ಸಹಿತ ಆರೋಪಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪುತ್ತೂರು ಆರ್ಲಪದವು ದೇವಸ್ಯ ಮನೆ ನಿವಾಸಿ ದಿವಾಕರ ರೈ ಪ್ರಕರಣದ ಆರೋಪಿಯಾಗಿದ್ದು, ಆತನಿಂದ 23.400 ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಪೂರ್ವಭಾವಿ ತಯಾರಿ ಸಂಬಂಧ ಯಾವುದೇ ಅಬಕಾರಿ ಅಕ್ರಮ ಚಟುವಟಿಕೆ ನಡೆಯದಂತೆ ಮಂಗಳೂರು ಅಬಕಾರಿ ಜಂಟಿ ಆಯುಕ್ತರು ಹಾಗೂ ಅಬಕಾರಿ ಉಪ ಅಯುಕ್ತರ ಮಾರ್ಗದರ್ಶನದಲ್ಲಿ ಬಂಟ್ವಾಳ ಅಬಕಾರಿ ಉಪ ಅಧೀಕ್ಷಕಿ ಶೋಭಾ ಕೆ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್., ಅಬಕಾರಿ ಕಾನ್‌ಸ್ಟೆಬಲ್ ಸುರೇಶ ಮಾಡೀಕ, ಕೃಷ್ಣ ಅಗಸರ, ವಾಹನ ಚಾಲಕ ಕೇಶವ ಪಿ. ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
—
Related Articles
ಗಾಂಜಾ ವಶ: ಮೂವರ ವಿರುದ್ಧ ಪ್ರಕರಣ
ಬಂಟ್ವಾಳ: ಅಕ್ರಮ ಗಾಂಜಾ ದಾಸ್ತಾನಿಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗ್ರಾಮಾಂತರ ಠಾಣೆಗೆ ಸಂಬಂಧಿಸಿದಂತೆ ಮಂಗಳೂರು ಬಜಾಲ್ ನಿವಾಸಿ ತೌಸೀರ್ ಯಾನೆ ತೌಚಿ ಹಾಗೂ ಮಾರಿಪಳ್ಳ ಪಾಡಿಮನೆ ನಿವಾಸಿ ಯಾಸೀನ್ ಪ್ರಕರಣದ ಆರೋಪಿಗಳಾಗಿದ್ದು, 50 ಸಾವಿರ ರೂ. ಮೌಲ್ಯದ 905 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಗರ ಠಾಣೆಗೆ ಸಂಬಂಧಿಸಿದಂತೆ ಸಜೀಪಮೂಡ ಸುಭಾಸ್ ನಗರ ನಿವಾಸಿ ಆಸೀಫ್ ಆರೋಪಿಯಾಗಿದ್ದು, ಆತನಿಂದ 2 ಸಾವಿರ ರೂ. ಮೌಲ್ಯದ ಎಂಡಿಎಂಎ 1 ಗ್ರಾಂ, 80,600 ರೂ.ಮೌಲ್ಯದ 4.90 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.